ಕಷ್ಟಪಟ್ಟು ಕೆಲ್ಸ ಮಾಡಿ, ಸರ್ಕಾರ ಎಲ್ಲವನ್ನೂ ಕೊಡೋಕಾಗಲ್ಲ: ಹೈಕೋರ್ಟ್

  • ಮನೆ ಇಲ್ಲದವರು ಕಷ್ಟಪಟ್ಟು ಕೆಲಸ ಮಾಡಿ
  • ಎಲ್ಲವನ್ನೂ ಸರ್ಕಾರ ಕೊಡೋಕಾಗಲ್ಲ ಎಂದ ಕೋರ್ಟ್
Homeless should work everything can't be given by govt says Bombay HC dpl

ಮುಂಬೈ(ಜು.03): ಮನೆಯಿಲ್ಲದವರು ಮತ್ತು ಭಿಕ್ಷುಕರು ಸಹ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರ ವಿಭಾಗೀಯ ಪೀಠವು ಬ್ರಿಜೇಶ್ ಆರ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅನ್ನು ವಿಚಾರಣೆ ಮಾಡಿದ್ದಾರೆ..

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ ದಿನಕ್ಕೆ ಮೂರು ಬಾರಿ ಪೌಷ್ಠಿಕ ಆಹಾರವನ್ನು, ಕುಡಿಯುವ ನೀರು, ನಗರದ ಮನೆಯಿಲ್ಲದ ವ್ಯಕ್ತಿಗಳು, ಭಿಕ್ಷುಕರು ಮತ್ತು ಬಡ ಜನರಿಗೆ ಆಶ್ರಯ ಮತ್ತು ಸ್ವಚ್ಛವಾದ ಸಾರ್ವಜನಿಕ ಶೌಚಾಲಯ ಒದಗಿಸಲು ಅರ್ಜಿಯಲ್ಲಿ ಕೇಳಲಾಗಿತ್ತು.

ಎನ್‌ಜಿಒಗಳ ಸಹಾಯದಿಂದ ಮುಂಬೈನಾದ್ಯಂತ ಅಂತಹ ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದೆ ಮತ್ತು ಸಮಾಜದ ಈ ವಿಭಾಗದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ನೀಡಲಾಗುತ್ತಿದೆ ಎಂದು ಬಿಎಂಸಿ ನ್ಯಾಯಾಲಯಕ್ಕೆ ತಿಳಿಸಿತು.

ಉತ್ತರಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆ!.

ನ್ಯಾಯಾಲಯವು ಬಿಎಂಸಿ ಸ್ಪಷ್ಟನೆ ಒಪ್ಪಿಕೊಂಡು ಅಂಗೀಕರಿಸಿದೆ. ವಿತರಣೆಯನ್ನು ಹೆಚ್ಚಿಸಲು ಹೆಚ್ಚಿನ ನಿರ್ದೇಶನ ಅಗತ್ಯವಿಲ್ಲ ಎಂದು ಹೇಳಿದೆ. ಮನೆಯಿಲ್ಲದವರು ದೇಶಕ್ಕಾಗಿ ಸಹ ಕೆಲಸ ಮಾಡಬೇಕು. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ರಾಜ್ಯದಿಂದ ಒದಗಿಸಲಾಗುವುದಿಲ್ಲ. ನೀವು ಅರ್ಜಿದಾರರು ಸಮಾಜದ ಇಂತಹ ವರ್ಗದ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದೀರಿ ಎಂದು ಹೈಕೋರ್ಟ್ ಹೇಳಿದೆ.

ಅರ್ಜಿಯಲ್ಲಿ ಕೋರಿದ ಎಲ್ಲಾ ಬೇಡಿಕೆ ಒದಗಿಸುವುದು ಜನರು ಕೆಲಸ ಮಾಡದಂತೆ ಇರಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ ನಗರ ಮತ್ತು ರಾಜ್ಯಾದ್ಯಂತ ಸಾರ್ವಜನಿಕ ಶೌಚಾಲಯಗಳು ಪ್ರಸ್ತುತ ಬಳಕೆಗೆ ಕನಿಷ್ಠ ಮೊತ್ತವನ್ನು ವಿಧಿಸುತ್ತವೆ. ಮನೆಯಿಲ್ಲದವರಿಗೆ ಅಂತಹ ಸೌಲಭ್ಯಗಳನ್ನು ಉಚಿತವಾಗಿ ಬಳಸಲು ಅನುಮತಿಸುವುದನ್ನು ಪರಿಗಣಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Latest Videos
Follow Us:
Download App:
  • android
  • ios