ರಾಜ್ಯಸಭೆ ಚುನಾವಣೆಗೂ ಮುನ್ನ ರಾಜೀನಾಮೆ ಕೊಟ್ಟ ಮೂವರು ಕೈ ಶಾಸಕರು

ರಾಜ್ಯಸಭಾ ಚುನಾವಣೆ ಎದುರಾಗಿರುವಾಗ ಪಕ್ಷಾಂತರ ಪರ್ವವೂ ಶುರುವಾಗಿದೆ. ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಹೊರಬಂದಿದ್ದು ಅವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಹಾರ್ದಿಕ್ ಗುಡುಗಿದ್ದಾರೆ.

Gujarat Congress MLAs have quit party in as many days ahead of the Rajya Sabha elections

ಅಹಮದಾಬಾದ್(ಜೂ. 07)  ಕರ್ನಾಟಕದಲ್ಲಿಯೂ ಬಂಡಾಯದ ಕೂಗು ಕೇಳಿಬಂದಿದ್ದು ಒಳಗಿಂದ ಒಳಗೆ ಹೊಗೆಯಾಡುತ್ತಲೇ ಇದೆ.  ಹಿಂದೊಮ್ಮೆ ಒಂದಿಷ್ಟು ಶಾಸಕರು ರಾಜೀನಾಮೆ ನೀಡಿ ಪಕ್ಷಾಂತರವನ್ನೂ ಮಾಡಿ ಗೆದ್ದು ಬಂದು ಈಗ ಸಚಿವರಾಗಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ನಾಯಕರೊಬ್ಬರು ವಿವಾದಕ್ಕೆ ಗುರಿಮಾಡುವ ಹೇಳಿಕೆಯನ್ನು ತಣ್ಣಗೆ ನೀಡಿದ್ದಾರೆ.

ಸಿದ್ದರಾಮಯ್ಯರಿಂದ ಪ್ರಧಾನಿ ನರೇಂದ್ರ ಮೋದಿಗೊಂದು ಪತ್ರ

ಪಕ್ಷಾಂತರ ಮಾಡಿದ ಶಾಸಕರನ್ನು ಸಾರ್ವಜನಿಕರು ಚಪ್ಪಲಿಗಳಿಂದ ಹೊಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್  ಗುಡುಗಿದ್ದಾರೆ.  ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನಲ್ಲಿ ಕೆಲ ಶಾಸಕರು  ಬಿಜೆಪಿ ಸೇರಿದ್ದಾರೆ ಎಂದು ವರದಿಯಾಗುತ್ತಿದ್ದು ಇದಕ್ಕೆ ಪಟೇಲ್ ನೀಡಿದ ಖಾರವಾದ ಪ್ರತಿಕ್ರಿಯೆ ಇದೆ.

ಬಿಜೆಪಿ ಒಂದು ತಿಂಗಳಿನಿಂದ ಕುದುರೆ ವ್ಯಾಪಾರ ಜೋರಾಗಿ ನಡೆಸುತ್ತಿದೆ.  ಒಂದು ಶಾಸಕನ ತಲೆಗೆ 140 ಕೋಟಿ ರೂ.ಗಳಿಂದ 150 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎಂದು ದೂರಿರುವ ಪಟೇಲ್ ಇದೇ ಹಣವನ್ನು ವೆಂಟಿಲೇಟರ್‌  ಖರೀದಿಸಲು ಖರ್ಚು ಮಾಡಿದ್ದರೆ ಜೀವ ಉಳಿಸಬಹುದಿತ್ತು ಎಂದು ವ್ಯಂಗ್ಯದ ಚಾಟಿ ಬೀಸಿದ್ದಾರೆ..

ರಾಜ್ಯ ನಾಯಕರಿಗೆ ಗೊತ್ತಾಗದಂತೆ ಖರ್ಗೆ ಹೆಸ್ರು ಘೋಷಣೆ: ಹೈಕಮಾಂಡ್ ಲೆಕ್ಕಾಚಾರ ಹೀಗಿದೆ!

ದುರಾಸೆಯಿಂದ ಮಾತೃ ಪಕ್ಷ ತೊರೆದು ಹೋದವರು ಜನರ ನಂಬನಿಕೆಗೆ ಅರ್ಹರಲ್ಲ ಅಂಥವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಗುಡುಗಿದ್ದಾರೆ. "ಚುನಾವಣೆಗೆ ಮುಂಚಿತವಾಗಿ ಅವರೇಕೆ ರಾಜೀನಾಮೆ ನೀಡುತ್ತಿದ್ದಾರೆ? ಎಲ್ಲವನ್ನೂ ತಿಳಿದಿದ್ದರೂ ಚುನಾವಣಾ ಆಯೋಗವೂ ಮೌನವಾಗಿದೆ. ಬಿಜೆಪಿ ಬಹುಮತ ಸಾಧಿಸಲು ಸಲ್ಲದ ದಾರಿ ಹಿಡಿದಿದೆ ಎಂದು ಆರೋಪಿಸಿದ್ದಾರೆ.

ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮೂವರು ಶಾಸಕರು ಗುಜರಾತ್ ನಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಇದಾದ ಮೇಲೆ ಅಲ್ಲಿನ ಕಾಂಗ್ರೆಸ್ ತಮ್ಮ ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಇಟ್ಟಿದೆ. ಇನ್ನು ಇಬ್ಬರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. 
 

Latest Videos
Follow Us:
Download App:
  • android
  • ios