ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ ಎಂದು ತಮ್ಮದೇ ಕಾಂಗ್ರೆಸ್ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಜನವರಿ 1, 2024): ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಬಹುದು ಮತ್ತು ಅವರ ನಿರ್ಧಾರಗಳನ್ನು ಟೀಕಿಸಬಹುದು. ಆದರೆ ಮೋದಿಯನ್ನು ದ್ವೇಷಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ.
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು ‘ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ’ ಎಂದು ತಮ್ಮದೇ ಕಾಂಗ್ರೆಸ್ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರಾಮ ಭಜನೆ ಹಾಡಿ ಶೇರ್ ಮಾಡಿ: ಮನ್ ಕೀ ಬಾತ್‌ನಲ್ಲಿ ಮೋದಿ ಕರೆ
ಅಲ್ಲದೇ ‘ರಾಮನನ್ನು ವಿರೋಧಿಸುವವರು ನಾಸ್ತಿಕರು. ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣವನ್ನು ಪಡೆದವರು ಅದೃಷ್ಟವಂತರು ಮತ್ತು ಹೋಗದಿದ್ದರೆ ಅದು ಅವರ ದೌರ್ಭಾಗ್ಯ’ ಎಂದು ಮಂದಿರ ಉದ್ಘಾಟನೆಗೆ ಹೋಗದಿರಲು ನಿರ್ಧರಿಸಿರುವ ಟಿಎಂಸಿ ಹಾಗೂ ಎಡಪಕ್ಷಗಳನ್ನು ಟೀಕಿಸಿದ್ದಾರೆ.
ಪಾಕಿಸ್ತಾನಿಗಳು ಕೂಡ ರಾಮನನ್ನು ದ್ವೇಷಿಸಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಭಾರತದಲ್ಲಿ ದ್ವೇಷ ಸರಿಯೇ ಎಂದೂ ತಮ್ಮದೇ ನಾಯಕರಿಗೆ ಕುಟುಕಿದ್ದಾರೆ.
ಇದನ್ನು ಓದಿ: ಕ್ಯೂಆರ್ ಕೋಡ್ ಮೂಲಕ ರಾಮ ಮಂದಿರ ದೇಣಿಗೆ ಸಂಗ್ರಹ ವಂಚನೆ ಬಯಲು, VHP ಎಚ್ಚರಿಕೆ!
