Asianet Suvarna News Asianet Suvarna News

ಇತರ ಧರ್ಮಕ್ಕಿಲ್ಲದ ನಿರ್ಬಂಧ ಮರ್ಕಝ್‌ಗೆ ಮಾತ್ರ ಯಾಕೆ? ದೆಹಲಿ ಕೋರ್ಟ್ ಪ್ರಶ್ನೆ!


ಕೊರೋನಾ ವೈರಸ್ ಅಲೆ ಹೆಚ್ಚಾಗುತ್ತಿರುವ ಕಾರಣ ನಿರ್ಬಂಧಗಳು ಹೆಚ್ಚಾಗುತ್ತಿದೆ. ನೈಟ್ ಕರ್ಫ್ಯೂ, ಕಾರ್ಯಕ್ರಮಳಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರ ನಡುವೆ ದೆಹಲಿ ಹೈಕೋರ್ಟ್ ಮರ್ಕಜ್‌ಗೆ ಮಾತ್ರ ನಿರ್ಬಂಧ ವಿಧಿಸಿ ಇತರ ಧರ್ಮದ ಕಾರ್ಯಕ್ರಮಗಳಿಗೆ ಯಾಕಿಲ್ಲ ಎಂದು ಪ್ರಶ್ನಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

How can limit devotees for only Markaz Delhi High court ask government ckm
Author
Bengaluru, First Published Apr 13, 2021, 6:53 PM IST

ನವ ದೆಹಲಿ(ಏ.13): ಕೊರೋನಾ ಹೆಚ್ಚಾಗುತ್ತಿರುವ ಕಾರಣ ನಿರ್ಬಂಧಗಳು ಅನಿವಾರ್ಯವಾಗಿದೆ. ಆದರೆ ನಿರ್ಬಂಧ ಹೇರುವಲ್ಲಿ ತಾರತಮ್ಯ ಯಾಕೆ ಎಂದು ದೆಹಲಿ ಕೋರ್ಟ್ ಪ್ರಶ್ನಿಸಿದೆ. ರಂಝಾನ್ ಹಿನ್ನಲೆಯಲ್ಲಿ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಮಾಜ್ ಮಾಡಲು ಕೇಲ 20 ಮಂದಿಗೆ ಮಾತ್ರ ಅವಕಾಶ ನೀಡಿರುವುದು ಯಾಕೆ? ಇತರ ಧರ್ಮದಲ್ಲಿ ಈ ರೀತಿಯ ನಿರ್ಬಂಧ ಹೇರದೇ ಮರ್ಕಜ್‌ಗೆ ಮಾತ್ರ ಯಾಕೆ ನಿರ್ಬಂಧ ಎಂದು ದೆಹಲಿ ಕೋರ್ಟ್ ಪ್ರಶ್ನಿಸಿದೆ.

ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್; ಸರ್ಕಾರದಿಂದ ಅಧೀಕೃತ ಘೋಷಣೆ ಸಾಧ್ಯತೆ!

200 ಮಂದಿ ಪಟ್ಟಿಯಲ್ಲಿ 20 ಮಂದಿಗೆ ಅವಕಾಶ ನೀಡಲು ಸೂಚಿಸಲಾಗಿದೆ. ಇತರ ಭಾಗಗಳಿಂದ ಮರ್ಕಜ್‌ಗೆ ಆಗಮಿಸುವ ಕಾರಣ ಹೆಚ್ಚಿನ ನಿರ್ಬಂಧ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ರಂಜಾನ್‌ ದಿನಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮಸೀದಿ ಆಡಳಿತ ಮಂಡಳಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದೆ.

ಮಸೀದಿ ಆಡಳಿತ ಮಂಡಳಿ ಅಧಿಕಾರ ನೀಡಲಾಗಿದೆ. ಕೊರೋನಾ ಮಾರ್ಗಸೂಚಿ ಪಾಲನೆ, ಕೊರೋನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ನಿರ್ಬಂಧ ವಿಧಿಸಲಾಗಿದೆ. ಒಂದೇ ಬಾರಿ ಒಟ್ಟಿಗೆ ಹೆಚ್ಚಿನ ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲ್ಲ. ಇದು ಮರ್ಕಝ್‌ಗೆ ಮಾತ್ರ ಸೀಮಿತವಲ್ಲ ಎಂದು ಸರ್ಕಾರ ಹೇಳಿದೆ.

ಕಳೆದ ವರ್ಷ ಕೊರೋನಾ ವಕ್ಕರಿಸಿದ ಆರಂಭದಲ್ಲಿ ಇದೇ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಭಾರಿ ಸದ್ದು ಮಾಡಿತ್ತು. ಮರ್ಕಜ್‌ನಲ್ಲಿ ಸಭೆ ಸೇರಿದ್ದ ತಬ್ಲೀಘಿಗಳಿಂದ ದೇಶದಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ನಿರ್ಬಂಧದ ನಡುವೆ 2,000ಕ್ಕೂ ಹೆಚ್ಚು ಮಂದಿ ಸಬೆಯಲ್ಲಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios