ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಅಭಿಯಾನ ವಿಸ್ತರಿಸಿದ ಕೇಂದ್ರ ಆರೋಗ್ಯ ಇಲಾಖೆ
- ಕೊರೋನಾ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ
- ಗರ್ಭಿಣಿಯರಿಗೆ ಲಸಿಕೆಗೆ ವಿಸ್ತರಿಸಿದ ನೀಡಿದ ಕೇಂದ್ರ ಆರೋಗ್ಯ ಇಲಾಖೆ
- ಕೋವಿನ್ ಮೂಲಕ ನೋಂದಣಿ ಅಥವಾ ವಾಕ್ ಇನ್ ಮೂಲಕ ಲಸಿಕೆ
ನವದೆಹಲಿ(ಜು..02): ಕೊರೋನಾ ವೈರಸ್ ನಿಯಂತ್ರಿಸಲು ದೇಶದಲ್ಲಿ ಲಸಿಕಾ ಅಭಿಯಾನ ವೇಗದಲ್ಲಿ ನಡೆಯುತ್ತಿದೆ. ಆದರೆ ಮಕ್ಕಳಿಗೆ ಗರ್ಭಿಣಿ ಮಹಿಳೆಯರಿಗೆ ಲಸಿಕೆ ಎಷ್ಟು ಸುರಕ್ಷಿತ ಅನ್ನೋ ಕುರಿತು ಹಲವು ಅನುಮಾನ ಕಾಡುತ್ತಲೇ ಇತ್ತು. ಇತ್ತ ಲಸಿಕೆ ಕೊರತೆ, ಹಂತ ಹಂತವಾಗಿ ಲಸಿಕಾ ಅಭಿಯಾನ ವಿಸ್ತರಣೆಯಿಂದ ಗರ್ಭಿಣಿಯರಿಗೆ ಲಸಿಕೆ ನೀಡುವ ಕುರಿತು ಕೇಂದ್ರ ಯಾವುದೇ ಅಧೀಕೃತ ಪ್ರಕಟಣೆ ಹೊರಡಿಸಿರಲಿಲ್ಲ. ಇದೀಗ ಎಲ್ಲಾ ಗೊಂದಲಗಳನ್ನು ನಿವಾರಿಸಿರುವ ಕೇಂದ್ರ ಆರೋಗ್ಯ ಇಲಾಖೆ, ಇದೀಗ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮತಿ ನೀಡಿದೆ.
ಅಪಾಕಾರಿ ಡೆಲ್ಟಾ ವೈರಸ್ ವಿರುದ್ಧ ಜಾನ್ಸನ್ ಲಸಿಕೆ ಪರಿಣಾಮಕಾರಿ; ಅಧ್ಯಯನ ವರದಿ!.
ಗರ್ಭಿಣಿಯರು ಕೋವಿನ್ ಆ್ಯಪ್ ಮೂಲಕ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬಹುದು ಅಥವಾ ಹತ್ರಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಸೂಚಿಸಿದೆ. ಗರ್ಭಿಣಿಯರಿಗೆ ಲಸಿಕೆ ಸುರಕ್ಷಿತ ಅನ್ನೋದು ಈಗಾಗಲೇ ಸಾಬೀತಾಗಿದೆ. ಆದರೆ ಕೇಂದ್ರ ಲಸಿಕಾ ಅಭಿಯಾನ ಹಂತ ಹಂತವಾಗಿ ವಿಸ್ತರಿಸಲಾಗಿತ್ತು. 60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯ ಸಮಸ್ಯೆ ಇದ್ದವರು, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಆರಂಭಿಸಿತು. ಇದೀಗ ಗರ್ಭಿಣಿಯರಿಗೂ ಕೇಂದ್ರ ಲಸಿಕೆ ವಿಸ್ತರಿಸಿದೆ.
ವ್ಯಾಕ್ಸಿನ್ ಬಂದಿಲ್ಲ ಎಂದ ರಾಹುಲ್: ಅಜ್ಞಾನಕ್ಕೆ ವ್ಯಾಕ್ಸಿನ್ ಇಲ್ಲ ಎಂದ ಆರೋಗ್ಯ ಸಚಿವ!
ಗರ್ಭಿಣಿಯರಿಗೆ ಲಸಿಕೆ ಸುರಕ್ಷಿತ ಎಂದು ನೀತಿ ಆಯೋಗ ಶಿಫಾರಸು ಮಾಡಿದ ಬೆನ್ನಲ್ಲೇ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲಾವ್ ಅಗರ್ವಾಲ್ ಪ್ರಕಟಣೆ ಹೊರಡಿಸಿದ್ದಾರೆ. ಇದೀಗ ಗರ್ಭಿಣಿ ಮಹಿಳೆಯರು ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು.