Asianet Suvarna News Asianet Suvarna News

ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ದೇವೇಗೌಡರ ಬೆಂಬಲ; ಜನರಲ್ಲಿ ಮನವಿ!

ದೇಶದಲ್ಲಿ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಂಜಾಗ್ರತ ಕ್ರಮವಾಗಿ ಪ್ರಧಾನಿ ಮೋದಿ ಇದೇ ಭಾನುವಾರ(ಮಾ.22) ಜನತಾ ಕರ್ಫ್ಯೂ ಹೇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇದೀಗ ಮೋದಿ ಮನವಿಯನ್ನು ಮಾಜಿ ಪ್ರಧಾನಿ ದೇವೇಗೌಡ ಬೆಂಬಲಿಸಿದ್ದು, ಜನರಲ್ಲಿ ಮನವಿ ಮಾಡಿದ್ದಾರೆ. 

HD Deve gowda support PM Modi Janata Curfew request on Coronavirus
Author
Bengaluru, First Published Mar 20, 2020, 9:23 PM IST

ಬೆಂಗಳೂರು(ಮಾ.20): ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ಹರಡದಂತೆ ತಡೆಯಲು ಜನರಲ್ಲಿ ಸ್ವಯಂ ದಿಗ್ಬಂಧನದಲ್ಲಿ ಇರಲು ಮನವಿ ಮಾಡಿದ್ದಾರೆ. ಭಾನುವಾರ(ಮಾ.22)ರಂದು ಜನತಾ ಕರ್ಫ್ಯೂ ಹೇರಬೇಕೆಂದು ಕೋರಿದ್ದಾರೆ. ಮೋದಿ ನಿರ್ಧಾರಕ್ಕೆ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಬೆಂಬಲ ಸೂಚಿಸಿದ್ದಾರೆ. 

ಕೊರೋನಾ ವೈರಸ್‌ನಿಂದ ದೇಶವನ್ನ ಉಳಿಸಲು ನಮೋ ಮಂತ್ರ..!

ಮೋದಿ ಮನವಿಯನ್ನು ಬೆಂಬಲಿ ದೇವೇಗೌಡ, ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಜನತಾ ಕರ್ಫ್ಯೂ ಹಾಗೂ ಜನರ ಕರ್ತವ್ಯದ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ದೇಶಕ್ಕೆ ಆವರಿಸಿರುವ ಮಹಾಮಾರಿ ಕೊರೋನಾ ವೈರಸ್ ತಡೆಯಲು ಪ್ರಧಾನಿ ಮನವಿಯನ್ನು ಪಾಲಿಸಬೇಕು. ಮೋದಿ ಮಾತಿನಲ್ಲಿ ರಾಜಕೀಯ ಹುಡುಕಬೇಡಿ ಎಂದು ದೇವೇಗೌಡ ಹೇಳಿದ್ದಾರೆ.

ರಾಜಕೀಯ ಜೀವನದ ಅನುಭವ ಅರಿತು ಹೇಳುತ್ತಿದ್ದೇನೆ, ಮಾರಣಾಂತಿರ ವೈರಸ್‌ನಿಂದ ಮುಕ್ತರಾಗಲು ಸರ್ಕಾರ, ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಮನವಿ ಮಾಡಿರುವುದು ಸರಿಯಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಎಲ್ಲರು ಜೊತೆಯಾಗಿ ಹೋರಾಡೋಣ, ಕೊರೋನಾ ರೋಗವನ್ನು ತೊಲಗಿಸೋಣ ಎಂದು ದೇಶದ ಜನತೆಯಲ್ಲಿ ದೇವೇಗೌಡ ಮನವಿ ಮಾಡಿದ್ದಾರೆ. 
 

Follow Us:
Download App:
  • android
  • ios