ಶಾಲಾ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಶನಿವಾರ ಹಾಗೂ ಭಾನುವಾರ ನೆಚ್ಚಿನ ದಿನ. ಕಾರಣ ಈ ಎರಡು ದಿನ ರಿಲಾಕ್ಸ್ ಮೂಡ್. ಆದರೆ ಸೋಮವಾರ ಬಂತು ಅಂದರೆ ಸಾಕು ಎಲ್ಲರಿಗೂ ಒಂದೂ ರೀತಿಯಲ್ಲಿ ಉದಾಸಿನ, ಆತಂಕ, ಒತ್ತಡ..ಹೀಗೆ ಒಂದೆರಡಲ್ಲ. ಇದೀಗ ಇದೇ ಸೋಮವಾರ ವಾರದ ಅತ್ಯಂತ ಕೆಟ್ಟದಿನ ಎಂದು ಅಧಿಕೃತ ಹಣೆಪಟ್ಟಿ ಹೊತ್ತಿದೆ.

ನವದೆಹಲಿ(ಅ.18): ಶಾಲೆಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ಕೆಲಸಕ್ಕೆ ಹಾಜರಾಗುವ ವೃತ್ತಿಪರರಲ್ಲಿ ವಾರದ 7 ದಿನಗಳಲ್ಲಿ ನಿಮಗೆ ಯಾವ ದಿನ ಇಷ್ಟ ಅಂದರೆ ಎಲ್ಲರ ಉತ್ತರ ಭಾನುವಾರ, ಇನ್ನು ಕೆಲವರಿಗೆ ಶನಿವಾರ ಹಾಗೂ ಭಾನುವಾರ. ಕಾರಣ ಇದು ವೀಕೆಂಡ್ ಹಾಗೂ ರಜಾ ದಿನ. ಸೋಮವಾರದ ವಿಚಾರ ಹೇಳುವುದೇ ಬೇಡ. ವೀಕೆಂಡ್ ಮೂಡ್‌ನಿಂದ ಮತ್ತೆ ಕೆಲಸಕ್ಕೆ ಹಾಜರಾಗಲು, ಉತ್ಸಾಹದಿಂದ ವೃತ್ತಿಯಲ್ಲಿ ಪಾಲ್ಗೊಳ್ಳಲು ಅಥವಾ ಶಾಲೆಯಲ್ಲಿ ತರಗತಿಗಳನ್ನು ಕೇಳಲು ಕಷ್ಟ. ಹೀಗಾಗಿ ಸೋಮವಾರ ಹೆಚ್ಚಿನವರಿಗೆ ಇಷ್ಟವಾಗೋದಿಲ್ಲ. ಇದೀಗ ವಾರದಲ್ಲಿ ಸೋಮವಾರ ಅತ್ಯಂತ ಕೆಟ್ಟ ದಿನ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧಿಕೃತವಾಗಿ ಘೋಷಿಸಿದೆ. ಇನ್ಮುಂದೆ ಸೋಮವಾರ ಕೆಟ್ಟದಿನವಾಗಿ ಗುರುತಿಸಲ್ಪಡುತ್ತದೆ.

ವೀಕೆಂಡ್ ಬಳಿಕ ಹಲವರು ಸೋಮವಾರ ಕೆಲಸಕ್ಕೆ ಹಾಜರಾಗುವುದೇ ಇಲ್ಲ. ಇನ್ನು ಹಾಜರಾದವರು ನಿಧಾನವಾಗಿ ಕೆಲಸ ಮಾಡುತ್ತಾರೆ. ಇನ್ನೂ ಕೆಲವರಿಗೆ ಆಸಕ್ತಿ ಇರುವುದಿಲ್ಲ. ಹೀಗಾಗಿ ಕಳೆದ ಕೆಲ ದಿನಗಳಿಂದ ಸೋಮವಾರದ ಕುರಿತು ಭಾರಿ ಚರ್ಚೆಗಳು ನಡೆದಿದೆ. ಹಲವರು ಸೋಮವಾರವನ್ನು ಉಫ್ ದಿನವಾಗಿ ಹೆಸರಿಸಲು ಸೂಚಿಸಿದ್ದರು. ಕಾರಣ ಈ ದಿನ ಕೆಲಸ ಮಾಡುವವರು ಉಸ್ಸಾಪ್ಪ ಅಂತಾರೆ. ಯಾಕಪ್ಪ ಕೆಲಸ ಎಂದು ಎಲ್ಲರನ್ನು ಬೈದುಕೊಳ್ಳುತ್ತಾ ಕೆಲಸ ಮಾಡುತ್ತಾರೆ. ಹೀಗಾಗಿ ಉಫ್ ದಿನವಾಗಿ ಹೆಸರಿಡಿ ಎಂದು ಸೂಚಿಸಿದ್ದರು. 

