Asianet Suvarna News Asianet Suvarna News

'ದೇವಸ್ಥಾನದಲ್ಲಿ ಮಾಡುವ ಆರತಿ ಬಗ್ಗೆ ಏನು ಹೇಳ್ತೀರಿ..' ಮಸೀದಿಯಲ್ಲಿ ಲೌಡ್‌ಸ್ಪೀಕರ್‌ ನಿಷೇಧ ಅರ್ಜಿ ವಜಾ ಮಾಡಿದ ಹೈಕೋರ್ಟ್‌!

azaan on loudspeakers ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಯೀ ಅವರನ್ನೊಳಗೊಂಡ ವಿಭಾಗೀಯ ಪೀಠವು, ಮಸೀದಿಯಲ್ಲಿ ಅಜಾನ್‌ಗಾಗಿ ಹಾಕುವ ಲೌಡ್‌ ಸ್ಪೀಕರ್‌ನಿಂದ ಶಬ್ದ ಮಾಲಿನ್ಯ ಹೇಗೆ ಉಂಟಾಗುತ್ತದೆ ಎಂದು ಅರಿಯಲು ವಿಫಲವಾಗಿದೆ ಎಂದು ತಿಳಿಸಿದೆ.

High Court rejects plea to ban loudspeakers at mosques asks What about aarti at temples san
Author
First Published Nov 29, 2023, 5:09 PM IST

ನವದೆಹಲಿ (ನ.29): ಆಜಾನ್‌ಗಾಗಿ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದರಿಂದ ಶಬ್ದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಂಗಳವಾರ ಹೇಳಿದೆ, ಅವುಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿದೆ. ಅರ್ಜಿಯನ್ನು "ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ" ಎಂದು ಹೇಳಿದ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಯೀ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅಜಾನ್‌ನಲ್ಲಿ ಪ್ರಾರ್ಥನೆಯನ್ನು ಹೇಳುವುದು ಒಬ್ಬ ಮಾನವ, ಇದನ್ನೇ ಧ್ವನಿವರ್ಧಕದಲ್ಲಿ ಪ್ರಸಾರವಾದಾದ " ಅನುಮತಿಸುವ ಮಿತಿಯನ್ನು ಮೀರಿ ಡೆಸಿಬಲ್ ಹೇಗೆ ಹೆಚ್ಚಾಗುತ್ತದೆ , ಇದರಿಂದ ಶಬ್ದ ಮಾಲಿನ್ಯ ಹೇಗಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಸಲು ಅರ್ಜಿ ವಿಫಲವಾಗಿದೆ ಎಂದು ತಿಳಿಸಿದೆ.

"ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಅಜಾನ್ ಕೂಗುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಉಂಟುಮಾಡುವ ಮಟ್ಟಿಗೆ ಡೆಸಿಬಲ್ (ಮಟ್ಟ) ಅನ್ನು ಹೇಗೆ ಸಾಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ, ಇದು ಸಾರ್ವಜನಿಕರಿಗೆ ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ ಎನ್ನುವುದನ್ನು ತಿಳಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದರಿಂದ "ಶಬ್ದ ಮಾಲಿನ್ಯ" ಉಂಟಾಗುತ್ತದೆ ಮತ್ತು ಜನರ, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅನನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಬಜರಂಗದಳದ ಮುಖಂಡ ಶಕ್ತಿಸಿಂಹ ಝಾಲಾ ಅವರು ಅರ್ಜಿ ಸಲ್ಲಿಕೆ ಮಾಡಿದ್ದರು.

