ನವದೆಹಲಿ[ಫೆ.26]: ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಅನೇಕ ವಿಡಿಯೋಗಳು ದಿಗ್ರ್ಭಮೆ ಮೂಡಿಸುತ್ತವೆ. ಸದ್ಯ ಇಂತಹುದೇ ವಿಡಿಯೋ ಒಂದು ಯೂ ಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರುಂಡವಿಲ್ಲದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ವಿಡಿಯೋ ಭಾರೀ ವೇಗವಾಗಿ ಶೇರ್ ಆಗಲಾರಂಭಿಸಿದೆ.

ಟ್ರಾಫಿಕ್ ನಿಂದ ಕೂಡಿದ ರಸ್ತೆಯಲ್ಲಿ, ತಲೆ[ರುಂಡ]ವಿಲ್ಲದ ವ್ಯಕ್ತಿ ರಸ್ತೆ ದಾಟುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಶಾರ್ಟ್ಸ್ ಮತ್ತು ಶರ್ಟ್ ಧರಿಸಿರುವ ವ್ಯಕ್ತಿ ಕೈಯ್ಯಲ್ಲಿ ಕೆಂಪು ಬಣ್ಣದ ಬ್ಯಾಗ್ ಹಿಡಿದಿದ್ದಾನೆ. ವಿಚಿತ್ರವೆಂದರೆ ವಾಹನಗಳು ಓಡಾಡುತ್ತಿರುವ ರಸ್ತೆಯಲ್ಲಿ ಅತ್ತ ರುಂಡವಿಲ್ಲದ ವ್ಯಕ್ತಿ ಸಲೀಸಾಗಿ ರಸ್ತೆ ದಾಡುತ್ತಿದ್ದು, ಇತ್ತ ವಾಹನ ಚಾಲಕರು ಕೂಡಾ ಯಾವುದೇ ಪ್ರತಿಕ್ರಿಯೆ ಇಲ್ಲದೇ ತೆರಳಿದ್ದಾರೆ.

ಫೇಬರಿ ಎಡಿಕ್ಸನ್ ಹೆಸರಿನ ಯೂಟ್ಯೂಬ್ ಚಾನೆಲ್ ಈ ವಿಡಿಯೋ ಶೇರ್ ಮಾಡಿಕೊಂಡಿದೆ. ಟಿಕ್ ಟಾಕ್, ಫೇಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ಈ ಘಟನೆ ನಡೆದಿದ್ದೆಲ್ಲ? ಇದು ಅಸಲಿಯೋ? ನಕಲಿಯೋ ಎಂಬುವುದು ಇನ್ನೂ ತಿಳಿದು ಬಂದಿಲ್ಲ. 

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"