ನವದೆಹಲಿ(ಏ.18): ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ಆರಂಭವಾದಾದ ಇದು 60 ವಯಸ್ಸು ದಾಟಿದವರಿಗೆ ಹೆಚ್ಚಾಗಿ ಸೋಂಕು ತಗುಲುತ್ತಿದೆ ಎಂದು ಹಲವರು ನಿರಾಳರಾಗಿದ್ದರು. ಹಿರಿಯರು ಹೊರಗೆ ಹೋಗಲೇ ಬಾರದು, ಉಳಿದವರು ಎಚ್ಚರಿವಿದ್ದರೆ ಸಾಕು ಎಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ದಿನದಿಂದ ದಿನಕ್ಕೆ ಕೊರೋನಾ ಎಲ್ಲಾ ವಯಸ್ಸಿಗರನ್ನೂ ಆವರಿಸಿಕೊಂಡಿತು. ಇದೀಗ ಕೊರೋನಾಗೆ ಬಲಿಯಾದವರ ಸಂಖ್ಯೆ 480ಕ್ಕೇರಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ಅಂಕಿ ಅಂಶ ಬಿಡುಗಡೆ ಮಾಡಿದೆ.

ಕೊರೋನಾ ನಿವಾರಣೆಗೆ ಹೊಸದೊಂದು 'ಬೆಂಕಿ ಟಿಪ್ಸ್' ನೀಡಿದ ಆರೋಗ್ಯ ಸಚಿವ ಶ್ರೀರಾಮುಲು..!.

ಕೊರೋನಾಗೆ ಮೃತರಾದ 480 ಮಂದಿಯಲ್ಲಿ ಎಲ್ಲಾ ವಯಸ್ಸಿನವರು ಇದ್ದಾರೆ. ಇಲ್ಲಿ ಹಸುಗೂಸಿನಿಂದ ಹಿಡಿದು ಅತ್ಯಂತ ಹಿರಿಯ ನಾಗರೀಕರೂ ಕೊರೋನಾಗೆ ಬಲಿಯಾಗಿದ್ದಾರೆ. ಆದರೆ ಗರಿಷ್ಠ ಬಲಿಯಾದವರ ವಯಸ್ಸು 60 ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಭಾರತದಲ್ಲಿ ಕೊರೋನಾಗೆ ಬಲಿಯಾದ ಶೇಕಡಾ 75.3 ರಷ್ಟು ಮಂದಿಯ ವಯಸ್ಸು 60 ದಾಟಿದೆ.

ಅಬ್ಬಬ್ಬಾ..! ಕರ್ನಾಟಕದಲ್ಲಿ 370ರ ಗಡಿ ದಾಟಿದ ಕೊರೋನಾ ಪೀಡಿತರ ಸಂಖ್ಯೆ..!.

ಯಾವ ವಯಸ್ಸಿಗರನ್ನು ಬಲಿ ಪಡೆದಿದೆ ಕೊರೋನಾ? ಇಲ್ಲಿದೆ ಅಂಕಿ ಅಂಶ
0 ಯಿಂದ 45 ವರ್ಷ ವಯೋಮಿತಿ = 14.4% ರಷ್ಟು ಮಂದಿ ಕೊರೋನಾಗೆ ಬಲಿ
45 ಯಿಂದ 60 ವರ್ಷ ವಯೋಮಿತಿ = 10.3% ರಷ್ಟು ಮಂದಿ ಕೊರೋನಾಗೆ ಬಲಿ
60 ಯಿಂದ 75 ವರ್ಷ ವಯೋಮಿತಿ = 33.1% ರಷ್ಟು ಮಂದಿ ಕೊರೋನಾಗೆ ಬಲಿ
75 ವರ್ಷಕ್ಕಿಂತ ಮೇಲ್ಪಟ್ಟವರು = 42.2% ರಷ್ಟು ಮಂದಿ ಕೊರೋನಾಗೆ ಬಲಿ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14,378ಕ್ಕೇರಿದೆ. ಇದರಲ್ಲಿ ತಬ್ಲೀಘಿ ಜಮಾತ್ ನಂಟಿನ ಸಂಖ್ಯೆ 4291. ಕಳೆದ 24 ಗಂಟೆಯಲ್ಲಿ 991 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. 1,992 ಮಂದಿ ಕೊರೋನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ.