* ದೇಗುಲದಲ್ಲಿ ಸದ್ದು ಮಾಡಿದ ಧ್ವನಿವರ್ಧಕ* ಧ್ವನಿವರ್ಧಕದ ಸದ್ದಿಗೆ ಕೋಪಗೊಂಡ ಜನರು* ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ದಾಳಿ* ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
ಅಹಮದಾಬಾದ್(ಮೇ.06): ಮೆಹ್ಸಾನಾ ಜಿಲ್ಲೆಯಲ್ಲಿ ದೇವಸ್ಥಾನದಲ್ಲಿ ಧ್ವನಿವರ್ಧಕ ನುಡಿಸಿದ ವಿವಾದದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಷಯ ಮುಂಡರಡ ಗ್ರಾಮದ ಠಕ್ಕೂರ್ ವಾಸ್‌ನಲ್ಲಿ ಸಂಭವಿಸಿದೆ.
ಮಾಹಿತಿ ಪ್ರಕಾರ, ಮಂಗಳವಾರ ಸಂಜೆ ಮುಂಡರಡಾ ನಿವಾಸಿ 46 ವರ್ಷದ ಅಜಿತ್‌ಜಿ ಠಾಕೂರ್ ಅವರು ತಮ್ಮ ಕಿರಿಯ ಸಹೋದರ ಜಸ್ವಂತ್‌ಜಿ ಠಾಕೂರ್ ಅವರೊಂದಿಗೆ ಮನೆಯ ಕಾಂಪೌಂಡ್‌ನಲ್ಲಿ ನಿರ್ಮಿಸಲಾದ ದೇವಸ್ಥಾನದಲ್ಲಿ ದೀಪವನ್ನು ಬೆಳಗಿಸುತ್ತಿದ್ದರು. ಪೂಜೆಯ ನಂತರ ಧ್ವನಿವರ್ಧಕದಲ್ಲಿ ಅಮ್ಮನವರ ಭಜನೆ ನುಡಿಸಿದರು. ಸ್ವಲ್ಪ ಸಮಯದ ನಂತರ, ನೆರೆಹೊರೆಯಲ್ಲಿ ವಾಸಿಸುವ ಸದಾಜಿ ಠಾಕೂರ್ ಅವರು ಅಲ್ಲಿಗೆ ತಲುಪಿದರು ಮತ್ತು ನೀವು ಏಕೆ ಧ್ವನಿವರ್ಧಕ ನುಡಿಸುತ್ತಿದ್ದೀರಿ ಎಂದು ಅಜಿತ್‌ಜಿಯನ್ನು ಪ್ರಶ್ಮಿಸಿದ್ದಾರೆ.
ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಥಳಿಸಿದ ಆರೋಪಿಗಳು
ಸಂಜೆಯಾಗಿದೆ, ದೀಪ ಬೆಳಗಿದ ನಂತರ ದೇವಸ್ಥಾನದಲ್ಲಿ ಧ್ವನಿವರ್ಧಕ ಮೊಳಗುತ್ತದೆ ಎಂದು ಅಜಿತ್ಜಿ ಸ್ಪಷ್ಟನೆ ನೀಡಿದ್ದಾರೆ. ಇದಾದ ನಂತರ ಅಲ್ಲಿಂದ ಹೊರಟ ಸದಾಜಿ ಠಾಕೂರ್ ಸ್ವಲ್ಪ ಸಮಯದ ನಂತರ ಆರು ಜನರೊಂದಿಗೆ ಅಜಿತ್‌ಜಿಯ ಮನೆಗೆ ತಲುಪಿದ್ದಾರೆ. ಅಲ್ಲಿ ಎಲ್ಲರೂ ಸೇರಿ ಅಜಿತ್‌ಜಿ ಮತ್ತು ಜಸ್ವಂತ್‌ಜೀ ಅವರನ್ನು ಥಳಿಸಿ ತೀವ್ರವಾಗಿ ಗಾಯಗೊಳಿಸಿದರು. ಆರೋಪಿಗಳು ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಸಹೋದರರಿಬ್ಬರಿಗೂ ಗಂಭೀರ ಗಾಯಗಳಾಗುವಂತೆ ಥಳಿಸಿದ್ದಾರೆ. ಈ ದಾಳಿಯಲ್ಲಿ ಜಸ್ವಂತ್‌ಜಿ ಮತ್ತು ಅಜಿತ್‌ಜಿ ತೀವ್ರವಾಗಿ ಗಾಯಗೊಂಡಿದ್ದರು.
ಘಟನೆ ಕುರಿತುಪೊಲೀಸರಿಗೆ ಮಾಹಿತಿ ನೀಡಿದ್ದರು ಮೃತನ ತಾಯಿ
ಈ ವೇಳೆ ಸ್ಥಳದಲ್ಲಿದ್ದ ಅಜಿತ್‌ಜಿ ಹಾಗೂ ಜಸ್ವಂತ್‌ಜೀ ಅವರ ತಾಯಿ ಹಂಸಾ ಬೆನ್ ಅವರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಮೆಹ್ಸಾನಾದಿಂದ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಯಿತು. ಇಲ್ಲಿಗೆ ತಲುಪಿದ ನಂತರ ವೈದ್ಯರು ಜಸ್ವಂತ್‌ಜಿ ಠಾಕೂರ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
ಪೊಲೀಸರು 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಸದಾಜಿ ಠಾಕೂರ್, ವಿಷ್ಣುಜಿ ಠಾಕೂರ್, ಬಾಬೂಜಿ ಠಾಕೂರ್, ಜಯಂತಿಜಿ ಠಾಕೂರ್, ಜವಾಂಜಿ ಠಾಕೂರ್ ಮತ್ತು ವಿನೋದ್‌ಜಿ ಠಾಕೂರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
