ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಗ್ಯಾನವಾಪಿ ಮಸೀದಿ ಸಮೀಕ್ಷಾ ವರದಿ ಬಹಿರಂಗವಾದ ಬೆನ್ನಲ್ಲೇ ಕಾಶಿ ವಿಶ್ವನಾಥ ಮಂದಿರದ ಕೂಗು ಹೆಚ್ಚಾಗಿದೆ. ಇದೀಗ ವಿಶ್ವ ಹಿಂದೂ ಪರಿಷತ್, ದೂರುದಾರ ಇಂತೇಜಾಮಿಯಾ ಮುಸ್ಲಿಮ್ ಕಮಿಟಿಗೆ ವಿಶೇಷ ಮನವಿ ಮಾಡಿದೆ. ಗೌರವಯುತವಾಗಿ ಗ್ಯಾನವಾಪಿ ಮಸೀದಿಯನ್ನು ಸ್ಥಳಾಂತರಿಸಿ, ಮೂಲ ಸ್ಥಳವನ್ನು ಕಾಶಿ ವಿಶ್ವನಾಥ ಮಂದಿರಕ್ಕೆ ನೀಡಲು ಸೂಚಿಸಿದೆ.
ನವದೆಹಲಿ(ಜ.27) ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಗ್ಯಾನವಾಪಿ ಮಸೀದಿ ಹಿಂದೂ ದೇವಾಲಯವಾಗಿತ್ತು ಅನ್ನೋದಕ್ಕೆ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷಾ ವರದಿಯಲ್ಲಿ ಕೆಲ ದಾಖಲೆಗಳನ್ನು ನೀಡಿದೆ. ಈ ವರದಿಯನ್ನು ಕೋರ್ಟ್ ಬಹಿರಂಗೊಳಿಸದ ಬೆನ್ನಲ್ಲೇ ಕಾಶಿ ವಿಶ್ವನಾಥ ಮಂದಿರ ಮರಳಿ ಪಡೆಯುವ ಹಿಂದೂಗಳ ಹೋರಾಟ ಚುರುಕುಗೊಂಡಿದೆ. ಇದರ ನಡುವೆ ವಿಶ್ವಹಿಂದೂ ಪರಿಷತ್ ಹಿಂದೂ ಹಾಗೂ ಮುಸ್ಲಿಮ್ ಸಮುದಾಯ ಗೌರವಯುತವಾಗಿ ಈ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು ಎಂದು ಸೂತ್ರವೊಂದನ್ನು ಮುಂದಿಟ್ಟಿದೆ. ಗ್ಯಾನವಾಪಿ ಮಸೀದಿ ಪರವಾಗಿ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಇಂತೆಜಮಿಯಾ ಮುಸ್ಲಿಮ್ ಸಮಿತಿ ಗೌರವಯುತವಾಗಿ ಗ್ಯಾನವಾಪಿ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ಮೂಲ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು ಎಂದು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ.
ಕಾಶಿ ವಿಶ್ವನಾಥನ ಭವ್ಯ ಮಂದಿರನ್ನು ಒಢೆದು ಅದರ ಗೋಡೆಗಳ ಮೇಲೆ ಗ್ಯಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿ ಹಿಂದೂ ದೇವಲಾಯದ ಲಿಂಗ, ಮೂರ್ತಿ, ಕಂಬಗಳು ಹಾಗೂ ಶಾಸನಗಳನ್ನು ಪತ್ತೆ ಹಚ್ಚಿದೆ. ಹೀಗಾಗಿ ಹಿಂದೂ ದೇವಾಲಯದ ಮೇಲೆ ಮಸೀದಿ ನಿಂತಿದೆ ಅನ್ನೋದು ಸ್ಪಷ್ಟವಾಗಿದೆ.
ಅಧ್ಯಯನಕ್ಕಾಗಿ ಮಾತ್ರ ವರದಿ ಸಲ್ಲಿಕೆ: ಗ್ಯಾನವಾಪಿ ಸಮೀಕ್ಷಾ ವರದಿ ಬಹಿರಂಗ ಬೇಡ: ಕೋರ್ಟ್
ಭಾರತೀಯ ಪುರಾತತ್ವ ಇಲಾಖೆ ನೀಡಿರುವ ವರದಿ ಪ್ರಕಾರ, ಈ ಪೂಜಾ ಸ್ಥಳ 1947, ಆಗಸ್ಟ್ 15ರ ದಿನದಿಂದಲೇ ಅಸ್ತಿತ್ವದಲ್ಲಿದೆ. ಹೀಗಾಗಿ ಪ್ಲೇಸ್ ಆಪ್ ವರ್ಶಿಪ್ ಆ್ಯಕ್ಟ್ 1991ರ ಪ್ರಕಾರ, ಇದನ್ನು ಹಿಂದೂ ದೇವಾಲಯ ಎಂದು ಘೋಷಿಸಬೇಕು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಇಂತೆಜಮಿಯಾ ಮುಸ್ಲಿಮ್ ಸಮಿತಿ, ಗೌರವಯುತವಾಗಿ ಗ್ಯಾನವಾಪಿ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿ ಮೂಲ ಸ್ಥಳವನ್ನು ಹಿಂದೂಗಳ ಕಾಶಿ ವಿಶ್ವನಾಥ ಮಂದಿರ ಟ್ರಸ್ಟ್‌ಗೆ ನೀಡಬೇಕು ಎಂದು ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ.
ಮುಸ್ಲಿಮರು ಕೈ ಕಾಲು ತೊಳೆಯಲು ಬಳಸುತ್ತಿದ್ದ ವಝುಕಾನದಲ್ಲಿ ಅತ್ಯಂತ ಪವಿತ್ರ ಶಿವಲಿಂಗ ಪತ್ತೆಯಾಗಿದೆ. ಹೀಗಾಗಿ ಈ ಸ್ಥಳದಲ್ಲಿ ಸೇವಾ ಪೂಜೆ ಮಾಡಲು ಹಿಂದುಗಳಿಗೆ ಅವಕಾಶ ನೀಡಬೇಕು ಎಂದು ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ. ಇದೇ ವೇಳೆ ಮುಸ್ಲಿಮ್ ಸಮತಿ, ಈ ವರದಿಯನ್ನು ಒಪ್ಪಿಕೊಂಡಿಲ್ಲ. ಇಷ್ಟೇ ಅಲ್ಲ ಭಾರತೀಯ ಪುರಾತತ್ವ ಇಲಾಖೆ ನೀಡಿದ ವರದಿ ಅಂತಿಮವಲ್ಲ. ನಾವು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕಾನೂನು ಹೋರಾಟ ಮುಂದುವರಿಯಲಿದೆ ಎಂದಿದೆ.
Pejawar Shri: ಭವ್ಯ ರಾಮ ಮಂದಿರ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ: ಪೇಜಾವರ ಶ್ರೀ
