ನವದೆಹಲಿ (ನ.15): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ತಮ್ಮ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೇವಡಿ ಮಾಡಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್‌ ರಾವತ್‌, ‘ರಾಹುಲ್‌ ಗಾಂಧಿ ಬಗ್ಗೆ ಒಬಾಮಾ ಅವರಿಗೆ ಏನು ಗೊತ್ತು?’ ಎಂದು ಪ್ರಶ್ನಿಸಿದ್ದಾರೆ. 

‘ವಿದೇಶಿ ರಾಜಕಾರಣಿಯೊಬ್ಬರು ಭಾರತದ ರಾಜಕೀಯ ನಾಯಕನ ಬಗ್ಗೆ ಅಂತಹ ಹೇಳಿಕೆ ನೀಡಬಾರದು. ಈ ಅಭಿಪ್ರಾಯದ ನಂತರ ದೇಶದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ ಅಸಹ್ಯಕರವಾಗಿದೆ. ಟ್ರಂಪ್‌ ಒಬ್ಬ ಹುಚ್ಚ ಎಂದು ನಾವು ಹೇಳುವುದಿಲ್ಲ. ಭಾರತದ ಬಗ್ಗೆ ಒಬಾಮಾಗೆ ಎಷ್ಟುಗೊತ್ತು?’ ಎಂದು ಕಿಡಿಕಾರಿದ್ದಾರೆ.

ರಾಹುಲ್ ಯೋಗ್ಯತೆಗೆ ಸವಾಲೆಸೆದ್ರೆ, ಡಾ. ಸಿಂಗ್ ಹೊಗಳಿದ ಒಬಾಮಾ! ..

ಆತ್ಮಕತೆಯಲ್ಲಿ ಒಬಾಮಾ ‘ರಾಹುಲ್‌ ಅವರು ಅಂಜಿಕೆ ಹಾಗೂ ಅಪಕ್ವತೆ ಹೊಂದಿರುವ ವ್ಯಕ್ತಿ. ರಾಹುಲ್‌ ಅವರೊಬ್ಬ ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ. ಆದರೆ ಅವರಿಗೆ ವಿಷಯ ಮೇಲೆ ಪ್ರಭುತ್ವ ಸಾಧಿಸುವ ಸಾಮರ್ಥ್ಯವಾಗಲಿ ಅಥವಾ ಉತ್ಸಾಹವಾಗಲಿ ಇಲ್ಲ’ ಎಂದಿದ್ದಾರೆ ಎಂದು ವರದಿಯಾಗಿದೆ.