Asianet Suvarna News Asianet Suvarna News

ಮಧ್ಯ ಬಾಯಿ ಹಾಕಿದ ಪ್ರಶಾಂತ್‌ ಭೂಷಣ್‌ಗೆ ‘ಸ್ವಲ್ಪ ಹೊತ್ತು ನಿಮ್ಮ ಬಾಯಿ ಮುಚ್ಚಿ’ ಎಂದ ಅಟಾರ್ನಿ ಜನರಲ್..!

ಅಟಾರ್ನಿ ಜನರಲ್‌ ಕೋರ್ಟ್‌ ಅಭಿಪ್ರಾಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ, ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ವಾದ - ವಿವಾದ ನಡೆಯುತ್ತಿರುವಾಗ ಮಧ್ಯ ಬಾಯಿ ಹಾಕಿದರು ಎಂಬ ಕಾರಣಕ್ಕೆ ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

hold your mouth centres lawyer slams advocate prashant bhushan for interrupting ash
Author
First Published Nov 24, 2022, 6:23 PM IST

ಅರುಣ್‌ ಗೋಯಲ್‌ (Arun Goel) ಅವರನ್ನು ಚುನಾವಣಾ ಆಯುಕ್ತರನ್ನಾಗಿ (Election Commissioner) ನೇಮಕ ಮಾಡಿದ ವಿಚಾರವಾಗಿ ಸುಪ್ರೀಂಕೋರ್ಟ್‌ (Supreme Court) ಈಗಾಗಲೇ ಕೇಂದ್ರ ಸರ್ಕಾರವನ್ನು (Central Government) ತರಾಟೆಗೆ ತೆಗದುಕೊಂಡಿದೆ. ಅಷ್ಟು ತುರ್ತಾಗಿ ಅರುಣ್‌ ಗೋಯಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಅಗತ್ಯವೇನಿತ್ತು ಎಂದೂ ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ (Constitutional Bench) ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಆದರೆ, ಈ ವಿಚಾರವಾಗಿ ಅಟಾರ್ನಿ ಜನರಲ್‌ (Attorney General) ಕೋರ್ಟ್‌ ಅಭಿಪ್ರಾಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ, ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ವಾದ - ವಿವಾದ ನಡೆಯುತ್ತಿರುವಾಗ ಮಧ್ಯ ಬಾಯಿ ಹಾಕಿದರು ಎಂಬ ಕಾರಣಕ್ಕೆ ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ (Prashant Bhushan) ವಿರುದ್ಧ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚುನಾವಣಾ ಆಯುಕ್ತರನ್ನಾಗಿ ಗೋಯಲ್‌ ಅವರ ತುರ್ತು ನೇಮಕದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಈ ಹಿನ್ನೆಲೆ ಗೋಯೆಲ್ ಅವರ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ವಿಚಾರವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಹೇಳಿದರು. 

ಇದನ್ನು ಓದಿ: ನ್ಯಾಯಾಂಗದ ವಿರುದ್ಧ ಟ್ವೀಟ್‌: ಪ್ರಶಾಂತ್‌ ಭೂಷಣ್‌ಗೆ ನೋಟಿಸ್‌!

ಇನ್ನು, ಈ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಮಾತನಾಡಬೇಕಾದರೆ ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಎದುರು ಮಧ್ಯ ಬಾಯಿ ಹಾಕಿ ಹೇಳಿಕೆಗಳನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆ ಸಿಟ್ಟಿಗೆದ್ದ ಉನ್ನತ ಕಾನೂನು ಅಧಿಕಾರಿ ಅಥವಾ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್, ಪ್ರಶಾಂತ್‌ ಭೂಷಣ್‌ ಅವರಿಗೆ ನೀವು ಕೆಲ ಕಾಲ ಬಾಯಿ ಮುಚ್ಚಿ ಎಂದು ಹೇಳಿದ್ದಾರೆಂದು ವರದಿಯಾಗಿದೆ. 

ಇನ್ನು, ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾ ಆಯುಕ್ತರ ನೇಮಕವನ್ನು ಕೊಲಿಜಿಯಂ ವ್ಯವಸ್ಥೆ ರೀತಿ ನೇಮಕ ಮಾಡಬೇಕೆಂದು ಹಲವರು ಅರ್ಜಿ ಹಾಕಿದ್ದು, ಈ ವಿಚಾರವನ್ನು ಸುಪ್ರೀಂಕೋರ್ಟ್‌ ಕಾಯ್ದಿರಿಸಿದೆ. ಅಲ್ಲದೆ, 5 ದಿನಗಳೊಳಗೆ ಲಿಖಿತ ಹೇಳೀಕೆ ನೀಡುವಂತೆ ಎರಡೂ ಕಡೆಯವರಿಗೆ ದೇಶದ ಅತ್ಯುನ್ನತ ನ್ಯಾಯಾಲಯ ಸೂಚಿಸಿದೆ. 

