ನವದೆಹಲಿ(ಫೆ.01): ಪ್ರೀತಿಗಾಗಿ ಏನೇನೋ ಮಾಡೋರು ಇರ್ತಾರೆ. ಉತ್ತರಾಖಂಡ್‌ನ ವರನೊಬ್ಬ ಮುಖದಲ್ಲಿ ಕಿರುನಗು ತುಂಬಿಕೊಂಡು ತನ್ನ ವಧುವನ್ನು ನೋಡಲು 4 ಕಿಲೋ ಮೀಟರ್ ಹಿಮದಲ್ಲಿ ಬರಗಾಲಲ್ಲಿ ನಡೆದಿದ್ದಾನೆ. ತನ್ನ ನೆಚ್ಚಿನ ವಧುವನ್ನು ವಿವಾಹವಾಗಲು ಹಿಮದ ಕಠಿಣ  ರಸ್ತೆಯಲ್ಲೇ ಯುವಕ ನಡೆದಿರುವ ನಡೆದಿರುವ ಘಟನೆ ಚಮೋಲಿಯಲ್ಲಿ ನಡೆದಿದೆ.

ವರ ತನ್ನ ಬಾರತ್‌ನೊಂದಿಗೆ ಹಿಮದಲ್ಲಿಯೇ ನಡೆದು ಹೋಗುತ್ತಿರುವ ಫೋಟೋವನ್ನು ಎಎನ್‌ಐ ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ. ಮುಖದಲ್ಲಿ ದೊಡ್ಡ ನಗು ತುಂಬಿಕೊಂಡು ಕೊಡೆ ಹಿಡಿದು ವರ ನಡೆಯುತ್ತಿರುವ ಚಿತ್ರ ಸದ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ತನ್ನ ಸ್ನೇಹಿತರೂ, ಸಂಬಂಧಿಕರ ಜೊತೆ 4 ಕಿಮೀ ನಡೆದು ಚಮೋಲಿಯ ಬಿಜ್ರಾದಲ್ಲಿರುವ ವಧುವಿನ ಮನೆಗೆ ತಲುಪಿದ್ದಾನೆ.

ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!

ಈ ಫೋಟೋವನ್ನು ಜನವರಿ 29ರಂದು ಪೋಸ್ಟ್ ಮಾಡಲಾಗಿದ್ದು, 7600ಕ್ಕೂ ಹೆಚ್ಚು ಲೈಕ್ ಮತ್ತು 1000  ಶೇರ್‌ ಪಡೆದಿದೆ. ಫೋಟೋವನ್ನು ಶೇರ್ ಮಾಡಿರುವ ನೆಟ್ಟಿಗರು ಇಂದಿಗೂ ಪ್ರಣಯ ಜೀವಂತವಾಗಿದೆ ಎಂದು ಬರೆದುಕೊಂಡಿದ್ದಾರೆ.