ನವದೆಹಲಿ: ಕಳೆದ ವರ್ಷ ಉತ್ತಮ ಮಳೆ ಆಗಿದ್ದರೂ ರೈತರ ಆತ್ಮಹತ್ಯೆ ಸರಣಿ ನಿಂತಿಲ್ಲ. 2019ರಲ್ಲಿ ಕರ್ನಾಟಕದಲ್ಲಿ 1992 ಮಂದಿ ರೈತರು ಸಾವಿಗೆ ಶರಣಾಗಿದ್ದು, ಅನ್ನದಾತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂಬ ಸಂಗತಿ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ- ಅಂಶಗಳಿಂದ ತಿಳಿದುಬಂದಿದೆ.

2018ರಲ್ಲಿ 2,405 ರೈತರು ಸಾವಿಗೆ ಶರಣಾಗಿದ್ದರು. ಅದಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ. 2017ರಲ್ಲಿ ಕರ್ನಾಟಕದಲ್ಲಿ 2079 ಮಂದಿ, 2016ರಲ್ಲಿ 2,160 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ವರ್ಷಗಳ ಬಳಿಕ ಆತ್ಮಹತ್ಯೆಗಳ ಸಂಖ್ಯೆ 2000ಕ್ಕಿಂತ ಕೆಳಗಿಳಿದಿದೆ.

ಇನ್ನು ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 3,927 ರೈತರು ಸಾವಿಗೆ ಶರಣಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ 1,029 ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ದೇಶದಲ್ಲಿ ಒಟ್ಟಾರೆ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ಸಂಭವಿಸಿದ 10,349 ರೈತರ ಆತ್ಮಹತ್ಯೆಗೆ ಹೋಲಿಸಿದರೆ ದæೕಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕೊಂಚ ಇಳಿಕೆ ಕಂಡಿದೆ. 2017ರಲ್ಲಿ 10,665, 2016ರಲ್ಲಿ 11,379 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದರು.

ರಾಜ್ಯಗಳು ಆತ್ಮಹತ್ಯೆ ಕೇಸ್‌

ಮಹಾರಾಷ್ಟ್ರ 3927

ಕರ್ನಾಟಕ 1992

ಆಂಧ್ರ ಪ್ರದೇಶ 1029