Asianet Suvarna News Asianet Suvarna News

ಪುಣೆಯಲ್ಲಿ 3000 ಕೋಟಿ ಮೌಲ್ಯದ ಭಾರೀ ಡ್ರಗ್ಸ್‌ ಜಪ್ತಿ

ಮಹಾರಾಷ್ಟ್ರ ಪೊಲೀಸರು ಅತಿ ದೊಡ್ಡ ಡ್ರಗ್ಸ್‌ ಜಾಲವನ್ನು ಭೇದಿಸಿದ್ದು, 3000 ಕೋಟಿ ರು. ಮೌಲ್ಯದ ಮೆಫೆಡ್ರೋನ್‌ (ಎಂಡಿ) ವಶಪಡಿಸಿಕೊಂಡಿದ್ದಾರೆ. ಪುಣೆ ಹಾಗೂ ದೆಹಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಜಾಲ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Heavy drug Mephedrone worth 3000 crore seized in Pune akb
Author
First Published Feb 21, 2024, 7:49 AM IST

ಪುಣೆ: ಮಹಾರಾಷ್ಟ್ರ ಪೊಲೀಸರು ಅತಿ ದೊಡ್ಡ ಡ್ರಗ್ಸ್‌ ಜಾಲವನ್ನು ಭೇದಿಸಿದ್ದು, 3000 ಕೋಟಿ ರು. ಮೌಲ್ಯದ ಮೆಫೆಡ್ರೋನ್‌ (ಎಂಡಿ) ವಶಪಡಿಸಿಕೊಂಡಿದ್ದಾರೆ. ಪುಣೆ ಹಾಗೂ ದೆಹಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಜಾಲ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಿಯಾಂವ್‌ ಮಿಯಾಂವ್‌ ನಶೆ ಎಂದೇ ಕುಖ್ಯಾತವಾಗಿರುವ ಈ ನಿಷೇಧಿತ ಮೆಫಡ್ರೋನ್‌ ಡ್ರಗ್‌ ಜಾಲವನ್ನು ಪುಣೆ ಪೊಲೀಸರು ಬೇಧಿಸಿದ್ದು, ಬರೋಬ್ಬರಿ 3000 ಕೋಟಿ ರು. ಮೌಲ್ಯದ 1700 ಕೆ.ಜಿಗೂ ಅಧಿಕ ಮೊತ್ತದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ಭಾನುವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದುವರೆಗೂ 4 ಹಂತಗಳಲ್ಲಿ 1700 ಕೆಜಿಗೂ ಅಧಿಕ ತೂಕದ ಮೆಫಡ್ರೋನ್‌ ಡ್ರಗ್ಸ್‌ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮೆಫಿಡ್ರೋನ್‌ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಯುವಕರು ಕೊರಿಯರ್‌ ಬಾಯ್ಸ್‌ ರೀತಿಯಲ್ಲಿ ಪೋಷಾಕು ಧರಿಸಿ ಓಡಾಡಿಕೊಂಡಿದ್ದರು. ಅವರ ವಿರುದ್ಧ ಇದಕ್ಕೂ ಮೊದಲು ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್‌ ಹೆಸರಲ್ಲಿ ಬೆಂಗಳೂರು ಐಟಿ ಕಂಪನಿ ಸ್ಥಾಪಕನಿಗೆ ಮೋಸ, ಕಳೆದುಕೊಂಡಿದ್ದು 2.30 ಕೋಟಿ ರೂಪಾಯಿ!

ಎಂಟನೇ ವಯಸ್ಸಲ್ಲಿ ಡ್ರಗ್ ಅಡಿಕ್ಟ್ ಆಗಿ ಜೈಲಿಗೆ ಹೋಗಿದ್ದ ನಟ, ಈಗ ಅತಿ ಹೆಚ್ಚು ಸಂಭಾವನೆ ಪಡೆಯೋ ಸೂಪರ್‌ ಸ್ಟಾರ್!
 

Follow Us:
Download App:
  • android
  • ios