Asianet Suvarna News Asianet Suvarna News

ದೈನಂದಿನ ಬದುಕಿನಲ್ಲಿ ಮಾತೃ‍ಭಾಷೆ ಜೊತೆ ಹಿಂದಿ ಬಳಕೆಯನ್ನೂ ಮಾಡಿ: ಅಮಿತ್‌ ಶಾ ಕರೆ!

* ಬೇರೆ ಭಾಷೆಗಳ ಜೊತೆ ಹಿಂದಿ ಸ್ಪರ್ಧೆ ಇಲ್ಲ

* ’ಇತರೆ ಭಾಷೆಗಳ ಜೊತೆ ಸಹಬಾಳ್ವೆಯಿಂದ ಮಾತ್ರ ಹಿಂದಿ ಅಭಿವೃದ್ಧಿ

* ಎಲ್ಲ ಪ್ರಾದೇಶಿಕ ಭಾಷೆಗಳನ್ನೂ ಪ್ರೋತ್ಸಾಹಿಸಿ: ಅಮಿತ್‌ ಶಾ ಕರೆ

Hindi not competing with other languages do not feel inferior in speaking mother tongue Amit Shah pod
Author
Bangalore, First Published Sep 15, 2021, 8:29 AM IST

ನವದೆಹಲಿ(ಸೆ.15): ಹಿಂದಿ ದೇಶದ ಅಧಿಕೃತ ಭಾಷೆ. ಆದರೆ ಅದು ಸಮೃದ್ಧಿಯಾಗುವುದು ಅದು ಇತರೆ ಭಾರತೀಯ ಭಾಷೆಗಳ ಜೊತೆ ಸಹಬಾಳೆ ನಡೆಸುವುದು ಮೂಲಕ ಮಾತ್ರವೇ. ಹೀಗಾಗಿ ಎಲ್ಲಾ ಭಾಷೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಮಂಗಳವಾರ ‘ಹಿಂದಿ ದಿವಸ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇತರ ಪ್ರಾದೇಶಿಕ ಭಾಷೆಗಳಿಗಿಂತ ಹಿಂದಿ ಭಿನ್ನವಲ್ಲ. ಜೊತೆಗೆ ಯಾವುದೇ ಭಾಷೆಗಳ ಜೊತೆಗೂ ಹಿಂದಿ ಸ್ಪರ್ಧಿಸುತ್ತಿಲ್ಲ. ವಾಸ್ತವವಾಗಿ ಹಿಂದಿ ಭಾಷೆಯು ಇತರ ಭಾಷೆಗಳಿಗೆ ‘ಸಖಿ’ ಇದ್ದಂತೆ. ಎಲ್ಲ ಪ್ರಾದೇಶಿಕ ಭಾಷೆಗಳು ಸೇರಿ ಹಿಂದಿಯನ್ನು ಪರಿಪೂರ್ಣಗೊಳಿಸುತ್ತವೆ ಹಾಗೂ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಪ್ರಚುರಪಡಿಸಬೇಕು’ ಎಂದರು.

ಇಂದಿನ ಪೀಳಿಗೆಯ ಮಕ್ಕಳ ಜತೆ ಪಾಲಕರು ಮಾತೃಭಾಷೆಯಲ್ಲೇ ಸಂವಹನ ನಡೆಸಬೇಕು. ಮಕ್ಕಳು ಇಂಗ್ಲಿಷ್‌ ಮೀಡಿಯಂನಲ್ಲಿ ಓದುತ್ತಿದ್ದರೂ ಮಕ್ಕಳ ಜತೆ ಮಾತೃಭಾಷೆಯಲ್ಲೇ ಮಾತನಾಡಬೇಕು ಎಂದು ಕರೆ ನೀಡಿದರು.

ಕೇವಲ ವಸ್ತು ಉತ್ಪಾದನೆ ಅಷ್ಟೇ ಅಲ್ಲ, ಭಾಷೆಯಲ್ಲೂ ಆತ್ಮನಿರ್ಭರತೆ ಸಾಧಿಸಬೇಕು. ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೋಡಿ. ಎಲ್ಲ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹಿಂದಿಯಲ್ಲೇ ಮಾತನಾಡುತ್ತಾರೆ. ವೈದ್ಯರು, ತಜ್ಞರು ಹಾಗೂ ಇತರರ ಜತೆಗೂ ಹಿಂದಿ ಸಂಭಾಷಣೆ ನಡೆಸುತ್ತಾರೆ. ಇದರಿಂದಾಗಿ ಅವರ ಸಂದೇಶ ತಳಹಂತದವರೆಗೂ ತಲುಪುತ್ತದೆ ಎಂದು ಉದಾಹರಿಸಿದರು.

ನೂತನ ಶಿಕ್ಷಣ ನೀತಿಯಲ್ಲಿ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದೂ ಅವರು ನುಡಿದರು.

Follow Us:
Download App:
  • android
  • ios