Asianet Suvarna News Asianet Suvarna News

ಆಗಸ್ಟ್‌ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ!

ಆಗಸ್ಟ್‌ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ|  ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವ ಲಸಿಕೆ|  ಪರೀಕ್ಷಾರ್ಥವಾಗಿ 5000 ಜನರ ಮೇಲೆ ಈ ಲಸಿಕೆಯ ಪ್ರಯೋಗ ಆರಂಭಿಸಲಾಗುತ್ತದೆ

Hope to launch Oxford vaccine in India by November says Serum Institute chief
Author
Bangalore, First Published Jul 22, 2020, 9:23 AM IST

ಮುಂಬೈ(ಜು.22): ಆರಂಭಿಕ ಹಂತದಲ್ಲಿ ಕೊರೋನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಅಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿದ ಲಸಿಕೆಯು ಆಗಸ್ಟ್‌ ಅಂತ್ಯದಲ್ಲಿ ಭಾರತದಲ್ಲೂ ಲಭ್ಯವಾಗಲಿದೆ.

ಪರೀಕ್ಷಾರ್ಥವಾಗಿ 5000 ಜನರ ಮೇಲೆ ಈ ಲಸಿಕೆಯ ಪ್ರಯೋಗ ಆರಂಭಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷದ ಜೂನ್‌ನಲ್ಲಿ ಈ ಲಸಿಕೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಭಾರತೀಯ ಸೆರುಂ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಸೆರುಂ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅದರ್‌ ಪೂನಾವಾಲಾ, ‘ಮುಂದಿನ ತಿಂಗಳ ಅಂತ್ಯದಲ್ಲಿ ಕೊರೋನಾ ಲಸಿಕೆ ಪ್ರಯೋಗಕ್ಕೆ ಅಗತ್ಯವಿರುವ ಅನುಮತಿ ಪಡೆಯುತ್ತೇವೆ. ಮುಂದಿನ 1-2 ವಾರಗಳಲ್ಲಿ ಈ ಸಂಬಂಧ ಭಾರತೀಯ ಔಷಧಗಳ ನಿಯಂತ್ರಣ ಕಚೇರಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಬಳಿಕ ದೇಶದಲ್ಲೇ ಅತಿಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಪುಣೆ ಮತ್ತು ಮುಂಬೈನಲ್ಲಿ 4 ಸಾವಿರದಿಂದ 5 ಸಾವಿರ ಮಂದಿಗೆ ಈ ಲಸಿಕೆ ಹಾಕುತ್ತೇವೆ. ಆ ಬಳಿಕ ಅವರಲ್ಲಿ ಕೊರೋನಾ ನಿಯಂತ್ರಣ ಸಾಮರ್ಥ್ಯ ವೃದ್ಧಿಯಾಗಲಿದೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸಿ, ಲಸಿಕೆಯು ರೋಗಿಗಳ ಮೇಲೆ ಪ್ರಯೋಗಿಸಲು ಯೋಗ್ಯವಾಗಿದೆಯೇ ಎಂಬುದನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ.

Follow Us:
Download App:
  • android
  • ios