ನವದೆಹಲಿ(ಏ.19): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದಿನವೊಂದಕ್ಕೆ 2.7 ಲಕ್ಷ ಹೊಸ ಪ್ರಕರಣ ದಾಖಲಾಗುತ್ತಿದೆ. ದೇಶದಲ್ಲೇ ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಕೇಂದ್ರ ಸರ್ಕಾರಕ್ಕೆ 5 ಸಲಹೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಲಸಿಕೆ ಲಭ್ಯತೆ, ಲಸಿಕೆ ವಿತರಣೆ, ಪಾರದರ್ಶಕತೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಇದೀಗ ಮನ್‌ಮೋಹನ್ ಸಿಂಗ್ ಪತ್ರಕ್ಕೆ, ಕೇಂದ್ರ ಆರೋಗ್ಯ ಸಚಿವರು ಉತ್ತರಿಸಿದ್ದಾರೆ. ಸಿಂಗ್ ಪಂಚ ಸೂತ್ರಕ್ಕೂ ತಕ್ಕ ತಿರುಗೇಟು ನೀಡೋ ಮೂಲಕ ಕಾಂಗ್ರೆಸ್ ಹಾಗೂ ಮನ್‌ಮೋಹನ್ ಸಿಂಗ್ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಪ್ರಧಾನಿ ಮೋದಿಗೆ ಮನ್‌ಮೋಹನ್ ಸಿಂಗ್ ಪತ್ರ; ಕೊರೋನಾ ನಿಯಂತ್ರಣಕ್ಕೆ ಹೇಳಿದ್ರು 5 ಸೂತ್ರ

ಮನ್‌ಮೋಹನ್ ಸಿಂಗ್ ಜಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಎಷ್ಟು ಮುಖ್ಯ ಅನ್ನೋದನ್ನು ನೀವು ವಿವರಿಸಿದ್ದೀರಿ. ಆದರೆ ನಿಮ್ಮದೇ ಪಕ್ಷದಲ್ಲಿರುವ ಹಲವರು ಲಸಿಕೆ, ಭಾರತೀಯ ಸಂಶೋಧಕರು, ಲಸಿಕೆ ಅಭಿಯಾನ, ಲಸಿಕೆ ಫಲಿತಾಂಶ, ಪ್ರಯೋಗ ಸೇರಿದಂತೆ ಎಲ್ಲಾ ಹಂತವನ್ನೂ ವಿರೋಧಿಸಿದ್ದಾರೆ. ಲಸಿಕೆ ಪಡೆಯುವುದೇ ಇಲ್ಲ ಎಂದವರೂ ಇದ್ದಾರೆ. ನಿಮ್ಮ ಈ ಪತ್ರ ನಿಮ್ಮದೆ ಪಕ್ಷದ ನಾಯಕರಿಕೆ ಸೂಕ್ತವಾಗಿದೆ ಎಂದು ಹರ್ಷವರ್ಧನ್ ತಿರುಗೇಟು ನೀಡಿದ್ದಾರೆ.

 

 

ಹರ್ಷವರ್ಧನ್ ತಿರುಗೇಟು ಇಲ್ಲಿಗೆ ಮುಗಿಯಲಿಲ್ಲ. ಪತ್ರದಲ್ಲಿ ವಿದೇಶದಿಂದ ಲಸಿಕೆ ಆಮದು ಕುರಿತು ಸಲಹೆ ನೀಡಿದ್ದಾರೆ. ನೀವು ಎಪ್ರಿಲ್ 18ನೇ ತಾರೀಕು ಪತ್ರ ಬರೆದಿದ್ದೀರಿ. ಆದರೆ ಏಪ್ರಿಲ್ 11ನೇ ತಾರೀಕು ವಿದೇಶಿ ಲಸಿಕೆ ಆಮದಿಗೆ ಅನುಮೋದನೆ ನೀಡಲಾಗಿದೆ. 

ಕೊರೋನಾ ಕಾರಣ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ; ಕೈಗಾರಿಕೆಗೆ ಆಮ್ಲಜನಕ ಪೂರೈಕೆ ನಿಷೇಧಿಸಿದ ಸರ್ಕಾರ!

ಭಾರತೀಯ ವಿಜ್ಞಾನಿಗಳ ಸಂಶೋಧನೆ, ಲಸಿಕೆ ತಯಾರಿಕೆ ಕುರಿತು ಒಂದು ಮಾತು, ಒಂದು ಕೃತಜ್ಞತೆ ಹೇಳದ ಕಾಂಗ್ರೆಸ್ ಹಾಗೂ ನಾಯಕರು ಇದೀಗ ಲಸಿಕೆ ಮಹತ್ವದ ಕುರಿತು ಮಾತನಾಡುತ್ತಿರುವುದು ವಿಷಾದನೀಯ ಎಂದು ಹರ್ಷವರ್ಧನ್ ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ದಿನಗಳ ಪೂರ್ಣ ಲಾಕ್‌ಡೌನ್!

ಲಸಿಕೆ ನೀಡುವಿಕೆ ಕುರಿತು 10 ಕೋಟಿ, 12 ಕೋಟಿ ಎಂದು ಸಂಖ್ಯೆ ಹೇಳುವ ಬದಲು ಒಟ್ಟು ಜನಸಂಖ್ಯೆ ಪೈಕಿ ಶೇಕಡಾವಾರು ಹೇಳಬೇಕು. ಒಟ್ಟು ಜನಸಂಖ್ಯೆಯಲ್ಲಿ ಲಸಿಕೆ ಪಡೆದ ಶೇಕಡಾವಾರು ಅತ್ಯಂತ ಕಡಿಮೆ ಇದೆ ಎಂದು ಮನ್‌ಮೋಹನ್ ಸಿಂಗ್ ಪತ್ರದಲ್ಲಿ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಹರ್ಷವರ್ಧನ್, ದೇಶದಲ್ಲಿನ ಒಟ್ಟು ಪ್ರಕರಣಗಳು, ಸಕ್ರಿಯ ಪ್ರಕರಣಗಳು, ಅಥವಾ ಕೊರೋನಾಗೆ ಬಲಿಯಾದವರ ಕುರಿತು ಸಂಖ್ಯೆಗಳಲ್ಲೇ ಹೇಳಲಾಗುತ್ತಿದೆ. ಈ ಸಂಖ್ಯೆಯನ್ನು ಕಾಂಗ್ರೆಸ್ ಕೂಡ ಹಲವು ಬಾರಿ ಬಳಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸುವ ಕಾರ್ಯಕ್ಕೂ ಕೈಹಾಕಿದೆ. ಆದರೆ ವ್ಯಾಕ್ಸಿನೇಷನ್ ಸಂಖ್ಯೆಗಳನ್ನು ಜನಸಂಖ್ಯೆಯ ಶೇಕಡಾವಾರು ಎಂದು ಹೇಳಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಕೊರೋನಾ ಪರಿಸ್ಥಿತಿ ಕುರಿತು ಸಭೆ ನಡೆಸಿದ ಬೆನ್ನಲ್ಲೇ ಮನ್‌ಮೋಹನ್ ಸಿಂಗ್, ಪ್ರಧಾನಿ ಮೋದಿಗೆ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದರು. ಇದೀಗ ಇದೀಗ ಹರ್ಷವರ್ಧನ್ ಅಂಕಿ ಸಂಖ್ಯೆಗಳ ಮೂಲಕ ತಿರಗೇಟು ನೀಡಿದ್ದಾರೆ. ಇದೀಗ ಪತ್ರ ಬರೆದ ಮನ್‌ಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಕೈಸುಟ್ಟುಕೊಂಡಿದೆ.