Asianet Suvarna News Asianet Suvarna News

ಕಾಂಗ್ರೆಸ್ಸಿಗೆ 170 ಕೋಟಿ ಹವಾಲಾ ದೇಣಿಗೆ ಬಿಸಿ?

ಕಾಂಗ್ರೆಸ್ಸಿಗೆ ಹವಾಲಾ ಕಂಟಕ? ಹವಾಲಾ ನಂಟಿನ ಕಂಪನಿಯಿಂದ 170 ಕೋಟಿ ದೇಣೀಗೆ |  ಸ್ಪಷ್ಟನೆ ಕೋರಿ ಕಾಂಗ್ರೆಸ್ಸಿಗೆ ತೆರಿಗೆ ಇಲಾಖೆ ನೋಟಿಸ್‌ ಜಾರಿ

Hawala probe Congress IT show cause notice for receiving Rs 170 crore funds
Author
Bengaluru, First Published Dec 4, 2019, 11:45 AM IST

ನವದೆಹಲಿ (ಡಿ. 04):  ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದೆ ಎನ್ನಲಾದ ಹೈದರಾಬಾದ್‌ ಮೂಲದ ಕಂಪನಿಯೊಂದರಿಂದ 170 ಕೋಟಿ ರು. ದೇಣಿಗೆ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ ಪಕ್ಷಕ್ಕೆ ನೋಟಿಸ್‌ ಜಾರಿ ಮಾಡಿದೆ.

ಹೈದರಾಬಾದ್‌ನಲ್ಲಿ ಮೇಘಾ ಇನ್‌ಫ್ರಾಸ್ಟ್ರಕ್ಚರ್‌ ಆ್ಯಂಡ್‌ ಎಂಜಿನಿಯರಿಂಗ್‌ ಎಂಬ ನಿರ್ಮಾಣ ಸಂಸ್ಥೆಯಿದೆ. ಇದರ ವಿರುದ್ಧ ನಕಲಿ ಬಿಲ್‌ ಸೃಷ್ಟಿಹಾಗೂ ಹವಾಲಾ ವ್ಯವಹಾರ ಮಾಡಿದ ಆರೋಪವಿದೆ. ಸುಮಾರು 3 ಸಾವಿರ ಕೋಟಿ ರು. ಮೌಲ್ಯದ ಹವಾಲಾ ಜಾಲದ ಕೇಸು ಇದಾಗಿದೆ.

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

ಈ ಕಂಪನಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ 170 ಕೋಟಿ ರು. ಸಂದಾಯವಾದ ಮಾಹಿತಿ ಈಗ ಆದಾಯ ತೆರಿಗೆ ಇಲಾಖೆಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಸ್ಪಷ್ಟೀಕರಣ ಬಯಸಿ ನೋಟಿಸ್‌ ಜಾರಿ ಮಾಡಲಾಗಿದೆ.

ಇದಲ್ಲದೆ, ಕಾಂಗ್ರೆಸ್‌ ಪಕ್ಷ ಹಾಗೂ ಹೈದರಾಬಾದ್‌ ಮೂಲದ ಒಂದು ರಾಜಕೀಯ ಪಕ್ಷವೊಂದರ ಕೆಲವು ಮುಖಂಡರ ಮೇಲೂ ಇದೇ ಪ್ರಕರಣದಲ್ಲಿ ಐಟಿ ಇಲಾಖೆ ಕಣ್ಣಿಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ನವೆಂಬರ್‌ನಲ್ಲಿ ದಿಲ್ಲಿ, ಮುಂಬೈ, ಹೈದರಾಬಾದ್‌, ಈರೋಡ್‌, ಆಗ್ರಾ ಹಾಗೂ ಗೋವಾದ ಕೆಲವು ವ್ಯಕ್ತಿಗಳ ಮೇಲೆ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಈ ವೇಳೆ ದೊಡ್ಡ ಕಾರ್ಪೋರೆಟ್‌ ಕಂಪನಿಗಳಿಂದ ಸುಮಾರು 3 ಸಾವಿರ ಕೋಟಿ ರು. ಮೌಲ್ಯದ ನಕಲಿ ಬಿಲ್‌ ಸೃಷ್ಟಿ, ತೆರಿಗೆ ವಂಚನೆ ಹಾಗೂ ಹವಾಲಾ ವ್ಯವಹಾರ ನಡೆದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಒಂದು ದೇಶ, ಒಂದು ಪಡಿತರ ಚೀಟಿ ಜೂ.1 ರಿಂದ

ಸಾರ್ವಜನಿಕ ಮೂಲಸೌಕರ್ಯ ಯೋಜನೆಗೆ ಮೀಸಲಾಗಿದ್ದ ಹಣವನ್ನು ಲಾಬಿಗಾರರು ಹಾಗೂ ಹವಾಲಾ ಡೀಲರ್‌ಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಆಂಧ್ರಪ್ರದೇಶದ ಪ್ರಮುಖ ವ್ಯಕ್ತಿಯೊಬ್ಬರಿಗೆ 150 ಕೋಟಿ ರು. ನಗದು ಪಾವತಿ ನಡೆದ ಬಗ್ಗೆ ಕೂಡ ಸಾಕ್ಷ್ಯ ಲಭಿಸಿತ್ತು. ದಾಳಿ ವೇಳೆ 4.19 ಕೋಟಿ ರು. ನಗದು, 3.2 ಕೋಟಿ ರು. ಮೌಲ್ಯದ ಚಿನ್ನಾಭರಣ ಲಭಿಸಿದ್ದವು.

Follow Us:
Download App:
  • android
  • ios