Asianet Suvarna News Asianet Suvarna News

ಅಸ್ಸಾಂ, ಸಿಕ್ಕಿಂನಲ್ಲೂ ಭಾರಿ ಮಳೆ: ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ನೆರೆ, 34 ಸಾವಿರ ಜನ ಬಾಧಿ​ತ

ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ಭಾರಿ ಮಳೆ ಕಾರಣ ಪ್ರವಾಹ ಸೃಷ್ಟಿ​ಯಾ​ಗಿದ್ದು, 34 ಸಾವಿರ ಜನರು ಬಾಧಿ​ತ​ರಾ​ಗಿ​ದ್ದಾ​ರೆ.  ಇನ್ನೊಂದೆಡೆ ಸಿಕ್ಕಿಂನಲ್ಲಿ ಕೂಡ ಭಾರಿ ಮಳೆ ಬಿದ್ದು, ಅಲ್ಲಲ್ಲಿ ಭೂಕು​ಸಿತ ಸಂಭ​ವಿ​ಸಿವೆ.

Heavy rain in Assam and Sikkim flood in 11 districts of Assam, 34 thousand people affected akb
Author
First Published Jun 18, 2023, 7:29 AM IST | Last Updated Jun 18, 2023, 7:29 AM IST

ಗುವಾ​ಹ​ಟಿ/ಗ್ಯಾಂಗ್ಟ​ಕ್‌: ಇತ್ತ ಪೂರ್ವ ಭಾರ​ತದ ಗುಜ​ರಾ​ತ್‌​ನಲ್ಲಿ ಚಂಡ​ಮಾ​ರುತ ಅಬ್ಬ​ರಿ​ಸಿ​ದರೆ ಅತ್ತ ಈಶಾನ್ಯ ರಾಜ್ಯ​ಗಳು ಕೂಡ ಪ್ರವಾಹ ಸಂಕ​ಷ್ಟಕ್ಕೆ ಒಳ​ಗಾ​ಗಿವೆ. ಅಸ್ಸಾಂನ 11 ಜಿಲ್ಲೆ​ಗ​ಳಲ್ಲಿ ಭಾರಿ ಮಳೆ ಕಾರಣ ಪ್ರವಾಹ ಸೃಷ್ಟಿ​ಯಾ​ಗಿದ್ದು, 34 ಸಾವಿರ ಜನರು ಬಾಧಿ​ತ​ರಾ​ಗಿ​ದ್ದಾ​ರೆ.  ಇನ್ನೊಂದೆಡೆ ಸಿಕ್ಕಿಂನಲ್ಲಿ ಕೂಡ ಭಾರಿ ಮಳೆ ಬಿದ್ದು, ಅಲ್ಲಲ್ಲಿ ಭೂಕು​ಸಿತ ಸಂಭ​ವಿ​ಸಿವೆ. ಇದ​ರಿಂದಾಗಿ 3500 ಪ್ರವಾ​ಸಿ​ಗರು ಉತ್ತರ ಸಿಕ್ಕಿಂ ಜಿಲ್ಲೆಯ ಬೆಟ್ಟಗುಡ್ಡ​ಗ​ಳಲ್ಲಿ ಸಿಲುಕಿ​ದ್ದರು. ಭಾರ​ತೀಯ ಸೇನೆ (Indian Army) ಹಾಗೂ ವಿವಿಧ ರಕ್ಷಣಾ ಪಡೆ​ಗಳು ಅಲ್ಲಿಗೆ ತೆರಳಿ ಪ್ರವಾ​ಸಿ​ಗ​ರನ್ನು ರಕ್ಷಣೆ ಮಾಡಿವೆ. 19 ಬಸ್ಸು ಹಾಗೂ 70 ಸಣ್ಣ ವಾಹ​ನ​ಗ​ಳನ್ನು ಇವರ ರಕ್ಷ​ಣೆಗೆ ಸಿಕ್ಕಿಂ ಸರ್ಕಾರ (Sikkim Government) ನಿಯೋ​ಜಿ​ಸಿ​ತ್ತು.

ಅಸ್ಸಾಂ ಹೆಚ್ಚು ಬಾಧಿ​ತ:

ಭಾರಿ ಮಳೆಯ ಕಾರಣ ಅಸ್ಸಾಂ (Assam) ಹೆಚು ಬಾಧಿ​ತ​ವಾ​ಗಿದೆ. ಬ್ರಹ್ಮ​ಪುತ್ರ (River Brahma Putra) ಸೇರಿ ಅನೇಕ ನದಿ​ಗ​ಳಲ್ಲಿ ನೀರಿನ ಹರಿವು ಬಾರಿ ಹೆಚ್ಚಿದೆ. ಅನೇ​ಕ ಕಡೆ ಅಪಾಯದ ಮಟ್ಟಮೀರಿ ನದಿ ಹರಿ​ಯು​ತ್ತಿದೆ. ಕೆಲವು ಕಡೆ ಬಾಂದಾ​ರ​ಗಳು ಒಡೆ​ದಿವೆ. 34 ಸಾವಿರ ಜನರು ಪ್ರವಾ​ಹ​ದಿಂದ ಬಾಧಿತ​ರಾ​ಗಿ​ದ್ದಾರೆ. ಲಖೀಂಪುರ ಜಿಲ್ಲೆ​ಯಲ್ಲಿ ಹೆಚ್ಚು ಜನ (23,516) ಸಂತ್ರ​ಸ್ತ​ರಾ​ಗಿದ್ದು, ದಿಬ್ರು​ಗಢ (3857), ಡರಾಂಗ್‌ (2231), ಬಿಶ್ವ​ನಾಥ್‌ (2231) ಹಾಗೂ ಧೇಮಾ​ಜಿ (1085 ಸಂತ್ರಸ್ತರು) ನಂತ​ರದ ಸ್ಥಾನ​ದ​ಲ್ಲಿ​ವೆ. 77 ಗ್ರಾಮ​ಗಳು ಪ್ರವಾ​ಹ​ಪೀ​ಡಿ​ತ​ವಾ​ಗಿ​ದ್ದು, 209 ಹೆಕ್ಟೇರ್‌ ಭೂಮಿಯ​ಲ್ಲಿನ ಬೆಳೆ ಹಾಳಾ​ಗಿ​ದೆ.

ಮಳೆ ಪ್ರವಾಹಕ್ಕೆ ಮನೆ ಕಳೆದುಕೊಂಡವರನ್ನು ನಡುನೀರಲ್ಲಿ ಕೈಬಿಟ್ಟ ಸರ್ಕಾರ

Latest Videos
Follow Us:
Download App:
  • android
  • ios