ತಾಜ್ ಮಹಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಹಿಂದೂ ಮಹಾಸಭಾ, ಮಾ.4ಕ್ಕೆ ವಿಚಾರಣೆ!

ಜ್ಯಾನವಾಪಿ, ಮಥುರಾ ಸೇರಿದಂತೆ ಕೆಲ ಮಂದಿರ-ಮಸೀದಿ ನಡುವಿನ ಕಾನೂನು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಹಿಂದೂ ಮಹಾಸಭಾ ಇದೀಗ ತಾಜ್ ಮಹಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಅರ್ಜಿ ಪುರಸ್ಕರಿಸಿರುವ ಕೋರ್ಟ್, ಮಾರ್ಚ್ 4 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

Hindu Mahasbha File petition in Agra court to ban Urs of Shah Jahan at Taj Mahal ckm

ಆಗ್ರಾ(ಫೆ.03) ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಇತ್ತ ಕಾಶಿ ವಿಶ್ವನಾಥನ ಮೂಲ ಮಂದಿರ ಮರಳಿ ಪಡೆಯುವ ಹೋರಾಟ ತೀವ್ರಗೊಂಡಿದೆ. ಈ ಬೆಳವಣಿಗೆ ನಡುವೆ ತಾಜ್ ಮಹಲ್ ಹಾಗೂ ಮುಸ್ಲಿಮ್ ಸಮತಿ ವಿರುದ್ದ ಹಿಂದೂ ಮಹಾಸಭಾ ಕೋರ್ಟ್ ಮೆಟ್ಟಿಲೇರಿದೆ. ಯಾವ ಅನುಮತಿ ಇಲ್ಲದೆ ತಾಜ್ ಮಹಲ್ ಒಳಗಡೆ ಮುಸ್ಲಿಮರು ಶಹಜಹಾನ್ ಸಾವಿನ ಸ್ಮರಾರ್ಥ ಉರುಸ್ ಆಚರಿಸುತ್ತಿದ್ದಾರೆ. ಈ ವೇಳೆ ಎಲ್ಲಾ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ. ಅನುಮತಿ ಇಲ್ಲದೆ ತಾಜ್ ಮಹಲ್ ಒಳಗೆ ಆಚರಿಸುತ್ತಿರುವ ಉರುಸ್ ಆಚರಣೆಗೆ ತಡೆ ನೀಡಬೇಕು ಎಂದು ಹಿಂದೂ ಮಹಾಸಭಾ ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮಾರ್ಚ್ 4 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. 

ಫೆಬ್ರವರಿ 6 ರಿಂದ 8ರ ವರೆಗೆ ತಾಜ್ ಮಹಲ್ ಒಳಗೆಡೆ ಮುಸ್ಲಿಮರು ಶಹಜಹಾನ್ ಸ್ಮರಣಾರ್ಥ ಉರುಸ್ ಆಚರಿಸುತ್ತಾರೆ. ಇದೀಗ ಶಹಜಹಾನ್ 369ನೇ ಉರುಸ್ ಆಚರಣೆಗೆ ಮುಸ್ಲಿಮ್ ಸಮಿತಿ ಸಜ್ಜಾಗಿದೆ. ಎಲ್ಲಾ ತಯಾರಿ ಮಾಡಿಕೊಂಡಿದೆ. ಉರುಸ್ ಆಚರಣೆ ಹಾಗೂ ಈ  ವೇಳೆ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ. 

ಷಹಜಹಾನ್‌-ಮಮ್ತಾಜ್‌ ಪ್ರೀತಿ ಬಗ್ಗೆ ತನಿಖೆ ಮಾಡಿ, ತಾಜ್‌ ಮಹಲ್ ಧ್ವಂಸ ಮಾಡಿ: ಅಸ್ಸಾಂ ಬಿಜೆಪಿ ಶಾಸಕ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂಮಹಾಸಭಾ ವಕ್ತಾರ ಸಂಜಯ್ ಜಾಟ್ ಕೆಲ ಮಹತ್ವ ಮಾಹಿತಿ ಹಂಚಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ತಾಜ್ ಮಹಲ್ ಕುರಿತು ಮಾಹಿತಿ ಕೇಳಲಾಗಿತ್ತು. ತಾಜ್ ಮಹಲ್ ಒಳಗಡೆ ಉರಸ್ ನಡೆಸಲು ಅನುಮತಿ ಕೊಟ್ಟವರು ಯಾರು? ಮೊಘಲ್ ಆಳ್ವಿಕೆಯಲ್ಲಿ ಕೊಡಲಾಗಿತ್ತೆ? ಅಥವಾ ಬ್ರಿಟಿಷ್ ಸರ್ಕಾರ ನೀಡಿತ್ತೆ? ಅಥವಾ ಸ್ವಾತಂತ್ರ್ಯ ಬಳಿಕ ಭಾರತ ಸರ್ಕಾರ ಅನುಮತಿ ನೀಡಿತ್ತೆ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಭಾರತೀಯ ಪುರಾತತ್ವ ಇಲಾಖೆ ಉತ್ತರ ನೀಡಿದೆ. ಈ ರೀತಿಯ ಯಾವುದೇ ಅನುಮತಿಯನ್ನು ಭಾರತ ಸರ್ಕಾರ, ಪುರಾತತ್ವ ಇಲಾಖೆ ನೀಡಲಾಗಿಲ್ಲ ಎಂದಿದೆ. ಉರುಸ್ ಮುಸ್ಲಿಮ್ ಸಮಿತಿಗೆ ಮೊಘಲ್ ಅಥವಾ ಬ್ರಿಟಿಷ್ ಸರ್ಕಾರದಲ್ಲಿ ಅನುಮತಿ ನೀಡಿರುವ ದಾಖಲೆ ಇಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ ಎಂದು ಸಂಜಯ್ ಜಾಟ್ ಹೇಳಿದ್ದಾರೆ.

ಯಾವ ಅನುಮತಿ ಇಲ್ಲದೆ ತಾಜ್ ಮಹಲ್ ಒಳಗಡೆ ಉರುಸ್ ನಡೆಸುತ್ತಿರುವುದು ಹೇಗೆ? ಇದನ್ನು ಪ್ರಶ್ನಿಸಿ ಹಿಂದೂಮಹಸಭಾ ಆಗ್ರ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಮಾರ್ಚ್ 4 ರಂದು ಈ ಅರ್ಜಿ ವಿಚಾರಣೆ ನಡೆಯಲಿದೆ.

ಮೊಘಲರ ಬಗ್ಗೆ ತಪ್ಪು ಕಲ್ಪನೆ ಇದೆ, ತಾಜ್ ಮಹಲ್, ಕೆಂಪು ಕೋಟೆ ಕೆಡವಿ; ನಸೀರುದ್ದೀನ್ ಶಾ ಶಾಕಿಂಗ್ ಹೇಳಿಕೆ
 

Latest Videos
Follow Us:
Download App:
  • android
  • ios