Asianet Suvarna News Asianet Suvarna News

ಕೊರೋನಾ, ಗರಿಷ್ಠ ಸಾವಿನಲ್ಲಿ ರಾಜ್ಯದ ಎರಡು ಜಿಲ್ಲೆಗಳು!

ಟಾಪ್‌ 20 ಸಾವಿನ ಜಿಲ್ಲೆಗಳಲ್ಲಿ ಬೆಂಗಳೂರು, ಮೈಸೂರು| ಕೊರೋನಾ: ಬೆಂಗಳೂರು 5, ಮೈಸೂರಿಗೆ 19ನೇ ಸ್ಥಾನ| ಮುಂಬೈ ನಂ.1, ಟಾಪ್‌ 20ರಲ್ಲಿ ಮಹಾರಾಷ್ಟ್ರದ 13!

Highest Coronavirus Fatalities Two Districts Of Karnataka Are In The List pod
Author
Bangalore, First Published Oct 4, 2020, 8:37 AM IST

ನವದೆಹಲಿ(ಅ.04): ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸಾವು ಸಂಭವಿಸಿದ 20 ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಗಳು ಸ್ಥಾನ ಪಡೆದಿವೆ. 3024 ಸಾವಿನೊಂದಿಗೆ ಬೆಂಗಳೂರು 5ನೇ ಸ್ಥಾನದಲ್ಲಿದ್ದರೆ, 780 ಸಾವಿನೊಂದಿಗೆ ಮೈಸೂರು 19ನೇ ಸ್ಥಾನದಲ್ಲಿದೆ. 9014 ಸಾವಿನೊಂದಿಗೆ ಮುಂಬೈ ಮೊದಲ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

ದೇಶದ ಒಟ್ಟು 734 ಜಿಲ್ಲೆಗಳ ಪೈಕಿ 717 ಜಿಲ್ಲೆಗಳಲ್ಲಿ ಕೊರೋನಾದಿಂದ ಕನಿಷ್ಠ ಒಂದಾದರೂ ಸಾವು ಸಂಭವಿಸಿದೆ. ಈ ಪೈಕಿ 20 ಜಿಲ್ಲೆಗಳಲ್ಲಿ ಶೇ.45ರಷ್ಟುಸಾವು ಸಂಭವಿಸಿದೆ. ಅತಿಹೆಚ್ಚು ಸಾವು ಸಂಭವಿಸಿದ ಟಾಪ್‌ 20 ಜಿಲ್ಲೆಗಳ ಪೈಕಿ ಮಹಾರಾಷ್ಟ್ರದ 13 ಜಿಲ್ಲೆಗಳು ಸ್ಥಾನ ಪಡೆದಿವೆ. ಇನ್ನು ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲೇ ಹೆಚ್ಚಿನ ಸಾವು- ನೋವು ಸಂಭವಿಸಿದೆ. ಉತ್ತರ ಬಯಲು ಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ವರದಿ ತಿಳಿಸಿದೆ.

65 ಲಕ್ಷದತ್ತ ಕೇಸ್‌:

ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು 65 ಲಕ್ಷದ ಗಡಿ ಸಮೀಪಿಸಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 79,476 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಕೊರೋನಾಕ್ಕೆ 1,069 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 1,00,842ಕ್ಕೆ ಏರಿಕೆಯಾಗಿದೆ.

ಪ್ರಮುಖ ನಗರಳಲ್ಲಿನ ಸಾವು

ಮುಂಬೈ 9,014

ದೆಹಲಿ 5,438

ಚೆನ್ನೈ 3,238

ಬೆಂಗಳೂರು 3,024

ಕೋಲ್ಕತಾ 1,737

ಮೈಸೂರು 780

Follow Us:
Download App:
  • android
  • ios