"ನಿಮ್ಮ ದೇವಸ್ಥಾನದಲ್ಲಿ, ಡೋಲು ಮತ್ತು ಸಂಗೀತದೊಂದಿಗೆ ಬೆಳಗಿನ ಆರತಿಯು ಮುಂಜಾನೆ 3 ಗಂಟೆಗೆ ಪ್ರಾರಂಭವಾಗುತ್ತದೆ. ಆದ್ದರಿಂದ, ಇದು ಯಾರಿಗೂ ಯಾವುದೇ ರೀತಿಯ ಶಬ್ದವನ್ನು ಉಂಟುಮಾಡುವುದಿಲ್ಲವೇ? ಗಂಟೆ  ಮತ್ತು ಗಾಂಗ್ ಶಬ್ದವು ದೇವಸ್ಥಾನದಲ್ಲಿ ಮಾತ್ರವೇ ಉಳಿಯುತ್ತದೆ ಎಂದು ನೀವು ಹೇಳಬಹುದೇ? ದೇವಸ್ಥಾನದ ಆವರಣದಲ್ಲಿ ಮಾತ್ರವೇ ಈ ಶಬ್ದ ಇರುತ್ತದೆಯೇ?

ದೇವಸ್ಥಾನದ ಹೊರಗೆ ಹರಡುವುದಿಲ್ಲವೇ?" ಎಂದು ನ್ಯಾಯಾಲಯವು ಅರ್ಜಿದಾರರ ವಕೀಲರನ್ನು ವಿಚಾರಣೆಯ ವೇಳೆ ಕೇಳಿದೆ. ಪೀಠವು "ಈ ರೀತಿಯ ಪಿಐಎಲ್ಅನ್ನು ಪರಿಗಣನೆ ಮಾಡುವುದಿಲ್ಲ ಎಂದು ಹೇಳಿದೆ. "ಇದು ವರ್ಷಗಳಿಂದ ನಡೆಯುತ್ತಿರುವ ನಂಬಿಕೆ ಮತ್ತು ಅಭ್ಯಾಸ, ಮತ್ತು ಇದು 5-10 ನಿಮಿಷಗಳ ಕಾಲ ನಡೆಯುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಆಜಾನ್ ಅನ್ನು ದಿನದ ವಿವಿಧ ಗಂಟೆಗಳಲ್ಲಿ ನಡೆಸಲಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಶಬ್ದ ಮಾಲಿನ್ಯವನ್ನು ಅಳೆಯಲು ವೈಜ್ಞಾನಿಕ ವಿಧಾನವಿದೆ,

ಶಾಲೆಯ ಬೆಳಗಿನ ಪ್ರಾರ್ಥನೆಯ ವೇಳೆ ಅಜಾನ್‌, ಪೋಷಕರ ಆಕ್ರೋಶ!

ಆದರೆ ಅರ್ಜಿದಾರರು ಹತ್ತು ನಿಮಿಷಗಳ ಅಜಾನ್ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ ಎಂಬುದನ್ನು ಸಾಬೀತುಪಡಿಸಲು ನಿರ್ದಿಷ್ಟ ಪ್ರದೇಶಕ್ಕೆ ಅಂತಹ ಯಾವುದೇ ಡೇಟಾವನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಪೀಠ ಹೇಳಿದೆ. ಧ್ವನಿವರ್ಧಕಗಳ ಮೂಲಕ ಅಜಾನ್ ನಡೆಯುವ ನೆರೆಹೊರೆಯಲ್ಲಿ ವಿವಿಧ ಸಮುದಾಯಗಳು ಮತ್ತು ಧರ್ಮಗಳ ಜನರು ವಾಸಿಸುತ್ತಿದ್ದಾರೆ ಮತ್ತು ಇದು ಆರೋಗ್ಯದ ಅಪಾಯಗಳು ಮತ್ತು ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂಬುದು ಅರ್ಜಿದಾರರ ಏಕೈಕ ವಾದವಾಗಿದೆ ಎಂದು ಅದು ಹೇಳಿದೆ.

ಅಜಾನ್‌ ಕೂಗಿ​ನಿಂದ ಆಗು​ವ ಸಮ​ಸ್ಯೆಗಳ​ ಬಹಿರಂಗಕ್ಕೆ ಹಿಂಜ​ರಿ​ಯ​ಲ್ಲ: ಕೆಎಸ್ ಈಶ್ವರಪ್ಪ

Follow Us:
Download App:
  • android
  • ios