ಅಹಮದಾಬಾದ್(ಫೆ.14): ಪಟೇಲ್ ಮೀಸಲಾತಿ ಹೋರಾಟಗಾರ ಹಾಗೂ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಹಾರ್ದಿಕ್ ಪಟೇಲ್ ಪತ್ನಿ ಕಿಂಜಾಲ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದು, ಕಳೆದ 20 ದಿನಗಳಿಂದ ಹಾರ್ದಿಕ್  ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. 

 ಹಾರ್ದಿಕ್ ಪಟೇಲ್ ನಾಪತ್ತೆಗೆ ಗುಜರಾತ್ ಸರ್ಕಾರವೇ ಕಾರಣ ಎಂದು ದೂರಿರುವ ಕಿಂಜಾಲ್, ತಮ್ಮ ಪತಿಯನ್ನು ಗುಜರಾತ್ ಸರ್ಕಾರ ಟಾರ್ಗೆಟ್ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾರ್ದಿಕ್ ಪಟೇಲ್ ಗೆ ವೇದಿಕೆಯಲ್ಲೇ ಕಪಾಳಮೋಕ್ಷ

ಇದೇ ಫೆಬ್ರವರಿ 11 ರಂದು ದೆಹಲಿ ಚುನಾವಣೆಯಲ್ಲಿ ಜಯಗಳಿಸಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ, ಹಾರ್ದಿಕ್ ಪಟೇಲ್ ಅಧಿಕೃತ ಟ್ವಿಟರ್ ಖಾತೆಯಿಂದ ಅಭಿನಂದನಾ ಟ್ವೀಟ್ ಮಾಡಲಾಗಿತ್ತು.

ಅಲ್ಲದೇ ಫೇ.10ರಂದು ಗುಜರಾತ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದರು. ತಮ್ಮನ್ನು ಜೈಲಿಗೆ ಕಳುಹಿಸಲು ಗುಜರಾತ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಾರ್ದಿಕ್ ಟ್ವೀಟ್’ನಲ್ಲಿ ಆರೋಪಿಸಿದ್ದರು.

ಸದ್ಯ ಹಾರ್ದಿಕ್ ಪಟೇಲ್ ನಾಪತ್ತೆ ಪರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಕಿಂಜಾಲ್ ಪಟೇಲ್ ನೀಡಿರುವ ದೂರನ್ನು ಸ್ವೀಕರಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.