ರಾಜ್ಯ ನಾಯಕರಿಗೆ ಗೊತ್ತಾಗದಂತೆ ಖರ್ಗೆ ಹೆಸ್ರು ಘೋಷಣೆ: ಹೈಕಮಾಂಡ್ ಲೆಕ್ಕಾಚಾರ ಹೀಗಿದೆ!

First Published Jun 7, 2020, 7:28 PM IST

ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ, ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು  ಹೈಕಮಾಂಡ್  ಘೋಷಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಶಾಕ್ ಆಗಿದೆ. ಖರ್ಗೆ ಹೆಸರು ಪ್ರಕಟ ಮಾಡುವಾಗ ಹೈಕಮಾಂಡ್, ರಾಜ್ಯ ನಾಯಕ ಸಲಹೆ ಕೇಳಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸದೆ ಹೈಕಮಾಂಡ್ ತೆಗೆದುಕೊಂಡಿರುವ ಏಕೈಕ ನಿರ್ಧಾರವಿದು. ಸೋನಿಯಾ ತೆಗೆದುಕೊಂಡ ನಿರ್ಧಾರದ ಈ ಹಿಂದಿನ ಲೆಕ್ಕಾಚಾರ ಹೀಗಿದೆ!