ಆನ್‌ಲೈನ್ ಕ್ಲಾಸ್‌ಗಾಗಿ ಹಸು ಮಾರಿ ಮಕ್ಕಳಿಗೆ ಮೊಬೈಲ್ ತಂದ ಅಪ್ಪ..!
ಮಕ್ಕಳ ಒಳಿತಿಗಾಗಿ ತಂದೆ-ತಾಯಿ ಎಂತಹ ತ್ಯಾಗಕ್ಕೂ ರೆಡಿಯಿರುತ್ತಾರೆ. ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ತನ್ನ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ್ದಾರೆ ಹಿಮಾಚಲ ಪ್ರದೇಶದ ದೀಪಕ್ ಕುಮಾರ್ ಎನ್ನುವ ವ್ಯಕ್ತಿ. ಈ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜು.24): ಶಾಲೆಯ ಆನ್‌ಲೈನ್ ತರಗತಿಯಲ್ಲಿ ಮಕ್ಕಳು ಪಾಲ್ಗೊಂಡು, ಪಾಠ ಕೇಳಲು ಅವಶ್ಯಕವಾದ ಸ್ಮಾರ್ಟ್ ಫೋನ್ ಕೊಳ್ಳಲು ವ್ಯಕ್ತಿಯೊಬ್ಬರು ತಮ್ಮ ಏಕಮಾತ್ರ ಆದಾಯ ಮೂಲವಾಗಿದ್ದ ಹಸುವನ್ನೇ ಮಾರಾಟ ಮಾಡಿರುವ ಕರುಣಾಜನಕ ಕತೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಕಂಗ್ರಾ ಜಿಲ್ಲೆಯ ಜ್ವಾಲಾಮುಖಿಯ ಕುಲ್‌ದೀಪ್ ಕುಮಾರ್ ಅವರೇ ಮಕ್ಕಳಿಗಾಗಿ ಹಸು ಮಾರಿದವರು.
‘ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಶಾಲೆಗಳು ಬಂದ್ ಆದವು. ಅಂದಿನಿಂದ 4 ಮತ್ತು 2ನೇ ತರಗತಿ ಓದುತ್ತಿರುವ ನನ್ನ ಇಬ್ಬರು ಮಕ್ಕಳು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಸ್ಮಾರ್ಟ್‌ಫೋನ್ ಇಲ್ಲದೆ ಕಷ್ಟಪಡುತ್ತಿದ್ದರು. ಮೊಬೈಲ್ ಕೊಳ್ಳಲು ಸಾಲಗಾರರು ಮತ್ತು ಬ್ಯಾಂಕ್ ಮೊರೆ ಹೋದೆ. ಆದರೆ ಉಪಯೋಗವಾಗಲಿಲ್ಲ. ಕೊನೆಗೆ ನಮ್ಮ ಆದಾಯದ ಮೂಲವಾಗಿದ್ದ ಹಸುವನ್ನೇ 6, 000ರುಪಾಯಿಗೆ ಮಾರಿ, ಮೊಬೈಲ್ ಕೊಂಡುಕೊಂಡೆ’ ಎಂದು ಕುಲ್‌ದೀಪ್ ಅವರು ಅಳಲುತೋಡಿಕೊಂಡಿದ್ದಾರೆ.
ಬಡ ಕುಟುಂಬದ ಹಿನ್ನಲೆಯಿರುವ ಕುಲ್ದೀಪ್ ಕುಮಾರ್ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಕೊರೋನಾ ಭೀತಿಯಿಂದಾಗಿ ಶಾಲೆಗಳು ಲಾಕ್‌ಡೌನ್ ಆಗಿವೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆನ್‌ಶಿಕ್ಷಣದ ಮೊರೆ ಹೋಗಿದೆ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎನ್ನುವ ಉದ್ದೇಶದಿಂದ ತಂದೆ ಈ ಕೆಲಸ ಮಾಡಿದ್ದಾರೆ.
ಪೇಪರ್‌ಲೆಸ್ ಟಿಕೆಟ್ ವ್ಯವಸ್ಥೆ: ಆ.1ರಿಂದ ಸುರಕ್ಷಿತ ಚಿತ್ರ ಪ್ರದರ್ಶನ..?
ಕುಲ್‌ದೀಪ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಣ್ಣಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಪಡಿತರ ಚೀಟಿ ಸಹ ಇಲ್ಲ. ಗ್ರಾಮೀಣ ಭಾಗಗಳಲ್ಲಿ ತಾವು ಸಾಕಿರುವ ಹಸುಗಳನ್ನು ದೇವರೆಂದೇ ಭಾವಿಸಿ ಆರಾಧಿಸುವವರಿದ್ದಾರೆ. ಗೋಮಾತೆ ಎಂದು ಕರೆಯುತ್ತಾರೆ. ಕುಲ್ದೀಪ್ ಕುಮಾರ್ ಮಾಡಿದ ತ್ಯಾಗ ಸಣ್ಣದೇನಲ್ಲ.