Asianet Suvarna News Asianet Suvarna News

ಗುಡ್ಡ ಕುಸಿತದಿಂದ ಭೋರ್ಗರೆದು ಹರಿಯುತ್ತಿದ್ದ ನದಿಗೆ ತಡೆ..!

  • ಹಿಮಾಚಲದಲ್ಲಿ ನದಿಗೆ ಗುಡ್ಡ ಕುಸಿದು ಹಿನ್ನೀರಲ್ಲಿ ಪ್ರವಾಹ - 13 ಗ್ರಾಮಗಳಿಗೆ ನುಗ್ಗಿದ ನೀರು
  • 19 ಜನರು ನಾಪತ್ತೆ- ಅನಾಹುತ
  • ನದಿಯ ಪಥಕ್ಕೆ ಧಕ್ಕೆ 2000 ಜನರ ಸ್ಥಳಾಂತರ
Himachal Pradesh Landslide blocks flow of Chenab, officials warn of dam burst dpl
Author
Bangalore, First Published Aug 14, 2021, 7:49 AM IST

ಶಿಮ್ಲಾ(ಆ.14): ಹಿಮಾಚಲ ಪ್ರದೇಶದ ಕಿನ್ನೌರ್‌ ಭೂಕುಸಿತದ ಬೆನ್ನಲ್ಲೇ, ರಾಜ್ಯದ ಲಾಹುಲ್‌ನಲ್ಲಿ ಮತ್ತೊಂದು ಭೂ ಕುಸಿತ ಸಂಭವಿಸಿದೆ. ಗುಡ್ಡ ಕುಸಿದು ಚಿನಾಬ್‌ ನದಿಯ ಹರಿವಿನ ಮೇಲೆ ಬಿದ್ದ ಪರಿಣಾಮ, ನದಿಯ ಹರಿವಿಗೆ ತಡೆ ಆಗಿದೆ ಹಾಗೂ ಇಡೀ ಪಥದ ಬದಲು ಚಿಕ್ಕ ಪಥದಲ್ಲಿ ನದಿ ಹರಿಯಲು ಆರಂಭಿಸಿದೆ.

ಈ ಘಟನೆ ನಲ್ದಾ ಗ್ರಾಮದ ಬಳಿ ನಡೆದಿದ್ದು, ಚಿನಾಬ್‌ ನದಿಯ ಹರಿವಿಗೆ ತಡೆಯಾಗಿರುವುದರಿಂದ ಸುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ 13 ಗ್ರಾಮಗಳ 2000 ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. 19 ಜನ ನಾಪತ್ತೆಯಾಗಿದ್ದಾರೆ. ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಳವಳ ವ್ಯಕ್ತಪಡಿಸಿ, ಸಕಲ ರಕ್ಷಣಾ ಕೆಲಸಕ್ಕೆ ಸೂಚಿಸಿದ್ದಾರೆ.

ಹಿಮಾಚಲ: ಹಠಾತ್‌ ಭೂಕುಸಿತಕ್ಕೆ 13 ಮಂದಿ ಬಲಿ, ಹೆದ್ದಾರಿಯಲ್ಲಿ ಬೆಟ್ಟ ಕುಸಿದು ದುರಂತ!

‘ಶೇ.10-15ರಷ್ಟುನೀರು ಮಾತ್ರ ಚಿನಾಬ್‌ ನದಿಯ ಒಂದು ಭಾಗದಲ್ಲಿ ಹರಿಯುತ್ತಿದೆ. ಮಿಕ್ಕ ಹರಿವಿನ ಭಾಗವು ಭೂಕುಸಿತದಿಂದ ಬಿದ್ದ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ನದಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿ ಹಿನ್ನೀರಿನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹೀಗಾಗಿ ನದಿ ದಂಡೆಯಲ್ಲಿರುವ ಊರಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆರಂಭಿಸಿದ್ದೇವೆ. ಸಮೀಕ್ಷೆ ನಡೆಸಲು ಹೆಲಿಕಾಪ್ಟರ್‌ ಬಳಸುತ್ತಿದ್ದೇವೆ. ಈವರೆಗೆ 13 ಗ್ರಾಮಗಳಿಂದ 2000 ಜನರನ್ನು ಸ್ಥಳಾಂತರ ಮಾಡಲಾಗಿದೆ. 19 ಜನರು ಕಾಣೆಯಾಗಿದ್ದಾರೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಆದರೆ ಕೆಲವು ಮನೆಗಳಿಗೆ ಹಾನಿಯಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಸುದೇಶ್‌ ಕುಮಾರ್‌ ಮೋಕ್ತಾ ಹೇಳಿದ್ದಾರೆ.

ಇದೇ ವೇಳೆ, ನದಿಯಲ್ಲಿ ಬಿದ್ದ ಮಣ್ಣಿನ ತೆರವು ಕೆಲಸವೂ ಇನ್ನೊಂದೆಡೆ ಭರದಿಂದ ಸಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಕಿನ್ನೌರ್‌ ಭೂಕುಸಿತನಲ್ಲಿ ರಕ್ಷಣಾ ಕಾರ್ಯ ಶುಕ್ರವಾರವು ಮುಂದುವರೆದಿದೆ. 3 ಶವಗಳು ದೊರೆತಿದ್ದು, ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. 13 ಜನರನ್ನು ರಕ್ಷಿಸಲಾಗಿದೆ.

Follow Us:
Download App:
  • android
  • ios