* ಕೊರೋನಾ ವೈರ​ಸ್‌ನ 2ನೇ ಅಲೆ ಇಳಿ​ಮು​ಖ​ವಾದರೂ ಎಚ್ಚರವಾಘಿರುವಂತೆ ಸೂಚನೆ* ಸೋಂಕು ಹೆಚ್ಚಿದರೆ ಕಂಟೈನ್ಮೆಂಟ್‌ ವಲಯ ಸೃಷ್ಟಿಗೆ ಮಾರ್ಗಸೂಚಿ* ಸೋಂಕು ನಿಯಂತ್ರ​ಣಕ್ಕೆ ಹೇರ​ಲಾ​ಗಿ​ರುವ ನಿರ್ಬಂಧ​ಗ​ಳನ್ನು ಎಚ್ಚ​ರಿ​ಕೆ​ಯಿಂದ ತೆರ​ವು​ಗೊ​ಳಿ​ಸ​ಬೇಕು ಎಂದು ಸೂಚನೆ

ನವ​ದೆ​ಹ​ಲಿ(ಜೂ.30): ಕೊರೋನಾ ವೈರ​ಸ್‌ನ 2ನೇ ಅಲೆ ಇಳಿ​ಮು​ಖ​ವಾ​ಗು​ತ್ತಿ​ರು​ವ ಹೊರ​ತಾ​ಗಿಯೂ, ರಾಜ್ಯ​ಗಳು ಕೊರೋನಾ ನಿರ್ಬಂಧಕ್ಕೆ ಹೇರ​ಲಾದ ನಿಯ​ಮಾ​ವ​ಳಿ​ಗ​ಳನ್ನು ಕಟ್ಟು​ನಿ​ಟ್ಟಾಗಿ ಜಾರಿ​ಗೊ​ಳಿ​ಸು​ವಂತೆ ರಾಜ್ಯ​ಗ​ಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸೋಂಕು ಹೆಚ್ಚಿದೆ ಕಂಟೈನ್ಮೆಂಟ್‌ ವಲಯ ಸೃಷ್ಟಿಸಬೇಕು ಹಾಗೂ ನಿರ್ಬಂಧ ಮುಂದುವರಿಸಬೇಕು ಎಂದು ನಿರ್ದೇಶಿಸಿದೆ.

ಜಿಲ್ಲೆ​ಗ​ಳನ್ನು ಆಡ​ಳಿ​ತಾ​ತ್ಮಕ ಘಟ​ಕ​ಗ​ಳ​ನ್ನಾಗಿ ಪರಿ​ಗ​ಣಿ​ಸಿ​ಕೊಂಡು ಕೊರೋನಾ ಸೋಂಕು, ಆಸ್ಪ​ತ್ರೆ​ಗ​ಳಲ್ಲಿ ಹಾಸಿ​ಗೆಯ ಲಭ್ಯತೆ ಬಗ್ಗೆ ರಾಜ್ಯ​ಗಳು ತೀವ್ರ ನಿಗಾ ವಹಿ​ಸ​ಬೇಕು. ಯಾವ ಭಾಗ​ದಲ್ಲಿ ಕೊರೋನಾ ಸೋಂಕು ಹೆಚ್ಚ​ಳ​ ಮತ್ತು ಆಸ್ಪ​ತ್ರೆ​ಗ​ಳಲ್ಲಿ ಹಾಸಿ​ಗೆ​ಗಳ ಬೇಡಿಕೆ ಹೆಚ್ಚು​ತ್ತಿ​ರುವ ಸುಳಿವು ಕಂಡ ಕೂಡಲೇ ಸರ್ಕಾ​ರ​ಗಳು ಕಾರ್ಯ​ಪ್ರ​ವೃತ್ತ​ರಾ​ಗ​ಬೇಕು. ಜೊತೆಗೆ ಅಗ​ತ್ಯ​ವಿ​ರುವ ಕ್ರಮ ಕೈಗೊ​ಳ್ಳ​ಬೇ​ಕು.

ಸೋಂಕು ನಿಯಂತ್ರ​ಣಕ್ಕೆ ಹೇರ​ಲಾ​ಗಿ​ರುವ ನಿರ್ಬಂಧ​ಗ​ಳನ್ನು ಎಚ್ಚ​ರಿ​ಕೆ​ಯಿಂದ ತೆರ​ವು​ಗೊ​ಳಿ​ಸ​ಬೇಕು ಎಂದು ರಾಜ್ಯ​ಗಳು ಮತ್ತು ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳಿಗೆ ರವಾ​ನಿ​ಸ​ಲಾದ ಮಾರ್ಗ​ಸೂ​ಚಿ​ಗ​ಳಲ್ಲಿ ತಿಳಿ​ಸ​ಲಾ​ಗಿದೆ. ಹೆಚ್ಚು ಕೇಸ್‌ ಮತ್ತು ಆಸ್ಪ​ತ್ರೆ​ಗ​ಳಲ್ಲಿ ಹಾಸಿ​ಗೆ​ಗಳ ಬೇಡಿಕೆ ಹೆಚ್ಚಿ​ರುವ ಜಿಲ್ಲೆ​ಗ​ಳಲ್ಲಿ ನಿರ್ಬಂಧ​ಗ​ಳನ್ನು ಮುಂದು​ವ​ರಿ​ಸ​ಬ​ಹುದು ಎಂದು ಸೂಚಿ​ಸ​ಲಾ​ಗಿದೆ.