Asianet Suvarna News Asianet Suvarna News

ಗೆಳೆಯನಿಗೆ ಡ್ರೋನ್‌ ಮೂಲಕ ಬಂತು ಪಾನ್ ಬೀಡಾ, ಯುವಕನ ಐಡಿಯಾಗೆ ಪೊಲೀಸರಿಂದ ಭರ್ಜರಿ ಗಿಫ್ಟ್!

ಲಾಕ್‌ಡೌನ್ ಕಾರಣ ಎಣ್ಣೆ ಪ್ರೀಯರು, ಗುಟ್ಕಾ, ಬೀಡಾ, ಧೂಮಪಾನಿಗಳಿಗೆ ಕಟ್ಟಿಹಾಕಿದಂತಾಗಿದೆ. ಹೀಗಾಗಿ ತಮ್ಮಿಷ್ಟದ ವಸ್ತು ಪಡೆಯಲು ವಿಜ್ಞಾನಿಗಳಂತೆ ಯೋಚಿಸುತ್ತಿದ್ದಾರೆ. ಇಷ್ಟೇ ಅಲ್ಲ ಪೊಲೀಸರ ಕಣ್ತಪ್ಪಿಸಿ ಮಾಲು ಪಡೆಯಲು ಯತ್ನಿಸುತ್ತಿದ್ದಾರೆ. ಹೀಗೆ ಪಾನ್ ಬೀಡಾ ತಿನ್ನೋ ಮಂದಿಯ ಹೊಸ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ರೋನ್ ಮೂಲಕ ಪಾನ್ ಬೀಡಾ ಸಪ್ಲೈ ಮಾಡಿದ ಕಹಾನಿಯಲ್ಲಿ ಒಂದು ಟ್ವಿಸ್ಟ್ ಕೂಡ ಇದೆ.

Gujarat man delivered Pan bida by drone Police arrested violation of lockdown
Author
Bengaluru, First Published Apr 13, 2020, 6:07 PM IST

ಗುಜರಾತ್(ಏ.13): ಉತ್ತರ ಭಾರದದಲ್ಲಿ ಬೀಡಾ, ಪಾನ್, ಮಾವ ಇಲ್ಲದೆ ಹಲವರ ಬದುಕಿಲ್ಲ. ಆದರೆ ಸದ್ಯ ಲಾಕ್‌ಡೌನ್ ತರಕಾರಿ, ಹಾಲು, ದಿನಸಿ ಹೊರತು ಪಡಿಸಿ ಇನ್ಯಾವುದು ಸಿಗುವುದಿಲ್ಲ. ಹೀಗಿರುವಾಗ ರಾಜ್‌ಕೋಟ್‌ನ ರವಿ ಭದಾನಿಯಾ ತಲೆಗೆ ಅದ್ಭುತ ಐಡಿಯಾ ಹೊಳೆದಿದೆ. ಪ್ರತಿ ಮಾವ(ಟೊಬ್ಯಾಕೋ ಮಿಶ್ರಿತ) ಪಾನ್ ಖರೀದಿಸುತ್ತಿದ್ದ ತನ್ನ ಗೆಳಯನಿಗೆ ಪೋನ್ ಕರೆ ಮಾಡಿದ್ದಾನೆ. ತನಗೆ ಎರಡು ಮಾವಾ ಕಟ್ಟಿಡಲು ಸೂಚಿಸಿದ್ದಾನೆ.

ಲಾಕ್‌ಡೌನ್ ವೇಳೆ ಕ್ರಿಕೆಟ್ ಆಡುತ್ತಿದ್ದ ಮೂವರು ಈಗ ಕಂಬಿ ಹಿಂದೆ..!..

ಲಾಕ್‌‌ಡೌನ್ ಕಾರಣ ಹೊರಗೆ ಹೋಗುವಂತಿಲ್ಲ, ಇನ್ನು ಪಾನ್ ಬೀಡಾಗಳು ಸಿಗುವ ಮಾತೇ ಇಲ್ಲ. ಹೀಗಾಗಿ ತನ್ನಲ್ಲಿರುವ ಡ್ರೋನ್ ಮೂಲಕ ಪಾನ್ ತರಿಸುವ ಪ್ಲಾನ್ ಮಾಡಿದ್ದಾನೆ. ಡ್ರೋನ್ ಬಳಕೆಯಿಂದ ಕಾನೂನು ಉಲ್ಲಂಘನೆಯಾಗಲ್ಲ, ಕೊರೋನಾ ಹರಡುವುದಿಲ್ಲ. ಸ್ಯಾನಿಟೈಸರ್ ಬಳಸಿದರೆ ಎಲ್ಲವೂ ಸುಸೂತ್ರ ಎಂದು ಪ್ಲಾನ್ ರೆಡಿ ಮಾಡಿದ್ದಾನೆ.  ಬಳಿಕ ಗೆಳೆಯ ಮನೆಗೆ ಡ್ರೋನ್ ಬಿಟ್ಟಿದ್ದಾನೆ. ಸುಮಾರು 100 ಮೀಟರ್ ದೂರದಲ್ಲಿರುವ ಗೆಳೆಯ ಹೀರೆನ್ ಗರ್ಧಾರಿಯಾ ಎರಡು ಮಾವಾ ತಯಾರಿಸಿ ಡ್ರೋನ್‌ಗೆ ಕಟ್ಟಿದ್ದಾನೆ. 

ಏ. 15 ರಿಂದ ಲಾಕ್‌ಡೌನ್ 2.0 ಶುರು; ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್

ಮಾವಾ ಹೊತ್ತ ಡ್ರೋನ್ ನೇರವಾಗಿ ರವಿ ಭದಾನಿಯ ಮನೆಯ ಟೆರೆಸ್ ಮೇಲೆ ಬಂದಿಳಿದಿದೆ. ಇದನ್ನು ರವಿ ಭದಾನಿ ವಿಡಿಯೋ ಚಿತ್ರಿಕೀರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ರವಿ ಭದಾನಿಯಾ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಷ್ಟೇ ಅಲ್ಲ ಇದೇ ರೀತಿ ಎರಡು ಮದ್ಯದ ಬಾಟಲಿ ತರಿಸಿಕೊಡುವಂತೆ ಹಲವರು ಕೇಳಿ ಕೊಂಡಿದ್ದಾರೆ.

 

ತನ್ನ ಐಡಿಯಾ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆಗೆ ರವಿ ಭದಾನಿಯಾ ಹಿರಿ ಹಿರಿ ಹಿಗ್ಗಿದ್ದಾನೆ. ಇಲ್ಲಿಗೆ ಪಾನ್ ಬೀಡಾ ಕತೆ ಮುಗಿಯುವುದಿಲ್ಲ. ಕತೆಗೆ ಟ್ವಿಸ್ಟ್ ಇರೋದೆ ಇಲ್ಲಿ. ವೈರಲ್ ವಿಡಿಯೋ ರಾಜ್‌ಕೋಟ್ ಪೊಲೀಸರ ಕೈಗೂ ಸಿಕ್ಕಿದೆ. ತಕ್ಷಣವೇ ತನಿಖೆ ನಡೆಸಿದ್ದಾರೆ. ಬಳಿಕ ಲಾಕ್‌ಡೌನ್ ವೇಳೆ ಯಾವುದೇ ರೀತಿಯ ಟೋಬ್ಯಾಕೋ, ಅಲ್ಕೋಹಾಲ್, ಗುಟ್ಕಾ ಸರಬರಾಜು ಮಾಡುವಂತಿಲ್ಲ. ಇದು ಕಾನೂನು ಉಲ್ಲಂಘನೆ. ಇದರ ಅಡಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
 

Follow Us:
Download App:
  • android
  • ios