Asianet Suvarna News Asianet Suvarna News

'ಅಪ್ರಾಪ್ತೆಯ ಕೈಹಿಡಿದು ಪ್ರಪೋಜ್‌ ಮಾಡೋದು ಲೈಂಗಿಕ ಶೋಷಣೆ ಅಲ್ಲ!'

* ಮುಂಬೈನ ಪೋಕ್ಸೊ ಕೋರ್ಟ್ (POCSO) ಪ್ರಮುಖ ಆದೇಶ

* ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ ಬಿಡುಗಡೆ

* ಕೈ ಹಿಡಿದುಕೊಳ್ಳುವುದು ಅಥವಾ ಯಾವುದೇ ಅಪ್ರಾಪ್ತರ ಬಳಿ ಪ್ರೀತಿ ನಿವೇದನೆ ಮಾಡಿಕೊಳ್ಳುವುದು ಲೈಂಗಿಕ ಶೋಷಣೆಯಲ್ಲ

Holding minor hand not sexual harassment Pocso court pod
Author
Bangalore, First Published Aug 1, 2021, 2:35 PM IST

ಮುಂಬೈ(ಆ.01): ಮುಂಬೈನ ಪೋಕ್ಸೊ ಕೋರ್ಟ್ (POCSO) ಪ್ರಮುಖ ಆದೇಶವೊಂದನ್ನು ಹೊರಡಿಸಿದ್ದು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯನ್ನು ಬಿಡುಗಡೆ ಮಾಡಿದೆ. 28 ವರ್ಷದ ಯುವಕನನ್ನು ಬಿಡುಗಡೆ ಮಾಡುವಾಗ ನ್ಯಾಯಾಲಯವು, ಕೈ ಹಿಡಿದುಕೊಳ್ಳುವುದು ಅಥವಾ ಯಾವುದೇ ಅಪ್ರಾಪ್ತರ ಬಳಿ ಪ್ರೀತಿ ನಿವೇದನೆ ಮಾಡಿಕೊಳ್ಳುವುದು ಲೈಂಗಿಕ ಶೋಷಣೆಯಲ್ಲ ಎಂದು ಹೇಳಿದೆ. 

ಆರೋಪಿ ಯುವಕನನ್ನು 2017 ರಲ್ಲಿ 17 ವರ್ಷದ ಯುವತಿ ಬಳಿ ಪ್ರೇಮ ನಿವೇದನೆ ಮಾಡಿದ ಸಂಬಂಧ ಅರೆಸ್ಟ್ ಮಾಡಲಾಗಿತ್ತು.

ಕೈಗಳನ್ನು ಹಿಡಿದು ಪ್ರೇಮ ವ್ಯಕ್ತಪಡಿಸುವುದು ಪೋಕ್ಸೊ ಪ್ರಕರಣವಲ್ಲ ಎಂದ ನ್ಯಾಯಾಲಯ

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಯುವಕನ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ಹೇಳಿದೆ. ಲೈಂಗಿಕ ಕಿರುಕುಳದ ಉದ್ದೇಶದಿಂದ ಆರೋಪಿ ಬಾಲಕಿಯೊಂದಿಗೆ ಯಾವುದೇ ಕೃತ್ಯ ಎಸಗಿದ್ದಾನೆ ೆಂದು ಸಾಬೀತುಪಡಿಸುವ ಸಾಕ್ಷಿಗಳು ಸಿಕ್ಕಿಲ್ಲ ಎಂದಿದ್ದಾರೆ.

ಲೈಂಗಿಕ ದೌರ್ಜನ್ಯ ಮಾಡುವ ಉದ್ದೇಶದಿಂದ ಯುವಕ ಬಾಲಕಿಯನ್ನು ಹಿಂಬಾಲಿಸಿದ್ದಾನೆ ಅಥವಾ ಆಕೆಯೊಂದಿಗೆ ಆ ರೀತಿ ವರ್ತಿಸಿದನೆಂದು ಸಾಬೀತುಪಡಿಸಲು ಒಂದು ಸಾಕ್ಷ್ಯವೂ ಇಲ್ಲ. ಆರೋಪಿ ಸಂತ್ರಸ್ತೆಯನ್ನು ನಿರಂತರವಾಗಿ ಹಿಂಬಾಲಿಸಿಲ್ಲ, ಏಕಾಂತ ಸ್ಥಳದಲ್ಲಿ ನಿಲ್ಲಿಸಲಿಲ್ಲ ಅಥವಾ ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ದೌರ್ಜನ್ಯವೆಸಗಲು ಬಲ ಪ್ರಯೋಗವನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಾಲಯ, 'ಆರೋಪಿಗಳು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎನ್ನಲು ಬೇಕಾದ ಸಾಕ್ಷಿಯನ್ನು ತರಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆದ್ದರಿಂದ, ಇದೊಂದು ಕೇವಲ ಅನುಮಾನದ ಪ್ರಕರಣ ಎಂದು ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸಲಾಗುತ್ತದೆ ಎಂದಿದೆ.

ಈ ಹಿಂದೆಯೂ ಬಂದಿದೆ ವಿವಾದಾತ್ಮಕ ವಿವಾದ

ಪೋಕ್ಸೋ ಕೋರ್ಟ್‌ಗೂ ಬಂದ ಈ ನಿರ್ಧಾರಕ್ಕೂ ಬಂದ ಬಾಂಬೆ ಹೈಕೋರ್ಟ್‌ ಕೊಟ್ಟಿದ್ದ ತೀರ್ಪು ಭಾರೀ ವಿವಾದ ಸೃಷ್ಟಿಸಿತ್ತು. ಅಂದು ಹೈಕೋರ್ಟ್‌ ಓರ್ವ ಐವತ್ತು ವರ್ಷದ ವ್ಯಕ್ತಿ ಕಿರುಕುಳ ಕೊಟ್ಟಿದ್ದಾನೆಂಬ ಪ್ರಕರಣದ ವಿಚಾರಣೆ ನಡೆಸಿ ತನ್ನ ತೀರ್ಪು ಪ್ರಕಟಿಸಿತ್ತು. ಈ ಸಂಬಂಧ ತೀರ್ಪು ಪ್ರಕಟಿಸಿದ್ದ ಕೋರ್ಟ್‌, ಪ್ಯಾಂಟ್‌ ಬಿಚ್ಚಿ ಯುವತಿಯ ಕೈ ಹಿಡಿಯುವುದು ಲೈಂಗಿಕ ಶೋಷಣೆಯಲ್ಲ ಎಂದಿತ್ತು.

Follow Us:
Download App:
  • android
  • ios