Asianet Suvarna News Asianet Suvarna News

Republic Day: ಗಣರಾಜ್ಯೋತ್ಸವಕ್ಕೆ ಕರ್ನಾಟಕದಿಂದ ಕರಕುಶಲ ಕಲಾ ವೈಭವದ ಟ್ಯಾಬ್ಲೋ

*   ಚನ್ನಪಟ್ಟಣ- ಕಿನ್ನಾಳ ಗೊಂಬೆ, ಉಡುಪಿ ಸೀರೆ, ಸೇರಿ 16 ಕರಕುಶಲ ವಸ್ತು ಅನಾವರಣ
*   ಕರ್ನಾಟಕದ ಶ್ರೀಮಂತ ಸಂಸ್ಕೃತಿ
*   ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧ ಚಿತ್ರ
 

Handicrafts Tableau From Karnataka on Republic Day Parade in New Delhi grg
Author
Bengaluru, First Published Jan 16, 2022, 6:24 AM IST

ಡೆಲ್ಲಿ ಮಂಜು

ನವದೆಹಲಿ(ಜ.16): ರಾಷ್ಟ್ರ ರಾಜಧಾನಿ ನವದೆಹಲಿಯ(New Delhi) ರಾಜಪಥದಲ್ಲಿ ಜ.26ರ ಗಣರಾಜ್ಯೋತ್ಸವದಂದು(Republic Day) ಕರ್ನಾಟಕದ ಸಮಸ್ತ ಕರಕುಶಲ ವೈಭವದ ವಿಶ್ವರೂಪ ದರ್ಶನವಾಗಲಿದೆ!

‘ಕರ್ನಾಟಕ- ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’(Karnataka - Cradle of Heritage Handicrafts) ಎನ್ನುವ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ(Tableau) ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿದ್ದು, ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ 16 ಕರಕುಶಲ ವಸ್ತುಗಳು(Handicrafts) ಅನಾವರಣಗೊಳ್ಳಲಿವೆ.

ಇನ್ಮುಂದೆ ಜನವರಿ 23 ರಿಂದ Republic Day Celebrations!

ನೂರಾರು ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಕರ್ನಾಟಕವು(Karnataka) ಭಾರತದಲ್ಲೇ(India) ಅತಿ ಹೆಚ್ಚು ಉತ್ಪನ್ನಗಳಿಗೆ ಜಿಐ (ಜಿಯೋಗ್ರಾಫಿಕಲ್‌ ಇಂಡಿಕೇಷನ್‌) ಟ್ಯಾಗ್‌ ಪಡೆದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲೂ ಕರಕುಶಲ ವಸ್ತುಗಳಿಗೆ ರಾಜ್ಯ ಜಗದ್ವಿಖ್ಯಾತಿ ಪಡೆದಿದೆ. ಭಾರತದಲ್ಲಿ 346 ವಸ್ತು ಮತ್ತು ಉತ್ಪನ್ನಗಳಿಗೆ ಜಿಐ ಟ್ಯಾಗ್‌ ಇದ್ದರೆ ಇದರಲ್ಲಿ ಸಿಂಹಪಾಲು ಅಂದರೆ 46 ವಸ್ತು ಮತ್ತು ಉತ್ಪನ್ನಗಳು ಕರ್ನಾಟಕದ್ದಾಗಿವೆ. ಕರಕುಶಲ ವಿಭಾಗದಲ್ಲಿ 16 ವಸ್ತು ಮತ್ತು ಉತ್ಪನ್ನಗಳಿಗೆ ಜಿಐ ಟ್ಯಾಗ್‌ ಇದೆ. ಹಾಗಾಗಿ ನಮ್ಮ ಪಾರಂಪರಿಕತೆಯ ಪ್ರತೀಕವಾಗಿ ಈ ಬಾರಿ ಕರಕುಶಲ ವಸ್ತುಗಳ ತೊಟ್ಟಿಲಿನ ಸ್ತಬ್ಧಚಿತ್ರದ ಮೂಲಕ ಕರ್ನಾಟಕ ಸಂಸ್ಕೃತಿ ರಾಜಪಥದಲ್ಲಿ ಅನಾವರಣವಾಗಲಿದೆ.

ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ:

ಕಾವೇರಿ ಎಂಪೋರಿಯಂ(Kaveri Emporium) ಹೆಸರಲ್ಲಿ ಕರ್ನಾಟಕದಲ್ಲಿ ನಾಲ್ಕೈದು ಕಡೆ ಈ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆಕೂಡ ಒದಗಿಸಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರಕುಶಲ ವಸ್ತುಗಳ ತೊಟ್ಟಿಲಿನ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರದ(Central Government) ಸಮಿತಿ ಶನಿವಾರ ಹಸಿರು ನಿಶಾನೆ ತೋರಿದೆ. ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ(Republic Day Parade)  ಕರ್ನಾಟಕದ ಸ್ತಬ್ಧಚಿತ್ರ ಸತತ 13 ವರ್ಷಗಳಿಂದ ಭಾಗಿಯಾಗುತ್ತಿದೆ. ಒಟ್ಟು 12 ರಾಜ್ಯಗಳ ಟ್ಯಾಬ್ಲೋಗಳು ಈ ಬಾರಿಯ ಪೆರೇಡ್‌ನಲ್ಲಿ ಭಾಗಿಯಾಗಲಿದ್ದು, ದಕ್ಷಿಣ ಭಾರತದಿಂದ ಕರ್ನಾಟಕದ ಟ್ಯಾಬ್ಲೋ ಮಾತ್ರ ಮೆರವಣಿಗೆಯಲ್ಲಿ ಭಾಗಿಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Narayana Guru Tableau ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

ಟ್ಯಾಬ್ಲೋದಲ್ಲಿ ಯಾವ ಕಲೆಗಳು ಪ್ರದರ್ಶನ?

ಮೈಸೂರು ರೇಷ್ಮೆ, ಬಿದಿರಿನ ಕಲಾಕೃತಿಗಳು, ಚನ್ನಪಟ್ಟಣದ ಬೊಂಬೆಗಳು, ಮೈಸೂರು ಬೀಟೆಮರದ ಕೆತ್ತನೆಗಳು, ಕಸೂತಿ, ಮೈಸೂರು ಪಾರಂಪರಿಕ ಚಿತ್ರಕಲೆ, ಮೈಸೂರು ಗಾಂಜೀಫ್‌ ಕ್ರೀಡಾ ಪತ್ರಗಳು, ನವಲಗುಂದದ ಜಮಖಾನೆ, ಕರ್ನಾಟಕದ ಹಿತ್ತಾಳೆ ಪಾತ್ರೆಗಳು, ಇಳಕಲ್‌ ಸೀರೆ, ಮೊಳಕಾಲ್ಮುರು ಸೀರೆಗಳು, ಸಂಡೂರು ಲಂಬಾಣಿ ಕಸೂತಿ, ಕೊಲ್ಹಾಪುರಿ ಶೈಲಿಯ ಚಪ್ಪಲಿ, ಗುಳೇದಗುಡ್ಡ ಖಾನಾ, ಕಿನ್ನಾಳದ ಗೊಂಬೆಗಳು, ಉಡುಪಿ ಸೀರೆಗಳು, ಕರ್ನಾಟಕ ಕಂಚಿನ ಕಲಾಕೃತಿ.

ಇನ್ನು ಜ.23ರಿಂದಲೇ ಗಣರಾಜ್ಯೋತ್ಸವ ಸಂಭ್ರಮ ಆರಂಭ

ನವದೆಹಲಿ: ಗಣರಾಜ್ಯೋತ್ಸವದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಗಣರಾಜ್ಯೋತ್ಸವದ ಆಚರಣೆ ಈಗ ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದಿದೆ. ಈ ಹಿಂದೆ ಇದು ಜನವರಿ 24 ರಿಂದ ಪ್ರಾರಂಭವಾಗುತ್ತಿತ್ತು. ಗಣರಾಜ್ಯೋತ್ಸವದ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನೂ ಸೇರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಮೋದಿ ಸರ್ಕಾರವು ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ಪ್ರಾರಂಭಿಸಿತ್ತು ಎಂಬುವುದು ಉಲ್ಲೇಖನೀಯ.  ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರ ಇದೀಗ ಮಹತ್ವದ ದಿನವನ್ನು ಘೋಷಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಡಿಸೆಂಬರ್ 26ನ್ನು ವೀರ್ ಬಲ್ ದಿವಸ್ ಎಂದು ಆಚರಿಸುವುದಾಗಿ ತಿಳಿಸಿದ್ದರು. 
 

Follow Us:
Download App:
  • android
  • ios