Asianet Suvarna News Asianet Suvarna News

ಕೃಷಿಕರಿಗೊಂದು ಗುಡ್‌ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

* ಕೃಷಿ ಮಾಹಿ​ತಿ​ಗಾ​ಗಿ ಕನ್ನಡದಲ್ಲಿ ಆತ್ಮ​ನಿ​ರ್ಭರ ಕೃಷಿ ಆ್ಯಪ್‌ ಬಿಡುಗಡೆ

* ಯಾವ ಬೆಳೆ ಬೆಳೆಯಬೇಕು, ಹವಾ​ಮಾನ ಮುನ್ನೆ​ಚ್ಚ​ರಿ​ಕೆ​ಗ​ಳು, ವಿವಿಧ ಇಲಾ​ಖೆ​ಗ​ಳಿಂದ ಕ್ರೋಡೀ​ಕ​ರಿ​ಸಿದ ರೈತ​ರಿಗೆ ಸಂಬಂಧಿ​ಸಿದ ಮಾಹಿ​ತಿ​ಗಳು

* ಆ್ಯಂಡ್ರಾ​ಯಿಡ್‌ ಮತ್ತು ವಿಂಡೋಸ್‌ ಮೊಬೈ​ಲ್‌​ಗ​ಳಲ್ಲಿ ಬಳ​ಸ​ಬ​ಹು​ದಾದ ಆತ್ಮ​ನಿ​ರ್ಭರ ಕೃಷಿ ಆ್ಯಪ್‌ 

Government launches Atmanirbhar Krishi App for farmers pod
Author
Bangalore, First Published Jun 30, 2021, 11:10 AM IST

ನವ​ದೆ​ಹ​ಲಿ(ಜೂ.30): ಕೃಷಿ ಸಂಬಂಧಿತ ವಿಚಾ​ರ​ಗಳ ಕುರಿ​ತಾಗಿ ರೈತ​ರಿ​ಗೆ ಕನ್ನಡ ಸೇರಿ​ದಂತೆ 12 ಭಾಷೆ​ಗ​ಳಲ್ಲಿ ಮಾಹಿ​ತಿ ನೀಡುವ ಆತ್ಮ ನಿರ್ಭರ ಕೃಷಿ ಆ್ಯಪ್‌ ಅನ್ನು ಕೇಂದ್ರ ಸರ್ಕಾರ ಮಂಗ​ಳ​ವಾರ ಬಿಡು​ಗಡೆ ಮಾಡಿದೆ.

ಯಾವ ಬೆಳೆ ಬೆಳೆಯಬೇಕು, ಹವಾ​ಮಾನ ಮುನ್ನೆ​ಚ್ಚ​ರಿ​ಕೆ​ಗ​ಳು, ವಿವಿಧ ಇಲಾ​ಖೆ​ಗ​ಳಿಂದ ಕ್ರೋಡೀ​ಕ​ರಿ​ಸಿದ ರೈತ​ರಿಗೆ ಸಂಬಂಧಿ​ಸಿದ ಮಾಹಿ​ತಿ​ಗಳು ಪ್ರಸಾರ ಮಾಡುವ ರಾಷ್ಟ್ರೀಯ ಡಿಜಿ​ಟಲ್‌ ವೇದಿಕೆ ಕಿಸಾನ್‌ ಮಿತ್ರವು ಇನ್ನು ಆತ್ಮ ನಿರ್ಭರ ಕೃಷಿ ಆ್ಯಪ್‌​ನಲ್ಲಿ ರೈತ​ರಿಗೆ ಅರ್ಥ​ವಾ​ಗುವ ರೀತಿ​ಯಲ್ಲಿ ಲಭ್ಯ​ವಾ​ಗ​ಲಿದೆ.

ಆ್ಯಂಡ್ರಾ​ಯಿಡ್‌ ಮತ್ತು ವಿಂಡೋಸ್‌ ಮೊಬೈ​ಲ್‌​ಗ​ಳಲ್ಲಿ ಬಳ​ಸ​ಬ​ಹು​ದಾದ ಆತ್ಮ​ನಿ​ರ್ಭರ ಕೃಷಿ ಆ್ಯಪ್‌ ಮುಖಾಂತರ 12 ಭಾಷೆ​ಗ​ಳ​ಲ್ಲಿ ರೈತರು, ಸ್ಟಾರ್ಟ​ಪ್‌​ಗಳು, ಕೃಷಿ ವಿಜ್ಞಾನ ಕೇಂದ್ರ​ಗಳು, ಸ್ವಸ​ಹಾಯ ಗುಂಪು​ಗಳು ಮತ್ತು ಎನ್‌​ಜಿ​ಒ​ಗ​ಳಿಗೆ ಉಚಿ​ತ​ವಾಗಿ ಮಾಹಿ​ತಿ​ಗ​ಳನ್ನು ನೀಡ​ಲಾ​ಗು​ತ್ತದೆ.

ಇದ​ರಿಂದ ರೈತರು ಯಾವ ರೀತಿಯ ಬೆಳೆ ಬೆಳೆ​ಯ​ಬೇಕು, ಸಣ್ಣ ಹಿಡು​ವಳಿಗಳ ಯಾಂತ್ರಿ​ಕ​ರಣ, ಕೃಷಿ ತ್ಯಾಜ್ಯಕ್ಕೆ ಯಾವಾಗ ಬೆಂಕಿ ಹಚ್ಚ​ಬೇಕು ಎಂಬ ನಿರ್ಧಾರ ಕೈಗೊ​ಳ್ಳಲು ರೈತ​ರಿಗೆ ಅನು​ಕೂ​ಲ​ವಾ​ಗ​ಲಿದೆ. ಬೆಂಗಳೂರಿನ ಐಸಿಎಸ್‌ಟಿ ಸಂಸ್ಥೆ ಸಂಸ್ಥಾಪಕ ಟ್ರಸ್ಟಿರಾಜಾ ಶಿವ ಅವರು ಈ ಆ್ಯಪ್‌ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Follow Us:
Download App:
  • android
  • ios