Asianet Suvarna News Asianet Suvarna News

ಶಿಮ್ಲಾ, ಮನಾಲಿಯಲ್ಲಿ ಜನಜಾತ್ರೆ!

* ಕೊರೋನಾ ಎರಡನೇ ಅಲೆ ಇಳಿಕೆ ಆದ ಬೆನ್ನಲ್ಲೇ ಪ್ರವಾಸಿ ತಾಣಗಳತ್ತ ಮುಗಿಬಿದ್ದ ಜನ

* ಶಿಮ್ಲಾ, ಮನಾಲಿಯಲ್ಲಿ ಜನಜಾತ್ರೆ

* ಪ್ರಮುಖ ಪ್ರವಾಸಿ ತಾಣಗಳಲ್ಲಿ ಜಾತ್ರೆಯಂತೆ ನೆರೆದ ಪ್ರವಾಸಿಗರು

Highways choked hotels fully booked as tourists throng Himachal Pradesh pod
Author
Bangalore, First Published Jul 6, 2021, 9:18 AM IST

ನವದೆಹಲಿ(ಜು.06): ಕೊರೋನಾ ಎರಡನೇ ಅಲೆ ಇಳಿಕೆ ಆದ ಬೆನ್ನಲ್ಲೇ ಪ್ರವಾಸಿ ತಾಣಗಳತ್ತ ಜನರು ಮುಗಿಬಿದ್ದಿದ್ದಾರೆ. ಅದರಲ್ಲೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಬಿಲಿಸಿನ ಅಬ್ಬರ ಇರುವ ಕಾರಣ, ಬಹಳಷ್ಟು ಜನರು ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಹಿಮಾಚಲ ಪ್ರದೇಶ, ಉತ್ತರಾಖಂಡಕ್ಕೆ ದೌಡಾಯಿಸತೊಡಗಿದ್ದಾರೆ.

ಈ ಎರಡೂ ರಾಜ್ಯಗಳಲ್ಲಿ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಹೀಗಾಗಿ ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿರುವ ಮನಾಲಿ, ಶಿಮ್ಲಾ ಹಾಗೂ ಕುಫ್ರಿ, ಡಾಲ್‌ಹೌಸಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣ ಮಸ್ಸೂರಿಯಲ್ಲಿಯೂ ಜನ ಜಂಗುಳಿ ಕಂಡುಬರುತ್ತಿದೆ.

ಜನರು ಸಾಮಾಜಿಕ ಅಂತರ ಇಲ್ಲದೇ, ಕೋವಿಡ್‌ ನಿಯಮ ಪಾಲಿಸದೇ ಪ್ರವಾಸಿತಾಣಗಳಲ್ಲಿ ಓಡಾಡುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸುವುದು ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ.

Follow Us:
Download App:
  • android
  • ios