Monday Astro Tips: ಸೋಮವಾರ ಈ ಕೆಲಸ ಮಾಡಿ ಕೈ ತುಂಬಾ ಹಣ ಎಣ್ಸಿ

ಸೋಮವಾರವನ್ನು ವೀಕೆಂಡ್ ದಿನಕ್ಕೆ ಸೇರಿಸಿ ಎಂದು ಅತೀ ಹೆಚ್ಚಿನವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಶನಿವಾರ, ಭಾನುವಾರ ಹಾಗೂ ಸೋಮವಾರನ್ನು ವೀಕೆಂಡ್ ದಿನವನ್ನಾಗಿ ಮಾಡಿ. ಇದರಿಂದ ಎಲ್ಲರೂ ಸೋಮವಾರವನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ ಎಂದು ಸೂಚಿಸಿದ್ದರು. ಇದಕ್ಕೆ ಹೀಗೆ ಮಾಡುತ್ತಾ ಹೋದರೆ ವಾರದ ಎಲ್ಲಾ ದಿನಗಳು ವೀಕೆಂಡ್ ಆಗಲಿದೆ. ಹೀಗಾಗಿ ಇದು ಬೇಡ. ಸೋಮವಾರವನ್ನು ಅರ್ಧ ದಿನ ಮಾಡಿ ಎಂದು ಹಲವರು ಸೂಚಿಸಿದ್ದರು.

ಎಲ್ಲಾ ಚರ್ಚೆಗಳ ಬಳಿಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇದೀಗ ಸೋಮವಾರವನ್ನು ವಾರದ ಅತ್ಯಂತ ಕೆಟ್ಟದಿನ ಎಂದು ಘೋಷಿಸಿದೆ. ಟ್ವಿಟರ್ ಮೂಲಕ ಸೋಮವಾರ ವಾರದ ಕೆಟ್ಟ ದಿನ ಎಂದು ಗಿನ್ನೆಸ್ ವಿಶ್ವ ದಾಖಲೆ ಸಮಿತಿ ಅಧಿಕೃತವಾಗಿ ಘೋಷಿಸಿದೆ. ಇದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಸೋಮವಾರವನ್ನು ಕೆಟ್ಟ ದಿನ ಎಂದು ಘೋಷಿಸುವ ಮೂಲಕ ಯಾರೆಲ್ಲಾ ಇದೇ ದಿನ ತಮ್ಮ ಕನಸು ನನಸು ಮಾಡಲು ಕಾಯುತ್ತಿರುತ್ತಾರೋ ಅವರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದಾರೆ. 

ಅವಿವಾಹಿತೆಯರು ಶೀಘ್ರ ವಿವಾಹಕ್ಕಾಗಿ ಶ್ರಾವಣ ಸೋಮವಾರ ಈ ರೀತಿ ಮಾಡಿ..

ಆರೋಪ ಪ್ರತ್ಯಾರೋಪ , ಟೀಕೆಯ ನಡುವೆ ಇದೀಗ ಸೋಮವಾರ ವಾರದ ಅತ್ಯಂತ ಕೆಟ್ಟದಿನವಾಗಿದೆ. ಮಾನವನ ಆಸೆ, ಆಕಾಂಕ್ಷೆ, ಆಲಸ್ಯಕ್ಕೆ ಸೋಮವಾರದ ಮೇಲೆ ಆರೋಪ ಹೊರಿಸಲಾಗಿದೆ. ತಮ್ಮ ಆಲಸ್ಯಕ್ಕೆ ಸೋಮವಾರವನ್ನು ಯಾಕೆ ಬಲಿಕೊಟ್ಟಿದ್ದೀರಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.