Asianet Suvarna News Asianet Suvarna News

ಗುಜರಾತ್ ಭಯೋತ್ಪಾದನಾ ನಿಗ್ರಹದಳದಿಂದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ!

  • ತಮ್ಮ ಎನ್‌ಜಿಒಗೆ ವಿದೇಶ ಮೂಲಗಳಿಂದ ಹಣ 
  • ಬಂಧನದ ಹಿಂದೆ ಥಳುಕು ಹಾಕಿದ  ಗುಜರಾತ್ ಗಲಭೆ 
  • ಮುಂಬೈನಲ್ಲಿ ವಶಕ್ಕೆ ಪಡೆದ ಗುಜರಾಟ್ ಎಟಿಎಸ್
Gujarat ATS arrest activist Teesta Setalvad from mumbai house connection with NGO foreign fund case ckm
Author
Bengaluru, First Published Jun 25, 2022, 8:19 PM IST

ಮುಂಬೈ(ಜೂ.25): ಗುಜರಾತ್ ಗಲಭೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ನಿವಾಸಕ್ಕೆ ತೆರಳಿದ ಎಟಿಎಸ್ ತೀಸ್ತಾ ಸೆಟಲ್ವಾಡ್ ಅರೆಸ್ಟ್ ಮಾಡಿದ್ದಾರೆ.

2022ರ ಗುಜರಾತ್ ಗಲಭೆ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಎನ್‌ಜಿಒ ನಡೆಸುತ್ತಿದ್ದಾರೆ. ಈ ಎನ್‌ಜಿಒಗೆ ವಿದೇಶಗಳಿಂದ ಅಕ್ರಮವಾಗಿ ಹಣ ಬಂದಿದೆ. ಈ ಕುರಿತು ತನಿಖೆ ನಡೆಸಿದ ಗುಜರಾತ್ ಭಯೋತ್ಪದನಾ ನಿಗ್ರಹ ದಳ ಇಂದು ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದೆ.

 

 

ಗುಜರಾತ್ ಗಲಭೆ ಬಗ್ಗೆ ಅಮಿತ್ ಶಾ ಮಾತು: ಮೋದಿ ನೋವನ್ನು ನಾನು ಹತ್ತಿರದಿಂದ ನೋಡಿದ್ದೇನೆ!

ಗುಜರಾತ್ ಗಲಭೆ ಸಂತ್ರಸ್ತರಿಗೆ ತೀಸ್ತಾ ಸೆಟಲ್ವಾಡ್ ನಡೆಸುತ್ತಿರುವ ಎನ್‌ಜಿಒ ಆಧಾರ ರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದರ ಬೆನ್ನಲ್ಲೇ ಎಟಿಎಸ್ ತೀಸ್ತಾ ಅವರನ್ನು ಬಂಧಿಸಿದೆ. ಇದು ರಾಜಕೀಯ ಪ್ರೇರಿತ ಎಂದು ತೀಸ್ತಾ ಆರೋಪಿಸಿದ್ದಾರೆ. 

ಗುಜರಾತ್ ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದರು. ಗುಜರಾತ್ ಗಲಭೆ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಸೂಚನೆ ಮೇರೆಗೆ ನಡೆದಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ತಿರಸ್ಕರಿಸಿತ್ತು. ಇಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು.  

2002 ಗುಜರಾತ್‌ ಹಿಂಸಾಚಾರದ ವೇಳೆ ನಡೆದಿದ್ದೇನು? ಸಂದರ್ಶನದಲ್ಲಿ ಮೌನ ಮುರಿದ ಗೃಹ ಸಚಿವ ಅಮಿತ್ ಶಾ!

ಈ ಪ್ರಕರಣದ ಕುರಿತು ಹೇಳಿಕೆ ನೀಡಿದ ಅಮಿತ್ ಶಾ ಜಾಕಿಯಾ ಜಾಫ್ರಿ ಅವರ ಭಾವನೆಗಳೊಂದಿಗೆ ತೀಸ್ತಾ ಸೆಟಲ್ವಾಡ್ ಆಟವಾಡಿದ್ದಾರೆ. ಜಾಕಿಯಾ ಅರ್ಜಿ ಸಲ್ಲಿಕೆ ಹಿಂದೆ ತೀಸ್ತಾ ಸೆಟಲ್ವಾಡ್ ಕೈವಾಡವಿದೆ ಎಂದು ಅಮಿತ್ ಶಾ ಹೇಳಿದ್ದರು. ಇತ್ತ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆಧಾರ ರಹಿತ ಮಾಹಿತಿ ನೀಡಿದ್ದಾರೆ ಎಂದು ಶಾ ಹೇಳಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಜಾಕಿಯಾ ಜಾಫ್ರಿ ಬೇರೆಯವರ ಸೂಚನೆಯಂತೆ ನಡೆದುಕೊಂಡಿದ್ದಾರೆ ಅನ್ನೋ ಅಂಶವನ್ನು ಉಲ್ಲೇಖಿಸಿದೆ.

ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್ ಬಂಧನವಾಗಿದೆ. ಸದ್ಯ ಸಾಂತಾಕ್ರೂಸ್ ಪೊಲೀಸ್ ಠಾಣೆಗೆ ಕರೆದೊಯ್ದಿರುವ ಪೊಲೀಸರು ಪ್ರಾಥಮಿಕ ವಿಚಾರಣೆ ಹಾಗೂ ಕಾನೂನಾತ್ಮಕ ಪಕ್ರಿಯೆ ಮುಗಿದ ಬಳಿಕ ಅಹಮ್ಮದಾಬಾದ್‌ಗೆ ಕರೆದುಕೊಂಡು ಹೋಗಲಿದ್ದಾರೆ.

ಇತ್ತ ತೀಸ್ತಾ ಸೆಟಲ್ವಾಡ್ ಪರ ವಕೀಲರು ಗುಜರಾತ್ ಎಟಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಎಟಿಎಸ್ ಪೊಲೀಸರು ಮನೆಗೆ ನುಗ್ಗಿ ತೀಸ್ತಾ ಸೆಟಲ್ವಾಡ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ತೀಸ್ತಾ ಬಂಧನ ಬೆನ್ನಲ್ಲೇ ಇದೀಗ ರಾಜಕೀಯ ಕೆಸರೆಚಾಟವೂ ಜೋರಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios