Asianet Suvarna News Asianet Suvarna News

ಪಾಕ್‌ಗೆ ರಹಸ್ಯ ಮಾಹಿತಿ ರವಾನೆ: HAL‌ ಉದ್ಯೋಗಿ ಅರೆಸ್ಟ್‌!

ಪಾಕ್‌ಗೆ ರಹಸ್ಯ ಮಾಹಿತಿ ರವಾನೆ| ಎಚ್‌ಎಎಲ್‌ ಉದ್ಯೋಗಿ ಅರೆಸ್ಟ್‌| ಮಹಾರಾಷ್ಟ್ರದಲ್ಲಿ ಬಂಧನ| 10 ದಿನ ಎಟಿಎಸ್‌ ವಶ

HAL employee arrested for spying for Pakistan podf
Author
Bangalore, First Published Oct 10, 2020, 11:22 AM IST

ಮುಂಬೈ(ಅ.10): ಪಾಕಿ​ಸ್ತಾನದ ಗುಪ್ತ​ಚರ ಸಂಸ್ಥೆ ‘ಐ​ಎ​ಸ್‌​ಐ​’ಗೆ ಭಾರ​ತದ ಯುದ್ಧ​ವಿ​ಮಾ​ನದ ರಹಸ್ಯ ಮಾಹಿ​ತಿ​ಯನ್ನು ಕಳಿ​ಸಿದ ಆರೋ​ಪದ ಮೇರೆಗೆ ಸಾರ್ವ​ಜ​ನಿಕ ಸ್ವಾಮ್ಯದ ಹಿಂದು​ಸ್ತಾನ್‌ ಏರೋ​ನಾ​ಟಿಕ್ಸ್‌ ಲಿಮಿ​ಟೆ​ಡ್‌ (ಎ​ಚ್‌​ಎ​ಎ​ಲ್‌) ಕಂಪ​ನಿಯ ಒಬ್ಬ ಉದ್ಯೋ​ಗಿ​ಯನ್ನು ಮಹಾ​ರಾಷ್ಟ್ರ ಪೊಲೀ​ಸರು ಶುಕ್ರ​ವಾರ ಬಂಧಿ​ಸಿ​ದ್ದಾರೆ.

‘ಈ ವ್ಯಕ್ತಿ ಯುದ್ಧ​ವಿ​ಮಾ​ನದ ಹಾಗೂ ಅದರ ಉತ್ಪಾ​ದನಾ ಘಟ​ಕ​ದ ರಹಸ್ಯ ಮಾಹಿ​ತಿ​ಯ​ನ್ನು ಐಎ​ಸ್‌​ಐಗೆ ರವಾ​ನಿ​ಸು​ತ್ತಿ​ದ್ದ. ಈತ ಐಎ​ಸ್‌ಐ ಜತೆ ನಿರಂತರ ಸಂಪರ್ಕ ಹೊಂದಿ​ರು​ವ ಬಗ್ಗೆ ಮಹಾ​ರಾಷ್ಟ್ರ ಭಯೋ​ತ್ಪಾ​ದಕ ನಿಗ್ರಹ ದಳದ ನಾಸಿಕ್‌ ಘಟ​ಕಕ್ಕೆ ಗುಪ್ತ​ಚರ ಮಾಹಿತಿ ಲಭಿ​ಸಿತ್ತು’ ಎಂದು ಪೊಲೀಸ್‌ ಪ್ರಕ​ಟಣೆ ತಿಳಿ​ಸಿ​ದೆ.

‘ನಾಸಿಕ್‌ ಸಮೀ​ಪದ ಓಝಾರ್‌ ಎಂಬ​ಲ್ಲಿನ ಎಚ್‌​ಎ​ಎ​ಲ್‌ನ ವಿಮಾನ ಉತ್ಪಾ​ದನಾ ಘಟ​ಕ, ವಾಯು​ನೆಲೆ ಹಾಗೂ ಉತ್ಪಾ​ದನಾ ಘಟ​ಕದ ನಿರ್ಬಂಧಿತ ವಲ​ಯ​ದ​ಲ್ಲಿನ ರಹಸ್ಯ ಮಾಹಿ​ತಿ​ಗಳು, ವಿಮಾ​ನದ ಹಾಗೂ ಇತರ ರಹ​ಸ್ಯ ಮಾಹಿ​ತಿ​ಗ​ಳನ್ನು ಐಎ​ಸ್‌​ಐಗೆ ಹಸ್ತಾಂತ​ರಿ​ಸು​ತ್ತಿದ್ದ ಸಂಬಂಧ 41 ವರ್ಷದ ಉದ್ಯೋ​ಗಿ​ಯನ್ನು ನಾಸಿ​ಕ್‌ನ ಆತನ ಮನೆ​ಯಲ್ಲೇ ಬಂಧಿಸಲಾ​ಗಿದೆ. ಬಂಧಿ​ತನ ವಿರು​ದ್ಧ ‘ಕ​ಚೇರಿ ರಹಸ್ಯ ಕಾಯ್ದೆ​’ಯ ಅಡಿ ಪ್ರಕ​ರಣ ದಾಖ​ಲಿ​ಸ​ಲಾ​ಗಿ​ದೆ. ಕೋರ್ಟು ಆತ​ನನ್ನು 10 ದಿನ ಎಟಿ​ಎಸ್‌ ವಶಕ್ಕೆ ಒಪ್ಪಿ​ಸಿ​ದೆ’ ಎಂದು ಅಧಿ​ಕಾ​ರಿ​ಯೊ​ಬ್ಬರು ಹೇಳಿ​ದ್ದಾ​ರೆ.

ಬಂಧಿ​ತ​ನಿಂದ 3 ಮೊಬೈಲ್‌ ಹ್ಯಾಂಡ್‌​ಸೆಟ್‌, 5 ಸಿಮ್‌ ಕಾರ್ಡ್‌, 2 ಮೆಮೊರಿ ಕಾರ್ಡ್‌ ವಶ​ಪ​ಡಿ​ಸಿ​ಕೊ​ಳ್ಳ​ಲಾ​ಗಿದೆ. ಫೋನು ಹಾಗೂ ಸಿಮ್‌ ಕಾರ್ಡನ್ನು ವಿಧಿ​ವಿ​ಜ್ಞಾ​ನ ಪ್ರಯೋ​ಗಾ​ಲ​ಯಕ್ಕೆ ಪರಿ​ಶೀ​ಲ​ನೆಗೆ ಕಳಿ​ಸ​ಲಾ​ಗಿ​ದೆ.

ಘಟ​ಕದ ವಿಶೇ​ಷ​ತೆ:

ಎಚ್‌​ಎ​ಎಲ್‌ ವಿಮಾನ ಘಟ​ಕ​ವನ್ನು 1964ರಲ್ಲಿ ನಾಸಿ​ಕ್‌​ನಿಂದ 24 ಕಿ.ಮೀ. ದೂರದ ಓಝಾ​ರ್‌​ನಲ್ಲಿ ಆರಂಭಿ​ಸ​ಲಾ​ಗಿದೆ. ಇದ​ರಲ್ಲಿ ಮಿಗ್‌-21ಎಫ್‌​ಎಲ್‌ ಯುದ್ಧ​ವಿ​ಮಾ​ನ​ಗಳು ಹಾಗೂ ಕೆ-13 ಕ್ಷಿಪ​ಣಿ​ಗ​ಳನ್ನು ಆರಂಭ​ದಲ್ಲಿ ತಯಾ​ರಿ​ಸ​ಲಾ​ಗುತ್ತಿ​ತ್ತು. ಬಳಿಕ ಇಲ್ಲಿ ಮಿಗ್‌-21 ಎಂ, ಮಿಗ್‌-21 ಬಿಐ​ಎಸ್‌, ಮಿಗ್‌-27 ಎಂ ಹಾಗೂ ಅತ್ಯಾ​ಧು​ನಿಕ ಸುಖೋ​ಯ್‌-3- ಎಂಕೆಐ ಯುದ್ಧ​ವಿ​ಮಾ​ನ​ಗ​ಳನ್ನು ಉತ್ಪಾ​ದಿ​ಸ​ಲಾ​ಗಿದೆ. ಮಿಗ್‌ ಹಾಗೂ ಸುಖೋ​ಯ್‌ನ ರಿಪೇರಿ ಹಾಗೂ ನವೀ​ಕ​ರ​ಣವೂ ಇಲ್ಲಿ ನಡೆ​ಯು​ತ್ತ​ದೆ.

Follow Us:
Download App:
  • android
  • ios