ಇದನ್ನೂ ಓದಿ: ಶಿಕ್ಷೆಯಿಂದ ಪಾರಾಗಲು ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂನಿಂದ ಮತ್ತೊಂದು ಚಾನ್ಸ್!

ಅಲ್ಲದೆ, ಅರುಣ್‌ ಗೋಯಲ್‌ ನೇಮಕ ವಿಚಾರವಾಗಿ ನಾವು ವೈಯಕ್ತಿಕ ಅಭ್ಯರ್ಥಿ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಆದರೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದೂ ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಜಸ್ಟೀಸ್‌ ಅಜಯ್ ರಸ್ತೋಗಿ ವೆಂಕಟರಮಣಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್‌, ಕೋರ್ಟ್‌ ಪ್ರಶ್ನೆಗಳಿಗೆ ಉತ್ತರಿಸಲು ನಾನು ಬದ್ಧ ಎಂದಿದ್ದಾರೆ. 

1985 ಬ್ಯಾಚ್‌ನ ಐಎಎಸ್‌ ಅಧಿಕಾರಿ ಒಂದೇ ದಿನದಲ್ಲಿ ಸೇವೆಯಿಂದ ಸ್ವಯಂಪ್ರೇರಿತವಾಗಿ ನಿವೃತ್ತಿಯಾಗುತ್ತಾರೆ. ಅವರ ಫೈಲ್‌ ಅನ್ನು ಕಾನೂನು ಸಚಿವಾಲಯ ಒಂದೇ ದಿನದಲ್ಲಿ ಒಪ್ಪಿಗೆ ನೀಡುತ್ತದೆ. ಹಾಗೂ, ನಾಲ್ವರ ಸದಸ್ಯರನ್ನೊಳಗೊಂಡ ಸಮಿತಿಯನ್ನು ಪ್ರಧಾನಿ ಎದುರು ಇಡಲಾಗುತ್ತದೆ ಹಾಗೂ 24 ಗಂಟೆಗಳೊಳಗೆ ರಾಷ್ಟ್ರಪತಿಯ ಅಂಕಿತವನ್ನೂ ಪಡೆಯಲಾಗಿದೆ ಎಂದು ಸಹ ಸುಪ್ರೀಂಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿದೆ. 

ಆದರೆ, ಇದಕ್ಕೆ ಉತ್ತರಿಸಿದ ವೆಂಕಟರಮಣಿ,  ಆಯ್ಕೆಗೆ ಒಂದು ಕಾರ್ಯವಿಧಾನ ಮತ್ತು ಮಾನದಂಡವಿದೆ. ಅಲ್ಲದೆ, ಸರ್ಕಾರವು ಪ್ರತಿಯೊಬ್ಬ ಅಧಿಕಾರಿಗಳ ದಾಖಲೆಯನ್ನು ಪರಿಶೀಲಿಸಿ ನೋಡಬೇಕು ಮತ್ತು ಅವರು 6 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು ಎಂಬ ಸನ್ನಿವೇಶ ಇರುವಂತಿಲ್ಲ ಎಂದಿದ್ದಾರೆ. ಹಾಗೂ, ನೇಮಕಾತಿಯಲ್ಲಿ ಅವರ ಪ್ರೊಫೈಲ್ ಮುಖ್ಯವಾಗಿದೆ ಮತ್ತು ಸ್ವಯಂ ನಿವೃತ್ತಿಯನ್ನು ವಿನಾಕಾರಣ ಚರ್ಚೆ ಮಾಡಲಾಗುತ್ತಿದೆ ಎಂದೂ ಅಟಾರ್ನಿ ಜನರಲ್‌ ಹೇಳಿದ್ದಾರೆ. 
ಹಳೆಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಮೇ ತಿಂಗಳಲ್ಲಿ ನಿವೃತ್ತರಾದ ನಂತರ ಚುನಾವಣಾ ಆಯೋಗದಲ್ಲಿ (ಇಸಿ) ಸ್ಥಾನ ಖಾಲಿ ಇತ್ತು.

ಅರುಣ್ ಗೋಯೆಲ್ ಅವರು ಇತ್ತೀಚಿನವರೆಗೂ ಭಾರಿ ಕೈಗಾರಿಕೆಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು ಮತ್ತು ಅವರು ನವೆಂಬರ್ 18 ರಂದು ಸ್ವಯಂ ನಿವೃತ್ತಿಯಾಗಿದ್ದರು. ಅವರು ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios