ಶಿಮ್ಲಾ(ಮಾ.07): ಕೊರೋನಾ ಕಾರಣ ಸಂಬಳ ಕಡಿತ ಅನುಭವಿಸಿದ್ದ ಹಿಮಾಚಲ ಪ್ರದೇಶದ ಶಾಸಕರಿಗೆ ಶುಭ ಸುದ್ದಿ. ರಾಜ್ಯದ ಎಲ್ಲಾ ಶಾಸ​ಕ​ರಿಗೆ ಏಪ್ರಿಲ್‌ 1ರಿಂದಲೇ ಪೂರ್ತಿ ವೇತನ ಹಾಗೂ ಪೂರ್ತಿ ಪ್ರಮಾ​ಣದ ಶಾಸಕರ ನಿಧಿ ಲಭ್ಯ​ವಾ​ಗ​ಲಿದೆ.

ಶುಕ್ರ​ವಾರ ವಿಧಾ​ನ​ಸಭೆ ಅಧಿ​ವೇ​ಶ​ನ​ದಲ್ಲಿ 2021-22ರ ಬಜೆಟ್‌ ಮಂಡನೆ ವೇಳೆ ಹಿಮಾ​ಚಲ ಪ್ರದೇಶ ಮುಖ್ಯ​ಮಂತ್ರಿ ಜೈರಾಮ್‌ ಠಾಕೂರ್‌ ಅವರು ಈ ವಿಚಾರ ತಿಳಿ​ಸಿ​ದ್ದಾರೆ.

ಕೊರೋನಾ ಲಾಕ್‌​ಡೌನ್‌ ಹಾಗೂ ಕೊರೋನಾ ಸೋಂಕಿನ ವಿರು​ದ್ಧದ ಹೋರಾ​ಟ​ಕ್ಕೆ ಹಣದ ಸಂಗ್ರ​ಹ​ಕ್ಕಾಗಿ ಕಳೆದ ವರ್ಷ ಶಾಸ​ಕರ ವೇತ​ನದ ಪೈಕಿ ಶೇ.30ರಷ್ಟುಕಡಿ​ತ​ಗೊ​ಳಿ​ಸ​ಲಾ​ಗಿತ್ತು ಹಾಗೂ 2 ವರ್ಷ​ಗ​ಳಿಗೆ ಅನ್ವ​ಯಿ​ಸು​ವಂತೆ ಶಾಸಕರ ನಿಧಿಯನ್ನು ಅಮಾ​ನ​ತಿ​ನ​ಲ್ಲಿ​ಡ​ಲಾ​ಗಿತ್ತು.