ಚಂಡೀಗಢ(ಡಿ.02): ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಬಲಪ್ರಯೋಗ ಮಾಡಿದ ಸರ್ಕಾರದ ನಿಲುವನ್ನು ಖಂಡಿಸಿ ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹರಾರ‍ಯಣದ ಪಕ್ಷೇತರ ಶಾಸಕ ಸೋಮಬೀರ್‌ ಸಂಗ್ವಾನ್‌ ವಾಪಸ್‌ ಪಡೆದಿದ್ದಾರೆ.

ಸರ್ಕಾರದ ರೈತ ವಿರೋಧಿ ನಿಲುವನ್ನು ವಿರೋಧಿಸಿ ಬೆಂಬಲ ವಾಪಸ್‌ ಪಡೆದಿದ್ದೇನೆ. ಬಿಜೆಪಿ ಸರ್ಕಾರ ರೈತರ ಪರ ನಿಲ್ಲುವುದು ಬಿಟ್ಟು, ದೆಹಲಿ ಪ್ರವೇಶಕ್ಕೆ ಮುಂದಾದ ರೈತರ ಮೇಲೆ ಮೇಲೆ ಅಶ್ರುವಾಯು, ಜಲ ಫಿರಂಗಿಗಳನ್ನು ಪ್ರಯೋಗಿಸಿದೆ. ಇಂಥ ಸರ್ಕಾರಕ್ಕೆ ಬೆಂಬಲ ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸೋಮವಾರವಷ್ಟೇ ಅವರು ತಮಗೆ ನೀಡಲಾಗಿದ್ದ ಜಾನುವಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.