ನವದೆಹಲಿ[ಮಾ.12]: ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರೂ ದೋಷಿಗಳ ಸಂದರ್ಶನ ಬಯಸಿ ಮಾಧ್ಯಮ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟು, ತಿಹಾರ್‌ ಜೈಲಧಿಕಾರಿಗಳಿಗೆ ಸೂಚಿಸಿದೆ.

ಗುರುವಾರ ನಿರ್ಣಯವನ್ನು ತನಗೆ ತಿಳಿಸುವಂತೆ ಕೂಡ ಜೈಲಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ಡೆತ್‌ ವಾರಂಟ್‌ ಹೊರಡಿಸಿದ ಬಳಿಕ ದೋಷಿಗಳಿಗೆ ವಕೀಲರ ಭೇಟಿಗೆ ಅವಕಾಶ ಕೊಡಬಾರದು ಎಂಬ ನಿಯಮವನ್ನು ಈಗಾಗಲೇ ಜೈಲಧಿಕಾರಿಗಳು ಮುರಿದಿದ್ದಾರೆ. ಹೀಗಾಗಿ ಸಂದರ್ಶನಕ್ಕೆ ಅವಕಾಶ ಕೊಡುವ ಬಗ್ಗೆಯೂ ಪರಿಶೀಲಿಸಿ ಎಂದು ಜೈಲಧಿಕಾರಿಗಳಿಗೆ ಕೊರ್ಟ್‌ ಸೂಚಿಸಿದೆ.

ಇದೇ ವೇಳೆ ದೋಷಿ ಪವನ್‌ ಗುಪ್ತಾ ದಿಲ್ಲಿ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾನೆ. ತನ್ನ ಮೇಲೆ ದೌರ್ಜನ್ಯ ಎಸಗಿದ ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಆತ ಕೋರಿದ್ದಾನೆ. ಗುರುವಾರ ಇದರ ವಿಚಾರಣೆ ನಡೆಯಲಿದೆ.