Gurugram News: ಗುರುಗ್ರಾಮದಲ್ಲಿ ಆಫ್ರಿಕಾದ ಯುವಕನೊಬ್ಬ ಕುಡಿದು ಬಟ್ಟೆ ಬಿಚ್ಚಿ ಗಲಾಟೆ ಮಾಡಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ., ಗಾರ್ಡ್ ಜೊತೆ ಜಗಳವಾಡಿದ್ದಾನೆ ಈ ವೇಳೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಸ್ಥಳೀಯರೂ ಹಿಗ್ಗಾಮುಗ್ಗಾ ಹೊಡೆದು ಪೊಲೀಸರಿಗೊಪ್ಪಿಸಿದ್ದಾರೆ.

African man causes havoc in Gurugram: ಗುರುಗ್ರಾಮದ ಒಂದು ಐಷಾರಾಮಿ ಸೊಸೈಟಿಯಲ್ಲಿ ಆಫ್ರಿಕನ್ ಮೂಲದ ಯುವಕನೊಬ್ಬ ಕುಡಿದು ಗಲಾಟೆ ಮಾಡಿದ್ದಲ್ಲದೇ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಬಾರಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

 ಆಫ್ರಿಕ್ ಮೂಲದವನಾಗಿದ್ದು ಕುಡಿದ ಮತ್ತಿನಲ್ಲಿ ಈ ಯುವಕ ಬಟ್ಟೆ ಬಿಚ್ಚಿ ರಸ್ತೆಯಲ್ಲೇ ಬೆತ್ತಲೇ ಓಡಾಡಿದ್ದಾನೆ. ಸ್ಥಳೀಯರ ಜೊತೆ ಗಲಾಟೆ ಮಾಡಿಕೊಂಡು ಒದೆ ತಿಂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವಕನ ಹುಚ್ಚಾಟ ಕಂಡು ಮೊದಲಿಗೆ ಸುಮ್ಮನದ್ದ ಸ್ಥಳೀಯರು. ಯಾವಾಗ ಅವನು ವರ್ತನೆ ಹೆಚ್ಚಾಯ್ತೋ ಕೋಪಗೊಂಡ ಜನರು ಅವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟಕ್ಕೂ ಸುಮ್ಮನೆ ಆಸಾಮಿ ಜನರ ಮುಂದೆಯೇ ಮಲ, ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಸ್ಥಳೀಯರು ಕೂಡ ಅವನ ಹುಚ್ಚಾಟಕ್ಕೆ ಬೆಚ್ಚಿಬಿದ್ದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ಸ್ಥಳಕ್ಕೆ ಕರೆಸಿ ವಿದೇಶಿ ಪ್ರಜೆಯನ್ನ ಪೊಲೀಸರಿಗೆ ಒಪ್ಪಿಸಲಾಯಿತು.

ಇದನ್ನೂ ಓದಿ: ಜಾಕ್‌ ಹಾಕಿ ಕಾರಿನ 4 ಚಕ್ರ ಬಿಚ್ಚಿಕೊಂಡು ಖದೀಮರು ಪರಾರಿ! ಹೋಟೆಲ್ ಮುಂದೆ ವಾಹನ ನಿಲ್ಲಿಸ್ತೀರಾ? ಇದನ್ನೊಮ್ಮೆ ನೋಡಿ!

ಬಟ್ಟೆ ಬಿಚ್ಚಿ ಗಲಾಟೆ, ಸೊಸೈಟಿಯಲ್ಲಿ ಭಯದ ವಾತಾವರಣ

ಈ ಘಟನೆ ಖೇರ್ಕಿದೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿರಮಿಡ್ ಹೈಟ್ಸ್ ಸೊಸೈಟಿಯಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಥಾಮಸ್ ಅಲೆಕ್ಸ್ ಎಂಬ ಈ ಆಫ್ರಿಕನ್ ಯುವಕ ಸಂಪೂರ್ಣವಾಗಿ ಕುಡಿದಿದ್ದನು. ಸೊಸೈಟಿಯ ಗೇಟ್ ಬಳಿ ಬರುತ್ತಿದ್ದಂತೆ ತನ್ನ ಬಟ್ಟೆಗಳನ್ನು ಕಳಚಿ ಕಿರುಚಾಡಲು ಪ್ರಾರಂಭಿಸಿದನು. ಸೆಕ್ಯೂರಿಟಿ ಗಾರ್ಡ್ ತಡೆಯಲು ಹೋದಾಗ, ಆತನ ಜೊತೆ ಜಗಳವಾಡಿ ಗಾರ್ಡ್‌ಗಳ ಮೊಬೈಲ್‌ಗಳನ್ನು ಸಹ ಒಡೆದು ಹಾಕಿದ್ದಾನೆ.

ಮಹಿಳೆಯರ ಮುಂದೆ ಅಸಭ್ಯ ವರ್ತನೆ, ಬೆದರಿಕೆ

ಪಾನಮತ್ತನಾಗಿದ್ದ ಯುವಕ ಸೊಸೈಟಿಯ ಒಳಗೆ ನುಗ್ಗಿ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಜನರು ತಡೆಯಲು ಹೋದಾಗ, ಅವರ ಮೇಲೆ ಕೋಪಗೊಂಡು 'ಎಲ್ಲರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ಜನರು ಅವನ ಮೇಲೆ ಮುಗಿಬಿದ್ದು ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಈ ವೇಳೆ ಯುವಕ ನೆಲದ ಮೇಲೆ ಮಲಗಿ ಮೂತ್ರ ವಿಸರ್ಜನೆ ಮಾಡಿದನು, ಇದರಿಂದ ವಾತಾವರಣ ಮತ್ತಷ್ಟು ಬಿಗಡಾಯಿಸಿತು.

ಪೊಲೀಸರಿಂದ ಬಂಧನ, ರಾಯಭಾರ ಕಚೇರಿಗೆ ಮಾಹಿತಿ ರವಾನೆ

ಗಲಾಟೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಥಾಮಸ್ ಅಲೆಕ್ಸ್ ಕ್ಯಾಮರೂನ್ ದೇಶದ ಪ್ರಜೆ ಎಂದು ತಿಳಿದುಬಂದಿದೆ. ವೈದ್ಯಕೀಯ ವೀಸಾದ ಮೇಲೆ ನವೆಂಬರ್ 2024 ರಲ್ಲಿ ಭಾರತಕ್ಕೆ ಬಂದಿದ್ದ ಅವನು ಈ ಸೊಸೈಟಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದನು. ಗುರುಗ್ರಾಮ ಪೊಲೀಸರು ಈ ಘಟನೆಯ ಬಗ್ಗೆ ಕ್ಯಾಮರೂನ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ ಮತ್ತು ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕ್ರಿಸ್ ಗೇಲ್ ಹೆಸರಲ್ಲಿ ಮಹಿಳೆಗೆ 2.8 ಕೋಟಿ ರೂ. ವಂಚನೆ, ಮೋಸ ಮಾಡಿದವರಲ್ಲಿ ಸಹೋದರನೂ ಒಬ್ಬ!

ಈ ಘಟನೆಯ ನಂತರ ಸೊಸೈಟಿಯ ಜನರು ಭಯಭೀತರಾಗಿದ್ದಾರೆ. ಇಂತಹ ವಿದೇಶಿ ಪ್ರಜೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಪೊಲೀಸರು ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.