ನವದೆಹಲಿ[ಡಿ.13]: 50 ಸಾವಿರ ಕೋಟಿ ರು. ಸಾಲದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಸಂಸ್ಥೆಯ ಶೇ.100 ರಷ್ಟುಪಾಲನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಿಮಾನಯಾನ ಸಂಸ್ಥೆ ದೀರ್ಘಕಾಲದಿಂದ ಭಾರೀ ನಷ್ಟ ಅನುಭವಿಸುತ್ತಿದೆ. ಇದರ ಪುನರುಜ್ಜೀವನಕ್ಕೆ ಸರ್ಕಾರ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇದರಿಂದ ಸಂಸ್ಥೆಯಲ್ಲಿನ ಸರ್ಕಾರದ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಲೋಕಸಭೆಗೆ ತಿಳಿಸಿದರು.

ನಾಗರಿಕರಿಗೆ ಉತ್ತಮ ಸೇವೆ ಸಿಗಲಿ ಎಂಬ ಸದುದ್ದೇಶದಿಂದ ಏರ್‌ ಇಂಡಿಯಾ ಸ್ಪೆಸಿಫಿಕ್‌ ಆಲ್ಟರ್‌ನೇಟಿವ್‌ ಮೆಕ್ಯಾನಿಸಂ(ಎಐಎಸ್‌ಎಎಂ) ಸ್ಥಾಪನೆ ಬಳಿಕ ಏರ್‌ ಇಂಡಿಯಾ ಸಂಸ್ಥೆಯನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಲು ನಿರ್ಧರಿಸಲಾಯಿತು.