ಮದುವೆಗೂ ಕೆಲವೇ ಗಂಟೆ ಮುನ್ನ ಸೀರೆ ಜಗಳ, ವಧುವನ್ನೇ ಹತ್ಯೆಗೈದ ವರ ಪರಾರಿ, ಕಳೆದ ಒಂದೂವರೆ ವರ್ಷದಿಂದ ಇಬ್ಬರು ಲೀವಿಂಗ್ ಟುಗೆದರ್‌ನಲ್ಲಿದ್ದ ಈ ಜೋಡಿಯ ಕತೆ ಬಹುತೇಕ ಲೀವಿಂಗ್ ಟುಗೆದರ್ ಕತೆಗಿಂತ ಕೊಂಚ ಭಿನ್ನವಾಗಿದೆ.

ಭಾವನಗರ (ನ.16) ಮದುವೆಗೆ ಇನ್ನು ಕೆಲವೇ ಗಂಟೆಗಳ ಮಾತ್ರ ಬಾಕಿ ಇತ್ತು. ಎರಡು ಕುಟುಂಬಗಳ ವಿರೋಧದ ನಡುವೆ ಈ ಜೋಡಿ ಮದುವೆಗೆ ಸಜ್ಜಾಗಿತ್ತು. ಕಳೆದ ಒಂದೂವರೆ ವರ್ಷದಿಂದ ಲೀವಿಂಗ್ ಟುಗೆದರ್‌ನಲ್ಲಿದ್ದ ಈ ಜೋಡಿಯ ಅಂಡರ್‌ಸ್ಟಾಂಡಿಂಗ್ ಎಷ್ಟರ ಮಟ್ಟಿಗಿತ್ತು ಅನ್ನೋದು ಈ ದುರಂತ ಘಟನೆಯೇ ಸಾಕ್ಷಿಯಾಗಿದೆ. ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಆದರೆ ಕೊನೆ ಹಂತದಲ್ಲಿ ಸೀರೆ ಹಾಗೂ ಹಣದ ವಿಚಾರದಲ್ಲಿ ಭಾರಿ ಜಗಳ ಶುರುವಾಗಿದೆ. ಮದವೆಯಾಗಬೇಕಿದ್ದ ಭಾವಿ ಪತ್ನಿಯನ್ನು ವರ ಹತ್ಯೆ ಮಾಡಿದ್ದಾನೆ.ಬಳಿಕ ಸ್ಥಳದಿಂದ ಪರಾರಿಯಾದ ಘಟನ ಗುರಾತ್‌ನ ಭಾವನಗರದಲ್ಲಿ ನಡೆದಿದೆ.

ಏನಿದು ಸೀರೆ ಜಗಳ?

ಸಾಜನ್ ಭರೈಯ್ಯ ಹಾಗೂ ಸೋನಿ ಹಿಮ್ಮತ್ ರಾಥೋಡ್ ಇಬ್ಬರು ಲೀವಿಂಗ್ ಟುಗೆದರ್‌ನಲ್ಲಿ ಕಳೆದ ಒಂದೂವರೆ ವರ್ಷದಿಂದ ಜೊತೆಗಿದ್ದರು. ಎರಡು ಕುಟುಂಬದಲ್ಲಿ ಲೀವಿಂಗ್ ಟುಗೆದರ್, ಇವರ ಪ್ರೀತಗೆ ವಿರೋಧ ವ್ಯಕ್ತಪಡಿಸಿತ್ತು. ಭಾರಿ ವಿರೋಧದ ನಡುವೆ ಈ ಜೋಡಿ ಇತ್ತೀಚೆಗೆ ಎಂಗೇಜ್‌ಮೆಂಟ್ ಮುಗಿಸಿತ್ತು. ಮದುವೆ ತಯಾರಿ ಆರಂಭಿಸಿತ್ತು. ಶನಿವಾರ (ನ.15) ರಂದು ಸಂಜೆ ಈ ಜೋಡಿ ಆಪ್ತರು, ಗೆಳೆಯರ ಸಮ್ಮುಖದಲ್ಲಿ ಮದುವೆಯಾಗಲ ನಿರ್ಧರಿಸಿತ್ತು. ಇದಕ್ಕಾಗಿ ಮದುವೆ ಮಂಟಪ, ಊಟ, ಲಗ್ನಪತ್ನಿಕೆ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಹಲವು ಆಪ್ತರಿಗೆ ಲಗ್ನಪತ್ರಿಕೆ ಹಂಚಿದ್ದರು. ಶನಿವಾರ ಸಂಜೆಯಾಗುತ್ತಿದ್ದಂತೆ ಇಬ್ಬರಲ್ಲಿ ಸೀರೆ ವಿಚಾರದಲ್ಲಿ ಜಗಳ ಶುರುವಾಗಿದೆ

ಶನಿವಾರ ಸಂಜೆ ವೇಳೆ ಮದುವೆ ಮಹೋತ್ಸವ ನಿಗಧಿಯಾಗಿತ್ತು. ಲೀವಿಂಗ್ ಟುಗೆದರ್‌ನಲ್ಲಿದ್ದ ಈ ಜೋಡಿ ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ಮದುವೆಗೆ ಸಜ್ಜಾಗಿತ್ತು. ಆದರೆ ಇನ್ನೇನು ಮದುವೆಗೆ ಕೆಲ ಗಂಟೆ ಬಾಕಿ ಇರುವಾಗ ಸೀರೆ ವಿಚಾರದಲ್ಲಿ ಸಾಜನ್ ಭರೈಯ್ಯ ಜಗಳ ಶುರು ಮಾಡಿದ್ದಾನೆ.ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಇದರ ನಡುವೆ ಹಣದ ವಿಚಾರದಲ್ಲೂ ಜಗಳ ಶುರುವಾಗಿದೆ.

ಸೋನಿ ಮೇಲೆ ಹಲ್ಲೆ

ಜಗಳ ಜೋರಾಗುತ್ತಿದ್ದಂತೆ ಕಬ್ಬಿಣದ ರಾಡ್ ಮೂಲಕ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ಸೋನಿ ಸ್ಥಳಕ್ಕೆ ಮೃತಪಟ್ಟಿದ್ದಾಳೆ. ಬಳಿಕ ಮನೆಯ ವಸ್ತುಗಳನ್ನು, ಟಿವಿ ಸೇರಿದಂತೆ ಇತರ ವಸ್ತುಗಳನ್ನು ಸಾಜನ್ ಪುಡಿ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೋನಿ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ಇತ್ತ ಆರೋಪಿ ಸಾಜನ್ ಹುಡುಕಾಟ ಆರಂಭಿಸಿದ್ದಾನೆ. ಸಾಜನ್ ವಿರುದ್ಧ ಸ್ಥಳೀಯರು ಇದಕ್ಕಿಂತ ಮೊದಲೇ ದೂರು ನೀಡಿದ್ದರು. ಸ್ಥಳೀಯರ ಜೊತೆ ಜಗಳ, ಹಲ್ಲೆ ಮಾಡಿದ ದೂರು ದಾಖಲಾಗಿದೆ. ಇತ್ತ ಭಾವಿ ಪತ್ನಿಯ ಹತ್ಯೆ ಮಾಡಿದ ಪ್ರತ್ಯೇಕ ಪ್ರಕರಣ ದಾಖಲಾಗಿದೆ.