Asianet Suvarna News Asianet Suvarna News

ಗೋಡ್ಸೆ ಅಧ್ಯಯನ ಕೇಂದ್ರ ಆರಂಭ; ಯುವಕರಿಗೆ ನೈಜ ಇತಿಹಾಸ ಪರಿಚಯ ಎಂದ ಹಿಂದೂ ಮಹಾಸಭಾ!

ಮಹತ್ಮಾ ಗಾಂಧೀಜಿ ಹತ್ಯೆಯಾದ ಬಳಿಕ ಇಲ್ಲೀವರೆಗೂ ಚರ್ಚೆಯಾಗುತ್ತಿರುವ ಹೆಸರು ನಾಥುರಾಮ್ ಗೋಡ್ಸೆ. ಇದೀಗ ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಹಾಗೂ ಭಾರತದ ವಿಭಜನೆ ಇತಿಹಾಸ ತಿಳಿಸುವ ಉದ್ದೇಶಕ್ಕಾಗಿ ಗೋಡ್ಸೆ ಜ್ಞಾನಾ ಶಾಲಾ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

Hindu Mahasabha has opened a Gyan Shala study centre dedicated to Nathuram Godse ckm
Author
Bengaluru, First Published Jan 11, 2021, 3:24 PM IST

ಗ್ವಾಲಿಯರ್(ಜ.11): ಮಹತ್ಮಾ ಗಾಂಧಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪರ ವಿರೋಧದ ಚರ್ಚೆಗಳು ಪ್ರತಿ ವರ್ಷ ನಡೆಯತ್ತಲೇ ಇದೆ. ಇದರ ನಡುವೆ ಇದೀಗ ಹಿಂದೂಮಹಾಸಭಾ ನಾಥುರಾಮ್ ಗೋಡ್ಸ್ ಅಧ್ಯಯನ ಕೇಂದ್ರ ಆರಂಭಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹಿಂದೂಮಹಾಸಭಾ ಗೋಡ್ಸೆ ಜ್ಞಾನಾ ಶಾಲಾ ಅಧ್ಯಯನ ಕೇಂದ್ರ ಆರಂಭಿಸಿದೆ.

ಗೋಡ್ಸೆಗೆ ಪ್ರಧಾನಿ ಹೋಲಿಕೆ, ಈಗ ಮಾತಾಡಲ್ಲ ಎಂದ್ರು ಮಾಜಿ ಪ್ರಧಾನಿ

ಗೋಡ್ಸೆ ಅಧ್ಯಯನ ಕೇಂದ್ರದಲ್ಲಿ ಭಾರತದ ವಿಭಜನೆಯ ಇತಿಹಾಸ, ಭಾರತದ ಸ್ವಾತಂತ್ರ್ಯ ವೀರರ ಇತಿಹಾಸ, ಹಾಗೂ ಹಲವು ರಾಷ್ಟ್ರೀಯ ನಾಯಕರ ಇತಿಹಾಸವನ್ನು ತಿಳಿಸಲಿದೆ. ಕಾಂಗ್ರೆಸ್ ರಚಿಸಿದ ಇತಿಗಹಾಸದಲ್ಲಿ ಉದ್ದೇಶಕಪೂರ್ವಕವಾಗಿ ಅಳಿಸಿಹಾಕಿರುವು ಹಾಗೂ ತಪ್ಪು ಮಾಹಿತಿಯ ಬದಲಾಗಿ ಗೋಡ್ಸೆ ಅಧ್ಯಯನ ಕೇಂದ್ರದಲ್ಲಿ ಭಾರತದ ನೈಜ ಇತಿಹಾಸ ಹಾಗೂ ಭಾರತದ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಹಿಂದೂ ಮಹಾಸಭಾ ಹೇಳಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಮಹಾಸಭಾ ತ್ಯಾಗ ನೀಡಿದ್ದರೆ, ದೇಶದ 'ವಿಭಜನೆಗೆ' ಕಾಂಗ್ರೆಸ್ ಕಾರಣವಾಗಿದೆ ಹಿಂದೂ ಮಹಸಾಭಾ ಉಪಾಧ್ಯಕ್ಷ  ಜೈವೀರ್ ಭರದ್ವಾಜ್ ಹೇಳಿದರು. ನೆಹರೂ ಹಾಗೂ ಜಿನ್ನ ಇಬ್ಬರಿಗೂ ಪ್ರಧಾನ ಮಂತ್ರಿಯಾಗಬೇಕಿತ್ತು. ಅದೂ ಕೂಡ ಮೊದಲ ಪ್ರಧಾನಿ ಮಂತ್ರಿ ಪಟ್ಟವೇ ಬೇಕಿತ್ತು. ಹೀಗಾಗಿ ತಮ್ಮ ಹಿತಾಸಕ್ತಿಗಾಗಿ ಭಾರತವನ್ನೇ ವಿಭಜನೆ ಮಾಡಲಾಗಿದೆ. ಇದನ್ನು ಅಂದು ಕೂಡ ಹಿಂದೂ ಮಹಸಾಭ ವಿರೋಧಿಸಿತ್ತು ಎಂದು ಜೈವೀರ್ ಹೇಳಿದ್ದಾರೆ.

Follow Us:
Download App:
  • android
  • ios