ಬಿಹಾರದ ವೈಶಾಲಿಯಲ್ಲಿ ಆಶಾದೇವಿ ಎಂಬ ಮಹಿಳೆಯ ಶವದ ಪಕ್ಕದಲ್ಲಿ ಆಕೆಯ ಮಗು ಆಟವಾಡುತ್ತಿದ್ದ ಹೃದಯವಿದ್ರಾವಕ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನವದೆಹಲಿ: ಸ್ಥಳ ಬಿಹಾರದ ವೈಶಾಲಿ. ಆಶಾದೇವಿ ಅವರ ಕುಟುಂಬ ಇಲ್ಲಿ ನೆಲೆಸಿತ್ತು. ಮೊನ್ನೆ ಮನೆಯ ಬಾಗಿಲು ತೆರೆದಿತ್ತು. ಸ್ಥಳೀಯರು ಬಾಗಿಲು ತೆರೆದಿರೋದನ್ನ ನೋಡಿದ್ದರು. ಆದರೆ ಮನೆಯಲ್ಲಿ ಯಾರು ಇದ್ದಾರೆ ಎಂಬ ಸುಳಿವು ಸಿಕ್ಕಿರಲಿಲ್ಲ. ಕಂದಮ್ಮನ ತೊದಲ ನುಡಿಗಳು ಮಾತ್ರ ಆಗಾಗ ಕೇಳುತ್ತಿದ್ದವು. ಇದರಿಂದ ಅನುಮಾನಗೊಂಡ ಜನರು ಹತ್ತಿರ ಹೋಗಿ ನೋಡಿದ್ದಾರೆ. 22 ವರ್ಷದ ಆಶಾದೇವಿ ಮಲಗಿದ್ದಳು. ಪಕ್ಕದಲ್ಲಿ ಮಗು ಗೊಂಬೆಗಳ ಜೊತೆ ಆಟವಾಡುತ್ತ ಇತ್ತು..

ಅಲ್ಲಿ ಆಶಾದೇವಿ ನಿದ್ರೆ ಮಾಡುತ್ತಿರಲಿಲ್ಲ. ಬದಲಾಗಿ ಹೆಣವಾಗಿ ಮಲಗಿದ್ದಳು. ಏನಾಗಿದೆ ಎಂದು ಪರಿಚಯಸ್ಥರು ಹೋಗಿ ನೋಡಿದಾಗ.. ಆ ಮಗು ಗೊಂಬೆಗಳ ಜೊತೆ ಆಟವಾಡುತ್ತ ಅಮ್ಮನನ್ನ ಕರೆಯುತ್ತಿದ್ದಳು. ಅಮ್ಮ ಮಲಗಿದ್ದಾಳೆ, ಎಚ್ಚರಗೊಂಡ ಮೇಲೆ ಎದ್ದು ತನ್ನನ್ನು ನೋಡುತ್ತಾಳೆ ಎಂಬ ನಿರೀಕ್ಷೆಯಲ್ಲಿ ಆ ಮಗು ಇತ್ತು. ಆದರೆ ಅಲ್ಲಿ ಆಕೆಯನ್ನ ಸಮಾಧಾನ ಮಾಡಲು ಯಾರೂ ಇರಲಿಲ್ಲ.

ಅಸಲಿಗೆ ಆಗಿದ್ದೇನು?

ವೈಶಾಲಿ ಜಿಲ್ಲೆಯ ಬಿದುಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳೀಯರೊಬ್ಬರು ಮಗುವಿನ ಸ್ಥಿತಿ ನೋಡಿ ಒಳಗೆ ಹೋಗಿ ನೋಡಿದಾಗಲೇ ಸತ್ಯ ಗೊತ್ತಾಗಿದೆ. ಮಗುವಿನ ತಾಯಿ ಮೃತಪಟ್ಟಿರೋದನ್ನ ತಿಳಿದು ಆಕೆಯ ಕುಟುಂಬಸ್ಥರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅಲ್ಲಿಗೆ ಪೊಲೀಸರು ಹಾಗೂ ಆಶಾ ದೇವಿ ಹೆತ್ತವರು ದೌಡಾಯಿಸಿ ವಿಚಾರಿಸಿದ್ದಾರೆ. ಈ ವೇಳೆ ಅಸಲಿ ಆಶಾ ಸಾವನ್ನಪ್ಪಿರೋದು ಗೊತ್ತಾಗಿದೆ.

ಆಶಾ ಎರಡೂವರೆ ವರ್ಷಗಳ ಹಿಂದೆ ಮಧುರಾಪುರ ಗ್ರಾಮದ ವಿಲಾಸ್ ಪಾಸ್ವಾನ್ ಅವರ ಮಗ ಸುಜಿತ್ ಪಾಸ್ವಾನ್ ಜೊತೆ ಮದುವೆ ಆಗಿದ್ದರು. ಇಬ್ಬರಿಗೂ ಇದು ಎರಡನೇ ವಿವಾಹ. ಸುಜಿತ್ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆಶಾ ಮೊದಲ ಪತಿ ಕೂಡ ಅನಾರೋಗ್ಯದಿಂದ ನಿಧನರಾಗಿದ್ದರು. ಮತ್ತು ಆ ಮದುವೆಯಿಂದ ಇಬ್ಬರಿಗೆ ಅನ್ಶಿಕಾ ಎಂಬ ಮಗಳು ಹುಟ್ಟಿದ್ದಾಳೆ. ಕುಟುಂಬದವರ ಪ್ರಕಾರ.. ಮದುವೆಗೆ ಮೊದಲೇ ಎರಡೂ ಕಡೆಯವರಿಗೆ ಮಕ್ಕಳ ಬಗ್ಗೆ ತಿಳಿದಿತ್ತು.

ಮಕ್ಕಳ ವಿಚಾರಕ್ಕೆ ದಂಪತಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಕಳೆದ ಭಾನುವಾರ ಕೂಡ ಇದೇ ವಿಚಾರಕ್ಕೆ ದೊಡ್ಡದಾಗಿ ಜಗಳ ಆಗಿದೆ. ನಂತರ ಸುಜಿತ್, ಕೋಲಿನಿಂದ ಹೊಡೆದು ಆಶಾಳನ್ನ ಸಾಯಿಸಿ ಪರಾರಿ ಆಗಿದ್ದಾನೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

ಬೆನ್ನಲ್ಲೇ ಆರೋಪಿಯ ಕುಟುಂಸ್ಥರು ಕೂಡ ಕಾಣೆಯಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಆಶಾ ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಆಶಾ ಮೇಲೆ ಗಾಯದ ಗುರುತುಗಳು ಪತ್ತೆ ಆಗಿದೆ. ಆಕೆಯ ಪತಿಯೇ ಹೊಡೆದು ಜೀವ ತೆಗೆದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಎದ್ದಿರುವ ಪ್ರಶ್ನೆ ಏನೆಂದರೆ.. ಅಂಶಿಕಾಳನ್ನು ಯಾರು ನೋಡಿಕೊಳ್ಳುತ್ತಾರೆ? ಆಶಾ ಸಾವನ್ನಪ್ಪಿದ್ದು ಹೇಗೆ? ನಿಜಕ್ಕೂ ಇಬ್ಬರ ಮಧ್ಯೆ ಏನಾಗಿತ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿತು.