ಕೊರೋನಾ ಆತಂಕದ ನಡುವೆ ವಾಹನ ಮಾಲಕರಿಗೆ ಗುಡ್‌ ನ್ಯೂಸ್!

ಕೊರೋನಾ ಹಿನ್ನೆಲೆ: ವಾಹನ ದಾಖಲೆಗಳು ಸೆ.30ರ ವರೆಗೆ ಮಾನ್ಯ| ಗುಡ್‌ ನ್ಯೂಸ್ ಕೊಟ್ಟ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ 

Govt further extends validity of motor vehicle related documents till September 30 2020

ನವದೆಹಲಿ(ಜೂ.10): ಕೊರೋನಾ ಸಂದಿಗ್ಧತೆಯಿಂದಾಗಿ ಈ ವರ್ಷ ಫೆಬ್ರವರಿ 1 ರಿಂದ ಅವಧಿ ಮುಗಿದಿರುವ ಪರವಾನಗಿ, ವಿಮೆ ಸಹಿತ ವಾಹನ ದಾಖಲೆಗಳ ಮಾನ್ಯತೆಯನ್ನು ಸೆ.30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಹಿಂದೆ ಜೂನ್‌ 30ರ ವರೆಗೆ ಅವಧಿ ವಿಸ್ತರಿಸಲಾಗಿತ್ತು. ಆದರೆ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಮತ್ತೆ ಮಾನ್ಯತಾ ಅವಧಿಯನ್ನು ಪರಿಷ್ಕರಿಸಲಾಗಿದೆ.

ಪಾರ್ಕಿಂಗ್ ಲಾಟ್‌ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಬೆಂಝ್

ಚಾಲನಾ ಪರವಾನಗಿ, ವಾಹನ ವಿಮೆ, ನೋಂದಣಿ ಪ್ರಮಾಣ ಪತ್ರ ಸೇರಿ ಎಲ್ಲಾ ರೀತಿಯ ವಾಹನ ದಾಖಲೆಗಳು ಸೆ.30ರ ವರೆಗೆ ಮಾನ್ಯವಾಗಿರಲಿದೆ ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios