* ಕಾರ್ಖಾನೆಗಳಿಂದ ಸಂಗ್ರಹಿಸಿದ ಸ್ಟೀಲ್‌ನಿಂದ ರಸ್ತೆ ನಿರ್ಮಾಣ* ಗುಜರಾತ್‌ನಲ್ಲಿ ಮೊದಲ ‘ಸ್ಟೀಲ್ ರೋಡ್’* ಮಳೆಯಿಂದ ಹಾನಿಯಾಗುವುದಿಲ್ಲ, ಹೆಚ್ಚು ಕಾಲ ಬಾಳಿಕೆ
ನವದೆಹಲಿ(ಮಾ.27): ಸ್ಟೀಲ್ ತ್ಯಾಜ್ಯ ಬಳಸಿ ಗುಜರಾತ್‌ನ ಸೂರತ್‌ನಲ್ಲಿ 1 ಕಿ.ಮೀ ಉದ್ದದ ಸ್ಟೀಲ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ಇತರ ರಸ್ತೆಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವುದಲ್ಲದೇ, ಮಳೆಯಿಂದಲೂ ಹಾನಿಗೊಳಗಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇಂಥ ತ್ಯಾಜ್ಯ ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಚಿಂತಿಸಲಾಗಿದೆ.
ದೇಶದಲ್ಲಿ ಪ್ರತಿ ವರ್ಷ 1.9 ಕೋಟಿ ಟನ್ ಸ್ಟೀಲ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇಂಥ ತ್ಯಾಜ್ಯ ಬಳಸಿಕೊಂಡೇ ಗುಜರಾತ್‌ನ ಹಾಜಿರಾ ಕೈಗಾರಿಕಾ ವಲಯದಲ್ಲಿ ಸುಮಾರು 1 ಕಿ.ಮೀ. ಉದ್ದದ 6 ಪಥಗಳ ರಸ್ತೆ ನಿರ್ಮಾಣ ಮಾಡಲಾಗಿದೆ. ಸಿಎಸ್‌ಐಆರ್ ಮತ್ತು ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಗಳು ರಾಷ್ಟ್ರೀಯ ಉಕ್ಕು ಸಚಿವಾಲಯದ ಮತ್ತು ನೀತಿ ಆಯೋಗದ ಸಹಕಾರದೊಂದಿಗೆ ಈ ರಸ್ತೆ ನಿರ್ಮಾಣ ಮಾಡಿವೆ. ಪ್ರಾಯೋಗಿಕ ಯೋಜನೆ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಸ್ಟೀಲ್ ರಸ್ತೆಗಳನ್ನು ನಿರ್ಮಾಣದ ಯೋಜನೆ ರೂಪಿಸಲಾಗಿದೆ.
ದೇಶದಲ್ಲಿ ಪ್ರತಿವರ್ಷ 1.9 ಕೋಟಿ ಟನ್‌ನಷ್ಟುಸ್ಟೀಲ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. 2030ರವರೆಗೆ ಸುಮಾರು 5 ಕೋಟಿ ಟನ್ ತ್ಯಾಜ್ಯ ಉತ್ಪಾದನೆಯಾಗುವ ಸಾಧ್ಯತೆ ಇದೆ. ಹಾಗಾಗಿ ಉಂಟಾಗುತ್ತಿರುವ ತ್ಯಾಜ್ಯ ಬೆಟ್ಟವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ.