ಪೌರತ್ವ ತಿದ್ದುಪಡಿ ಕಾಯ್ದೆಗೆ ಈಶಾನ್ಯ ರಾಜ್ಯಗಳ ವಿರೋಧ| ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ| ಪ್ರತಿಭಟನಾಕಾರರ ಹಿಂಸಾಚಾರಕ್ಕೆ ನಲುಗಿರುವ ಈಶಾನ್ಯ ರಾಜ್ಯಗಳು| ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಮೇಘಾಲಯ ಪ್ರವಾಸ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವ| ಅಮಿತ್ ಶಾ ಶಿಲ್ಲಾಂಗ್’ನ ಈಶಾನ್ಯ ಭಾಗದ ಪೊಲೀಸ್ ಅಕಾಡಮಿ ಭೇಟಿಗೆ ಬ್ರೇಕ್| 

ನವದೆಹಲಿ(ಡಿ.13): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳು ಹಿಂಸಾಚಾರಕ್ಕೆ ನಲುಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನೆಲೆಯಲ್ಲಿ ಇದೇ ಭಾನುವಾರ(ಡಿ.15) ಮೇಘಾಲಯದ ರಾಜಧಾನಿ ಶಿಲ್ಲಾಂಗ್’ಗೆ ಭೇಟಿ ನೀಡಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೀವ್ರ ಪ್ರತಿಭಟನೆಯ ಕಾರಣಕ್ಕೆ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಪೌರತ್ವ ಕಾಯ್ದೆ: ಸುಪ್ರೀಂ ಕದ ತಟ್ಟಿದ ಕಾಂಗ್ರೆಸ್!

Scroll to load tweet…

ಶಿಲ್ಲಾಂಗ್’ನಲ್ಲಿರುವ ಈಶಾನ್ಯ ಭಾಗದ ಪೊಲೀಸ್ ಅಕಾಡಮಿಗೆ ಇದೇ ಭಾನುವಾರ ಅಮಿತ್ ಶಾ ಭೇಟಿ ನೀಡಲಿದ್ದರು. ಆದರೆ CAB ವಿರುದ್ಧದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಮಿತ್ ಶಾ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.

ಪೌರತ್ವ ಮಸೂದೆಗೆ ರಾಷ್ಟ್ರಪತಿ ಅಂಕಿತ: ಇಂದಿನಿಂದಲೇ ಕಾನೂನು ಜಾರಿ!

ಶಿಲ್ಲಾಂಗ್’ನಲ್ಲಿ ಈಗಾಗಲೇ ಕರ್ಫ್ಯೂ ವಿಧಿಸಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಇಂಟರ್’ನೆಟ್ ಸ್ಥಗಿತಗೊಳಿಸಲಾಗಿದೆ.