Asianet Suvarna News Asianet Suvarna News

ರಜೌರಿಯಲ್ಲಿ ಗುಂಡಿನ ಚಕಮಕಿ: ಮಂಗಳೂರಿನ ಕ್ಯಾ.ಪ್ರಾಂಜಲ್‌ ಸೇರಿ ನಾಲ್ವರು ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಸೇರಿ 4 ಯೋಧರು ಹುತಾ​ತ್ಮ​ರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

Gunfight in Rajouri Dakshina Kannada Based captain Pranjal along with four soldiers martyred akb
Author
First Published Nov 23, 2023, 7:15 AM IST

ರಜೌರಿ/ಮಂಗಳೂರು: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಸೇರಿ 4 ಯೋಧರು ಹುತಾ​ತ್ಮ​ರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ನಡುವೆ, ಅಡಗಿರುವ ಇಬ್ಬರು ಉಗ್ರ​ರಿ​ಗಾಗಿ ಸೇನಾ ಕಾರ್ಯಾಚರಣೆ ಮುಂದಿವರೆದಿದೆ.

ಇಲ್ಲಿನ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿ​ತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಮತ್ತು ಪೊಲೀಸರು ಬುಧವಾರ ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಗುಂ​ಡಿನ ಚಕಮಕಿ ನಡೆದಿದ್ದು, ಇಬ್ಬರು ಸೇನಾ​​​ಧಿಕಾರಿಗಳು ಹಾಗೂ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಕಾರ್ಯಾಚರಣೆ ಮುಂದು ವರೆಸಲಾಗಿದ್ದು, ಅಡಗಿಕೊಂಡಿರುವ ಇಬ್ಬರು ಉಗ್ರರಿರಾಗಿ ಬಲೆ ಬೀಸಲಾಗಿದೆ.

ರಜೌರಿಯಲ್ಲಿ ಉಗ್ರರ ಜೊತೆ ಸೇನೆಯ ಎನ್‌ಕೌಂಟರ್,‌ ಮೇಜರ್‌ ಸೇರಿದಂತೆ 3 ಸೈನಿಕರು ಹುತಾತ್ಮ

ದಕ್ಷಿಣ ಕನ್ನಡದ ಪ್ರಾಂಜಲ್‌: ಹುತಾತ್ಮರ ಪೈಕಿ 63ನೇ ರಾಷ್ಟ್ರೀಯ ರೈಫಲ್ಸ್‌ ಕ್ಯಾಪ್ಟನ್‌ ಪ್ರಾಂಜಲ್‌ ಅವರು ಮಂಗಳೂರು ಎಂಆರ್‌ಪಿಎಲ್‌ ನಿವೃತ್ತ ಎಂಡಿ ವೆಂಕಟೇಶ್‌ ಅವರ ಏಕೈಕ ಪುತ್ರ. ಮೂಲತಃ ಅವಿಭಜಿತ ದಕ್ಷಿಣ ಕನ್ನಡದವರಾಗಿದ್ದ ವೆಂಕಟೇಶ್‌ ಅವರು ಮೇ 31ರಂದು ನಿವೃತ್ತರಾಗಿದ್ದರು. ಕೆಲಕಾಲ ಮೈಸೂರಲ್ಲೂ ಇದ್ದರು. ತಂದೆಯ ನಿವೃತ್ತ ಸಮಾರಂಭಕ್ಕೆ ಪ್ರಾಂಜಲ್‌ ಆಗಮಿಸಿದ್ದರು. ನಿವೃತ್ತಿ ಬಳಿಕ ವೆಂಕಟೇಶ್‌ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಅಡಗಿರುವ ಇಬ್ಬರು ಉಗ್ರರ ಸುತ್ತುವರಿದಿರುವ ಪಡೆಗಳು

ರಜೌರಿ: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಕ್ಯಾಪ್ಟನ್‌ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ನಡುವೆ, ಅಡಗಿರುವ ಇಬ್ಬರು ಉಗ್ರರಿಗಾಗಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ.

ಕಾಶ್ಮೀರದಲ್ಲಿ ಸೇನೆ ಗುಂಡಿಗೆ 6 ಉಗ್ರರ ಬಲಿ: 18 ಗಂಟೆಗಳ ಸತತ ಕಾರ್ಯಾಚರಣೆಯಲ್ಲಿ ಭರ್ಜರಿ ಯಶಸ್ಸು

ಈ ಪ್ರದೇಶದಲ್ಲಿ ಕಳೆದ ಭಾನುವಾರದಿಂದಲೂ ಸೇನಾಪಡೆಗಳು ಶೋಧ ಕಾರ್ಯ ನಡೆಸುತ್ತಿವೆ. ಹೀಗಾಗಿ ಸ್ಥಳೀಯರನ್ನು ಮನೆ ಬಿಟ್ಟು ಹೊರಗೆ ಬರದಂತೆ ಸೂಚಿಸಲಾಗಿದೆ. ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.  ಕಳೆದ ಒಂದೂವರೆ ವರ್ಷದಿಂದ ರಜೌರಿ ಮತ್ತು ಪೂಂಚ್‌ ಜಿಲ್ಲೆಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ನ.17ರಂದು ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಆ.7ರಂದು ಸಹ ಓರ್ವ ಉಗ್ರ ಸೇನಾಪಡೆಗಳ ಗುಂಡಿಗೆ ಬಲಿಯಾಗಿದ್ದ.

 

 

Follow Us:
Download App:
  • android
  • ios