ನವದೆಹಲಿ(ಸೆ.13): ಎರಡು ವಾರದ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಶನಿವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

"

ಅಮಿತ್ ಶಾ ಸಂಪೂರ್ಣ ಚೇತರಿಕೆ; ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್!

55 ವರ್ಷದ ಬಿಜೆಪಿ ನಾಯಕ ಅಮಿತ್ ಶಾಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಗಸ್ಟ್ 2ರಂದು ಅವರು ಗುರುಗಾಂವ್‌ನ ಮೇದಾಂತ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದಾದ ಬಳಿಕ ಆಗಸ್ಟ್ 14ರಂದು ಕೊರೋನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಡಿಸ್ಚಾರ್ಜ್ ಆಗಿ ಮನೆಯಲ್ಲೇ ಐಸೋಲೇಟ್ ಆಗುವುದಾಗ ಅವರು ಟ್ವೀಟ್ ಮಾಡಿದ್ದರು.

ಆದರೆ ಆಯಾಸ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಗಸ್ಟ್ 18 ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, 13 ದಿನಗಳ ಬಳಿಕ ಆಗಸ್ಟ್  31ರಂದು ಡಿಸ್ಚಾರ್ಜ್ ಆಗಿದ್ದರು.

ಒಂದು ವಾರದಲ್ಲಿ 2 ಪರೀಕ್ಷೆ: ಅಮಿತ್ ಶಾ ಕೊರೋನಾ ವರದಿ ನೆಗಟೀವ್!

ಆದರೀಗ ಮತ್ತೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ರಾತ್ರಿ 11ಗಂಟೆಗೆ ಮತ್ತೆ ಏಮ್ಸ್‌ಗೆ ದಾಖಲಾಗಿದ್ದಾರೆ.