Asianet Suvarna News Asianet Suvarna News

ಶೇ.0.18 ಜನರ ಮೇಲೆ ಅಡ್ಡಪರಿಣಾಮ, ಲಸಿಕೆ ಪಡೆಯಲು ಹಿಂದೇಟು: ಕೇಂದ್ರ ಬೇಸರ

ಲಸಿಕೆ ಪಡೆಯಲು ಹಿಂದೇಟು: ಕೇಂದ್ರ ಬೇಸರ| ಲಸಿಕೆ ಪಡೆದ ಶೇ.0.18 ಜನರ ಮೇಲೆ ಅಡ್ಡಪರಿಣಾಮ| ಕೇವಲ ಶೇ.0.002 ಜನ ಮಾತ್ರ ಆಸ್ಪತ್ರೆಗೆ| ಅಡ್ಡಪರಿಣಾಮ ನಗಣ್ಯ, ಹೆಚ್ಚು ಆತಂಕ ಬೇಡ| ಎರಡೂ ಲಸಿಕೆಗಳು ಸುರಕ್ಷಿತ: ಆರೋಗ್ಯ ಸಚಿವಾಲಯ

Hesitancy should end says Health Ministry as it dismisses concerns over adverse effects of COVID 19 vaccine pod
Author
Bangalore, First Published Jan 20, 2021, 10:30 AM IST

ನವದೆಹಲಿ(ಜ.20): ಕೊರೋನಾ ಲಸಿಕೆ ಪಡೆದ ಕೇವಲ ಶೇ.0.18 ಜನರ ಮೇಲೆ ಮಾತ್ರ ಅಡ್ಡಪರಿಣಾಮ ಉಂಟಾಗಿದೆ. ಕೇವಲ ಶೇ.0.002ರಷ್ಟುಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ವಿಶ್ವದಲ್ಲೇ ತೀರಾ ಕಮ್ಮಿ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆರೋಗ್ಯ (ಆರೋಗ್ಯ) ಸದಸ್ಯ ವಿ.ಕೆ. ಪೌಲ್‌, ‘ಲಸಿಕೆ ಪಡೆದ ನಂತರ ಉಂಟಾದ ಅಡ್ಡಪರಿಣಾಮಗಳು, ಅದರ ಗಂಭೀರತೆ ನಗಣ್ಯ. ಎರಡೂ ಲಸಿಕೆಗಳು ಸುರಕ್ಷಿತ’ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ‘ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಬೇಸರದ ವಿಚಾರ. ಹೀಗಾಗಿ ಜನರು ಲಸಿಕೆ ಪಡೆಯಲು ಮುಂದಾಗಬೇಕು’ ಎಂದು ಕೋರಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮಾತನಾಡಿ, ‘ ಕೇವಲ ಶೇ.0.18 ಜನರ ಮೇಲೆ ಮಾತ್ರ ಅಡ್ಡಪರಿಣಾಮ ಉಂಟಾಗಿದೆ. ಶೇ.0.002ರಷ್ಟುಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ವಿಶ್ವದಲ್ಲೇ ತುಂಬಾ ಕಮ್ಮಿ ಪ್ರಮಾಣ’ ಎಂದರು.

ಭಾರತದಲ್ಲಿ ಮೊದಲ ದಿನ 2,07,229 ಜನ ಲಸಿಕೆ ಪಡೆದಿದ್ದಾರೆ. ಅಮೆರಿಕದಲ್ಲಿ 79,458 ಹಾಗೂ ಬ್ರಿಟನ್‌ನಲ್ಲಿ 19,700 ಮಂದಿ ಲಸಿಕೆ ಪಡೆದಿದ್ದಾರೆ. ಹೀಗಾಗಿ ಲಸಿಕೆ ಪಡೆದ ಏಕದಿನದ ಗರಿಷ್ಠ ದಾಖಲೆ ಭಾರತದ ಪಾಲಿಗೆ ಸಂದಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios